Public News

News Subject: 
ಸಿಇಟಿ ಪರೀಕ್ಷೆಗೆ ಆನ್​ಲೈನ್ ಮೂಲಕ ಅರ್ಜಿ ಆಹ್ವಾನ; ಅಪ್ಲೈ ಮಾಡೋದು ಹೇಗೆ? ಇಲ್ಲಿದೆ
Upload Image: 
PublicNext--515360--node-nid
Category: 
Human Stories
Education
Body: 

ಬೆಂಗಳೂರು: ಸಾಮಾನ್ಯ ಪ್ರವೇಶ ಪರೀಕ್ಷೆ- 2021 (ಸಿಇಟಿ) ಬರೆಯಲು ಅರ್ಹ ವಿದ್ಯಾರ್ಥಿಗಳು ಆನ್​ಲೈನ್ ವಿಧಾನದ ಮೂಲಕ ಅರ್ಜಿ ಸಲ್ಲಿಸುವಂತೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕೇಳಿಕೊಂಡಿದೆ.

ಸರ್ಕಾರದ ಆದೇಶದಂತೆ ಇಂಜಿನಿಯರಿಂಗ್, ತಂತ್ರಜ್ಞಾನ, ಯೋಗ, ನ್ಯಾಚುರೋಪತಿ, ಬಿ ಫಾರ್ಮ್, 2ನೇ ವರ್ಷದ ಬಿ ಫಾರ್ಮ್, ಫಾರ್ಮಾ ಡಿ, ಕೃಷಿ ವಿಜ್ಞಾನ ಕೋರ್ಸ್​ಗಳ ಮತ್ತು ವೆಟರ್ನರಿ ಕೋರ್ಸ್​ಗಳ ಪ್ರವೇಶಕ್ಕಾಗಿ ನಡೆಯುವ ಪರೀಕ್ಷೆಯ ದಿನಾಂಕ ಈಗಾಗಲೇ ನಿಗದಿಯಾಗಿದೆ. ಪರೀಕ್ಷೆಯು ಆಗಸ್ಟ್ 28 ಮತ್ತು 29ರಂದು ನಡೆಯಲಿರುವ ಬಗ್ಗೆ ದಿನಾಂಕ ಘೋಷಿಸಲಾಗಿದೆ. ಇದೀಗ ಅರ್ಹ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು ಎಂದು ಪರೀಕ್ಷಾ ಪ್ರಾಧಿಕಾರ ತಿಳಿಸಿದೆ.

* ಅರ್ಜಿ ಸಲ್ಲಿಕೆಗೆ ಮತ್ತು ಹೆಚ್ಚಿನ ವಿವರಗಳಿಗೆ ಈ ಅಧಿಕೃತ ವೆಬ್​ಸೈಟ್​ಗೆ https://kea.kar.nic.in/ ಗೆ ಭೇಟಿ ನೀಡಿ.
* ಸಿಇಟಿ- 2021 ನೋಂದಣಿ ಹಾಗೂ ಆನ್​ಲೈನ್ ಮೂಲಕ ಅರ್ಜಿ ಸಲ್ಲಿಯು ಜೂನ್ 15ರ ಮಧ್ಯಾಹ್ನ 12 ಗಂಟೆಯಿಂದ ದಿನಾಂಕ 10-07-2021ರ ಸಂಜೆ 5.30ರ ವರೆಗೆ.
* ಆನ್​ಲೈನ್ ಮೂಲಕ ಶುಲ್ಕವನ್ನು ಪಾವತಿಸಲು ಕೊನೆಯ ದಿನಾಂಕ: 13-07-2021
* ವಿಶೇಷ ಪ್ರವರ್ಗಗಳ ಮೂಲ ಪ್ರಮಾಣ ಪತ್ರಗಳನ್ನು ನಿಗದಿತ ದಿನಾಂಕದಂದು ಸಲ್ಲಿಸುವುದು (ವೆಬ್​ಸೈಟ್​ನ ಇ-ಮಾಹಿತಿ ಪುಸ್ತಕದಲ್ಲಿ ನೀಡಿರುವ ವೇಳಾಪಟ್ಟಿಯಂತೆ : 14-07-2021 ರಿಂದ 20-07-2021
* ಆನ್​ಲೈನ್ ಮೂಲಕ ಸಲ್ಲಿಸಿದ ಅರ್ಜಿಯ ಮಾಹಿತಿಗಳನ್ನು ಅವಶ್ಯವಿದ್ದಲ್ಲಿ ತಿದ್ದುಪಡಿ ಮಾಡಿಕೊಳ್ಳುವುದು: ದಿನಾಂಕ 19-07-2021 ಬೆಳಗ್ಗೆ 11 ರಿಂದ 22-07-2021ರ ಸಂಜೆ 5.30ರವರೆಗೆ
* ಸಿಇಟಿ-2021 ಪ್ರವೇಶ ಪತ್ರಗಳನ್ನು ಡೌನ್​ಲೋಡ್ ಮಾಡಿಕೊಳ್ಳುವುದು: 13-08-2021 ಬೆಳಗ್ಗೆ 11 ರಿಂದ

Reach Count: 
25336