Kshetra Samachara

Local News Subject: 
ಮಂಗಳೂರು: ಗುಜ್ಜರಕೆರೆ - ಅರೆಕೆರೆ ಬೈಲಿನಲ್ಲಿ ಕಾರಂಜಿಯಂತೆ ಚಿಮ್ಮಿ ಮನೆಗೆ ಹರಿದ ಮ್ಯಾನ್ ಹೋಲ್ ನಲ್ಲಿ ಕೊಳಚೆ ನೀರು
City: 
Udupi
Mangalore
Video Thumbnail: 
PublicNext--515331--node-nid
Category: 
Infrastructure
Body: 

ಮಂಗಳೂರು: ನಗರದ ಗುಜ್ಜರಕೆರೆ - ಅರೆಕೆರೆ ಬೈಲು ಎಂಬಲ್ಲಿ ಮ್ಯಾನ್ ಹೋಲ್ ನಿಂದ ಕೊಳಚೆ ನೀರು ಕಾರಂಜಿಯಂತೆ ಚಿಮ್ಮಿ ಕೆಲವೊಂದು ಮನೆಗಳಿಗೆ ನುಗ್ಗಿ, ಅವಾಂತರ ಸೃಷ್ಟಿಯಾಗಿದೆ.

ಒಳಚರಂಡಿಯಿಂದ ಹರಿಯುತ್ತಿರುವ ಈ ಕೊಳಚೆ ನೀರಿನಿಂದ ರಸ್ತೆಯಲ್ಲಿ ನಡೆದು ಹೋಗುವ ಸ್ಥಳೀಯರಿಗೆ ತೊಂದರೆಯಾಗುತ್ತಿದೆ. ಅಲ್ಲದೆ ಮ್ಯಾನ್ ಹೋಲ್ ನ ಮುಚ್ಚಳ ತೆರೆದು ನೀರು ಕಾರಂಜಿಯಂತೆ ಹರಿದಿದೆ. ಈ ನೀರು ಕೆಲವೊಂದು ಮನೆಗಳಿಗೂ ನುಗ್ಗಿದೆ.

ಗುಜ್ಜರಕೆರೆ - ಅರೆಕೆರೆ ಬೈಲು ಪ್ರದೇಶದಲ್ಲಿ ಹಲವಾರು ವರ್ಷಗಳಿಂದ ಒಳಚರಂಡಿ ಸಮಸ್ಯೆ ತಲೆದೋರುತ್ತಿದ್ದು, ಜನಪ್ರತಿನಿಧಿಗಳು ಭರವಸೆ ಮಾತ್ರ ನೀಡುತ್ತಿದ್ದಾರೆ‌. ಆದರೆ ಯಾವುದೇ ಪ್ರಯೋಜನವಾಗಿಲ್ಲ. ಇಲ್ಲಿ ಡೆಂಗ್ಯು ಪ್ರಕರಣಗಳು ತಲೆದೋರಿದ್ದು, ಜನತೆಗೆ ರೋಗದ ಭೀತಿ ಉಲ್ಬಣವಾಗಿದೆ. ಆದ್ದರಿಂದ ಅಸಮರ್ಪಕ ಚರಂಡಿ ವ್ಯವಸ್ಥೆಗೆ ಶಾಶ್ವತ ಪರಿಹಾರ ಕಲ್ಪಿಸಬೇಕು ಎಂದು ಸ್ಥಳೀಯರು ಆಗ್ರಹಿಸುತ್ತಿದ್ದಾರೆ.

Reach Count: 
11882