Kshetra Samachara

Local News Subject: 
ಧಾರವಾಡ: ಜೂ.21ರಿಂದ ಮದುವೆಗಳಿಗೆ ಪರವಾನಿಗಿ ನೀಡಿದ ಡಿಸಿ
City: 
Hubballi-Dharwad
Upload Image: 
PublicNext--515280--node-nid
Category: 
Health & Fitness
Government
COVID
Body: 

ಧಾರವಾಡ: ಜಿಲ್ಲೆಯಾದ್ಯಂತ ಕೋವಿಡ್-19 ಸಾಂಕ್ರಾಮಿಕ ರೋಗ ತಡೆಗಟ್ಟುವ ಹಿನ್ನೆಲೆಯಲ್ಲಿ ಹಾಗೂ ಸಾರ್ವಜನಿಕರ ಆರೋಗ್ಯ ಕಾಪಾಡುವ ಹಿತದೃಷ್ಟಿಯಿಂದ ಜೂನ್ 14 ರಿಂದ 21ರವರೆಗೆ ಲಾಕ್‍ಡೌನ್ ಜಾರಿಯಲ್ಲಿದೆ. ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸಿ, ಜೂನ್ 21 ರಿಂದ ಜಿಲ್ಲೆಯಲ್ಲಿ ಆಯೋಜಿಸುವ ಮದುವೆಗಳಿಗೆ ಅನುಮತಿ ನೀಡಲಾಗುವುದು ಎಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ತಿಳಿಸಿದ್ದಾರೆ.

ಈ ಕುರಿತು ಇಂದು ಆದೇಶ ಹೊರಡಿಸಿರುವ ಅವರು, ಸಾರ್ವಜನಿಕರ ಹಿತದೃಷ್ಟಿಯಿಂದ ಮದುವೆ ಸಮಾರಂಭಗಳಿಗೆ ಅನುಮತಿ ನೀಡುವುದು ಅವಶ್ಯಕವಾಗಿದೆ. ಜೂನ್ 21 ರಿಂದ ಜರುಗಲಿರುವ ಮದುವೆ ಸಮಾರಂಭಗಳಿಗೆ ಗರಿಷ್ಠ 40 ಜನ ಮೀರದಂತೆ ಅವರ ಸ್ವ-ಗೃಹದ ಮುಂದೆ ಕೋವಿಡ್-19 ಮಾರ್ಗಸೂಚಿಯಂತೆ ಮದುವೆ ಸಮಾರಂಭಗಳನ್ನು ಜರುಗಿಸಲು ಜಿಲ್ಲೆಯಾದ್ಯಂತ ಅವಕಾಶ ಕಲ್ಪಿಸಲಾಗಿದೆ.

ಅನುಮತಿಗಾಗಿ www.supportdharwad.in ನೇದ್ದಕ್ಕೆ ಆಧಾರ ಕಾರ್ಡ್ ಹಾಗೂ ಮದುವೆ ಕಾರ್ಡ್ ನೊಂದಿಗೆ ಬೆಳಿಗ್ಗೆ 10 ಗಂಟೆಯಿಂದ ಸಂಜೆ 5-30 ರ ಒಳಗಾಗಿ ಮದುವೆ ಜರುಗುವ ಮೂರು ದಿನಗಳ ಮುಂಚಿತವಾಗಿ ಅರ್ಜಿ ಸಲ್ಲಿಸಿ, ಅನುಮತಿ ಪಡೆಯಬಹುದೆಂದು ಜಿಲ್ಲಾಧಿಕಾರಿ ನಿತೇಶ ಪಾಟೀಲ ಅವರು ಆದೇಶದಲ್ಲಿ ತಿಳಿಸಿದ್ದಾರೆ.

Reach Count: 
80749