Public News

News Subject: 
ಬೆಳಗಾವಿ- ಹುಲಿಯನ್ನು‌ ದತ್ತು ಪಡೆದ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್
Category: 
Politics
Human Stories
Body: 

ಬೆಳಗಾವಿ- ಅಳಿಯನ ಜನ್ಮದಿನದ ಪ್ರಯುಕ್ತ ಶೌರ್ಯ ಎಂಬ ಹೆಸರಿನ ಹುಲಿಯನ್ನು‌, ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ದತ್ತು‌ ತೆಗೆದುಕೊಂಡು ಸಂತಸ ವ್ಯಕ್ತಪಡಿಸಿದರು. ಇದೇ ವೇಳೆ ಕಿತ್ತೂರ ರಾಣಿಚನ್ನಮ್ಮ ಮೃಗಾಲಯದ ಕಾರ್ಯನಿರ್ವಾಹಕ ನಿರ್ದೇಶಕ ಹಾಗೂ ಉಪ ಅರಣ್ಯ ಸಂರಕ್ಷಣಾ ಅಧಿಕಾರಿಗಳಿಗೆ 1ಲಕ್ಷ ರೂ.ಗಳ ಚೆಕ್ ನ್ನು ಲಕ್ಷ್ಮೀ ಹೆಬ್ಬಾಳ್ಕರ್ ಹಸ್ತಾಂತರಿಸಿದರು.

ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಲಕ್ಷ್ಮೀ, ಮಹಾಮಾರಿ‌ ಕೊರೊನಾದಿಂದ ಲಾಕ್‌ಡೌನ್ ಆಗಿರುವ ಸಂದರ್ಭದಲ್ಲಿ ಮೃಗಾಲಯದಲ್ಲಿ ಪ್ರಾಣಿಗಳಿಗೆ ತುಂಬಾ ಕಷ್ಟ ಆಗುತ್ತಿದೆ. ಈ ಮೊದಲು ‌ಮೃಗಾಲಯಕ್ಕೆ ಜನರು ಬರುತ್ತಿದ್ದರು. ಆದರೀಗ ಕೊರೊನಾ‌ ಕಡಿಮೆ ಆಗಿದ್ದಾರೆ.ಹೀಗಾಗಿ ಆರ್ಥಿಕ‌ ತೊಂದರೆಗೆ ಸಿಲುಕಿರುವ ಮೃಗಾಲಯದಲ್ಲಿರುವ ಪ್ರಾಣಿಗಳನ್ನು ಸಾಕಣೆ ಮಾಡೊದು ಕಷ್ಟ ಆಗುತ್ತಿದೆ. ಹೀಗಾಗಿ ಇಂತಹ ಸಂದರ್ಭದಲ್ಲಿ ನನ್ನಿಂದ ಪ್ರಾಣಿಗಳಿಗೆ ಅನುಕೂಲ ಆಗಬೇಕೆಂಬುವುದರ ಜೊತೆಗೆ ಸಹೋದರ ಚೆನ್ನರಾಜ್ ಹಟ್ಟಿಹೊಳಿ‌ ಮಗನಾಗಿರುವ ಹರ್ಷ ಜನ್ಮದಿನದ ಪ್ರಯುಕ್ತ ಶೌರ್ಯ ಎಂಬ ಹೆಸರಿನ ಹುಲಿಯನ್ನು ದತ್ತು‌ ತೆಗೆದುಕೊಂಡಿದ್ದೇನೆ. ಅದರ ಸಂಪೂರ್ಣ ಜವಾಬ್ದಾರಿ ತೆಗೆದುಕೊಳ್ಳುತ್ತೇನೆ‌ ಎಂದರು.

ಇದಲ್ಲದೇ ಬೆಳಗಾವಿಯಲ್ಲಿ ಕಿತ್ತೂರ ರಾಣಿ ಚನ್ನಮ್ಮ ಮೃಗಾಲಯ ಆಗಿರೋದು ನಮ್ಮ ಹೆಮ್ಮೆ.ಹೀಗಾಗಿ ಜಿಲ್ಲೆಯಲ್ಲಿರುವ ಶ್ರೀಮಂತರು, ದಾನಿಗಳು‌ ಮುಂದೆಬಂದು ಪ್ರಾಣಿಗಳನ್ನು ಉಳಿಸುವ ಕೆಲಸಕ್ಕೆ ಮುಂದಾಗಬೇಕಿದೆ. ಆ ನಿಟ್ಟಿನಲ್ಲಿ ಪ್ರಕೃತಿ, ಮೃಗಾಲಯ ಉಳಿಸುಕೊಳ್ಳುವುದು‌ ನಮ್ಮ‌ ಕರ್ತವ್ಯ ಹಾಗಾಗಿ ಸಮಾಜಸೇವೆಯಲ್ಲಿ ತೊಡಗಿರುವ ಸಂಘಟನೆಗಳು ಮೃಗಾಲಯದಲ್ಲಿರುವ ಒಂದೊಂದು‌ ಪ್ರಾಣಿಗಳನ್ನು ದತ್ತು ಪಡೆದುಕೊಳ್ಳಬೇಕು ಎಂದು ಮನವಿ ಮಾಡಿಕೊಂಡರು.

Reach Count: 
68381