Kshetra Samachara

Local News Subject: 
ಪರ್ಕಳ: ರಾಷ್ಟ್ರೀಯ ಹೆದ್ದಾರಿ ಪಕ್ಕದಲ್ಲೇ ಭೂಕುಸಿತ- ಅಪಾಯಕ್ಕೆ ಆಹ್ವಾನ!
City: 
Udupi
Mangalore
Upload Image: 
PublicNext-475123-515152-Udupi-Mangalore-Others-node
Category: 
Others
Body: 

ಪರ್ಕಳ: ಉಡುಪಿಯ ಪರ್ಕಳ ಪೇಟೆಯಲ್ಲಿ ಮಾಜಿ ನಗರಸಭಾ ಸದಸ್ಯರ ಮನೆಯ ಎದುರೇ ಭೂಕುಸಿತ ಉಂಟಾಗಿದೆ. ರಾಷ್ಟ್ರೀಯ ಹೆದ್ದಾರಿಗಾಗಿ ತರಾತುರಿಯಲ್ಲಿ ಕಟ್ಟಡಗಳನ್ನು ಕೆಡವಿ ಅಗಲೀಕರಣ ಮಾಡಿದ ಜಾಗದಲ್ಲಿಯೇ ಭೂ ಕುಸಿತ ಕಂಡುಬಂದಿದ್ದು, ವಾಹನ ಚಾಲಕರು ಅಪ್ಪಿತಪ್ಪಿ ಪಕ್ಕಕ್ಕೆ ಚಲಿಸಿದರೆ ಹೊಂಡದ ಒಳಗೆ ಬೀಳುವುದು ಖಂಡಿತ.

ತರಾತುರಿಯಲ್ಲಿ ಒಕ್ಕಲೆಬ್ಬಿಸಿದ ಜಾಗದಲ್ಲಿ ಈ ಹಿಂದೆ ಬಾವಿಯಿತ್ತು ಎಂದು ಸ್ಥಳೀಯರು ತಿಳಿಸಿದ್ದಾರೆ. ಈಗಾಗಲೇ ಇಲ್ಲಿ ವಿದ್ಯುತ್ ದೀಪದ ವ್ಯವಸ್ಥೆ ಇಲ್ಲ. ಜನನಿಬಿಡ ಪ್ರದೇಶವಾಗಿರುವುದರಿಂದ ಬಸ್‌ ನಿಲುಗಡೆಯಾಗುವ ಜಾಗ ಕೂಡ ಈ ಪ್ರದೇಶವಾಗಿದೆ. ಕೂಡಲೇ ಗುತ್ತಿಗೆದಾರರು ಸಮರ್ಪಕವಾಗಿ ಕೆಲಸ ಮಾಡಬೇಕು. ತಡೆ ಬೇಲಿ ಹಾಕಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಬೇಕು ಎಂದು ಸ್ಥಳೀಯ ಸಮಾಜ ಸೇವಕ ಗಣೇಶ್ ರಾಜ್ ಸರಳಬೆಟ್ಟು ಜಿಲ್ಲಾಡಳಿತವನ್ನು ಒತ್ತಾಯಿಸಿದ್ದಾರೆ.

Reach Count: 
3336