Kshetra Samachara

Local News Subject: 
ಅನ್‌ಲಾಕ್‌ ಆಯ್ತು ಧಾರವಾಡ ಬನ್ರಪ್ಪಾ..!
City: 
Hubballi-Dharwad
Video Thumbnail: 
PublicNext--515115--node-nid
Category: 
Law and Order
Body: 

ಧಾರವಾಡ: ಹಾ ನಮಸ್ಕಾರ್ರಿ ಧಾರವಾಡ ಮಂದಿಗೆ.. ಧಾರವಾಡ ಜಿಲ್ಲಾ ಅಂತೂ ಇವತ್ತಿಂದ ಅನ್‌ಲಾಕ್ ಆಗೇತಿ. ಮಧ್ಯಾಹ್ನ 2 ಗಂಟೆಮಟಾ ಬೇಕಾದಂಗ ನಿಮಗ ನಿಮಗ ಬೇಕಾದ ಸಾಮಾನ ಖರೀದಿ ಮಾಡಬಹುದು ನೋಡ್ರಿ.

ಇವತ್ತಿಂದ ಧಾರವಾಡ ಸಾಮಾನ್ಯ ಸ್ಥಿತಿಗೆ ಬಂದಂಗ ಆಗೇತಿ ನೋಡ್ರಿ. ಧಾರವಾಡದ ಪ್ರಮುಖ ರಸ್ತೆಗಳಂತೂ ವಾಹನ ದಟ್ಟನೆಯಿಂದ ಸಂಪೂರ್ಣ ಜಾಮ್ ಆಗಿದ್ದು. ಇನ್ನ ಮಾರ್ಕೆಟ್ ಕಥಿ ಹೆಂಗ ಅತೀರೆನು? ಮಾರ್ಕೆಟ್‌ನ್ಯಾಗೂ ಹಂಗರೀ ಜನಾ ಫುಲ್ ಜಾಮ್ ಆಗಿದ್ರು. ಇನ್ನ ಸಿಗ್ನಲ್‌ಗಳಂತೂ ಇವತ್ತಿಂದ ಮತ್ತ ಕೆಲಸಾ ಚಾಲೂ ಮಾಡಿದ್ದು ನೋಡ್ರಿ.

ಮಧ್ಯಾಹ್ನ 2 ಗಂಟೆಮಟಾ ದಿನಸಿ, ತರಕಾರಿ, ಹಣ್ಣು, ಹಾಲು, ಮದ್ಯ, ಮಾಂಸ ಸೇರಿದಂಗ ಬೇರೆ ಬೇರೆ ವಸ್ತುಗಳ ಮಾರಾಟಾ ಮತ್ತ ಖರೀದಿಗೆ ಅವಕಾಶ ಮಾಡಿಕೊಟ್ಟಿದ್ರು. ಹಂಗ ಅಂತ ಹೇಳಿನ ಧಾರವಾಡ ಇವತ್ತ ಜನರಿಂದ ಫುಲ್ ಜಾಮ್ ಆಗಿತ್ತು. ಇನ್ನ ವಾಹನ ಸಂಚಾರಕ್ಕೆ ಯಾವುದೇ ನಿರ್ಬಂಧ ಹೇರಿರಲಿಲ್ಲ. ಕೊರೊನಾಗಿಂತ ಮೊದಲ ಧಾರವಾಡದಾಗ ಹೆಂಗ ವಾಹನಗಳು ಓಡ್ಯಾಡ್ತಿದ್ದವಲ್ಲಾ ಹಂಗ ಓಡ್ಯಾಡಾಕತ್ತಿದ್ದು. ಬಸ್ ಸಂಚಾರ ಮಾತ್ರ ಇರಲಿಲ್ಲ ನೋಡ್ರಿ. ಒಟ್ಟಿನಲ್ಲಿ ಹೇಳಬೇಕು ಅಂದ್ರ ಧಾರವಾಡ ಮತ್ತ ಸಹಜ ಸ್ಥಿತಿಗೆ ಬಂದಂಗ ಕಾಣಾಕತ್ತಿತ್ತ ನೋಡ್ರಿ ಪಾ.

Reach Count: 
137821