Kshetra Samachara

Local News Subject: 
ಹುಬ್ಬಳ್ಳಿ: ರಕ್ತದಾನಕ್ಕೂ ತಟ್ಟಿದ ಕೊರೋನಾ ಸಂಕಷ್ಟ: ತುರ್ತು ಚಿಕಿತ್ಸೆಗೆ ಸಿಗುತ್ತಿಲ್ಲ ರಕ್ತ...!
City: 
Hubballi-Dharwad
Video Thumbnail: 
PublicNext--515079--node-nid
Category: 
Health & Fitness
Body: 

ಹುಬ್ಬಳ್ಳಿ: ಕಿಲ್ಲರ್ ಕೊರೋನಾ ವೈರಸ್ ಎಲ್ಲ ವಲಯದಲ್ಲಿ ಕೂಡ ಸಮಸ್ಯೆಗಳನ್ನು ತಂದೊಡ್ಡಿದೆ. ಅಲ್ಲದೇ ಜೀವ ಉಳಿಸುವ ಜೀವ ರಕ್ಷಕ ರಕ್ತದಾನಕ್ಕೂ ಕೂಡ ಕೊರೋನಾ ಸಂಕಷ್ಟ ಎದುರಾಗಿದೆ.

ತುರ್ತು ಸಂದರ್ಭದಲ್ಲಿ ಶಸ್ತ್ರಚಿಕಿತ್ಸೆ ಚಿಕಿತ್ಸೆಗೆ ನೀಡುವ ರಕ್ತದ ಕೊರತೆ ಉಂಟಾಗಿದೆ. ಕೊರೋನಾ ಸಂದರ್ಭದಲ್ಲಿ ಯಾರಿಗಾದರೂ ರಕ್ತ ಬೇಕಾದರೇ ಯಾರಾದರೂ ದಾನಿಗಳು ರಕ್ತ ನೀಡುತ್ತಿದ್ದರು. ಇಲ್ಲವೇ ಬ್ಲಡ್ ಬ್ಯಾಂಕ್ ಗಳಲ್ಲಿ ಆದರೂ ರಕ್ತ ದೊರೆಯುತ್ತಿತ್ತು. ಪ್ರಸ್ತುತ ದಿನಮಾನಗಳಲ್ಲಿ ರಕ್ತದಾನಕ್ಕೆ ಕೂಡ ಈಗ ದಾನಿಗಳು ಹಿಂದೇಟು ಹಾಕುತ್ತಿದ್ದಾರೆ. ಇದರಿಂದ ಬ್ಲಡ್ ಬ್ಯಾಂಕ್ ಕೂಡ ಸಮರ್ಪಕವಾದ ರಕ್ತ ಸಂದಾಯವಾಗದೇ ಸಮಸ್ಯೆ ಎದುರಿಸುವಂತಾಗಿದೆ.

ಮೊದಲೆಲ್ಲ ಸಂಘಟನೆಗಳು ಸಾಮಾಜಿಕ ಹೋರಾಟದ ಸಂಸ್ಥೆಗಳು ರಕ್ತದಾನ ಶಿಬಿರಗಳನ್ನು ಮಾಡುವ ಮೂಲಕ ರಕ್ತವನ್ನು ದಾನ ಮಾಡುತ್ತಿದ್ದರು ಆದರೆ ಈಗ ಕಿಲ್ಲರ್ ಕೊರೋನಾ ಭಯದಿಂದ ಯಾರು ಕೂಡ ರಕ್ತದಾನಕ್ಕೆ ಮುಂದೆ ಬರುತ್ತಿಲ್ಲ. ಇದರಿಂದ ತುರ್ತ ಶಸ್ತ್ರಚಿಕಿತ್ಸೆಗೆ ರಕ್ತ ಒದಗಿಸಲು ಕೂಡ ಬಹುತೇಕ ಸಾಧ್ಯವಾಗುತ್ತಿಲ್ಲ ಎನ್ನುತ್ತಾರೆ ರಾಷ್ಟ್ರೋತ್ಥಾನ ರಕ್ತ ನಿಧಿ ಮುಖ್ಯಸ್ಥರು.

ಒಟ್ಟಿನಲ್ಲಿ ಕಿಲ್ಲರ್ ಕೊರೋನಾ ಬಂದಿದ್ದೇ ಬಂದಿದ್ದು, ಎಲ್ಲ ವಲಯದಲ್ಲಿ ತನ್ನ ಕಬಂದ ಬಾಹುವನ್ನು ಚಾಚುವ ಮೂಲಕ ಸಂಕಷ್ಟ ತಂದೊಡ್ಡಿದೆ. ಇನ್ನಾದರೂ ಕೊರೋನಾ ಕರಿನೆರಳು ಕಳೆದು ಜನರ ಜೀವನದಲ್ಲಿ ಉತ್ಸಾಹ ಮೊಳಗಲಿ. ತುರ್ತು ಸಂದರ್ಭದಲ್ಲಿ ರಕ್ತ ಮಾಡುವವರು ಮುಂದೆ ಬರಲಿ ಎಂಬುವುದೇ ನಮ್ಮ ಆಶಯ...

Reach Count: 
87542