Kshetra Samachara

Local News Subject: 
ಎರ್ಮಾಳ್ : 800 ಮೆಟ್ರಿಕ್ ಟನ್ ಮರಳು ಅಕ್ರಮ ದಾಸ್ತಾನು; ತಹಸೀಲ್ದಾರ್ ಮುಟ್ಟುಗೋಲು
City: 
Udupi
Mangalore
Video Thumbnail: 
PublicNext-475079-515041-Udupi-Mangalore-Crime-Law-and-Order-node
Category: 
Crime
Law and Order
Body: 

ಕಾಪು: ಲಾಕ್ ಡೌನ್ ರಿಲೀಫ್ ಆಗುತ್ತಿದ್ದಂತೆಯೇ ಕಾಪು ತಾಲೂಕಿನ ಖಡಕ್ ತಹಸೀಲ್ದಾರ್ ಎಂದೆನಿಸಿರುವ ಪ್ರತಿಭಾ ಆರ್. ಅವರು ಅಕ್ರಮ ದಂಧೆಕೋರರ ಬೇಟೆಗೆ ಇಳಿದಿದ್ದಾರೆ.

ತಾಲೂಕಿನ ಎರ್ಮಾಳ್ ನಲ್ಲಿ ಅಕ್ರಮವಾಗಿ ಸುಮಾರು 800 ಮೆಟ್ರಿಕ್ ಟನ್ ಮರಳನ್ನು ದಾಸ್ತಾನಿಟ್ಟಿರುವ ಬಗ್ಗೆ ಖಚಿತ ಮಾಹಿತಿ ಪಡೆದ ತಹಸೀಲ್ದಾರ್ ಮತ್ತವರ ತಂಡ ದಾಳಿ ನಡೆಸಿ ಎಲ್ಲ ಮರಳನ್ನು ಸೀಝ್ ಮಾಡಿದ್ದಾರೆ.

ಈ ಮರಳು ಸಂಗ್ರಹಿಸಲಾದ ಜಾಗ ತೆಂಕ ಗ್ರಾಮದ ಅಶೋಕ್ ರಾಜ್ ಅವರಿಗೆ ಸೇರಿದ್ದು, ಗಿರೀಶ್ ಎಂಬವರು ಮರಳು ರಾಶಿ ಹಾಕಿರುವುದಾಗಿ ತಿಳಿದು ಬಂದಿದೆ. ಈ ಸಂಬಂಧ ಮರಳನ್ನು ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ವಶಕ್ಕೆ ನೀಡಿ ಮಹಜರು ಮಾಡಿಸಲಾಗಿದೆ ಎಂದು ತಹಸೀಲ್ದಾರ್ ತಿಳಿಸಿದ್ದಾರೆ. ಕಂದಾಯ ಅಧಿಕಾರಿ, ಕಾಪು ತಾಲೂಕು ಗಣಿ ಅಧಿಕಾರಿ, ಗ್ರಾಮ ಕರಣಿಕರು ಹಾಜರಿದ್ದರು.

Reach Count: 
12594