Kshetra Samachara

Local News Subject: 
ವ್ಯಾಕ್ಸಿನ್ ನಿಂದ ಅಯಸ್ಕಾಂತೀಯ ಗುಣ ಬರಲ್ಲ: ಉಡುಪಿ ಡಿ.ಸಿ ಸ್ಪಷ್ಟನೆ
City: 
Udupi
Mangalore
Video Thumbnail: 
PublicNext-474970-514812-Udupi-Mangalore-Offers-node
Category: 
Offers
Body: 

ಉಡುಪಿ: ಉಡುಪಿಯಲ್ಲಿ ವ್ಯಕ್ತಿಯೊಬ್ಬರಿಗೆ ಮ್ಯಾಗ್ನೆಟಿಕ್ ಪವರ್ ಬಂದಿರುವ ಬಗ್ಗೆ ವರದಿಯಾಗಿದೆ.ಆದರೆ ಅದಕ್ಕೂ ಕೋವಿಡ್ ಲಸಿಕೆಗೂ ಸಂಬಂಧ ಇಲ್ಲ ಎಂದು ಉಡುಪಿ ಡಿ.ಸಿ.ಜಿ.ಜಗದೀಶ್ ಸ್ಪಷ್ಟ ಪಡಿಸಿದ್ದಾರೆ.

ಈ ಕುರಿತು ಸ್ಪಷ್ಟೀಕರಣ ನೀಡಿರುವ ಜಿಲ್ಲಾಧಿಕಾರಿಗಳು ಆ ವ್ಯಕ್ತಿಗೆ ಬಿ.ಪಿ, ಶುಗರ್ ಇದೆ.ಅವರನ್ನು ಜಿಲ್ಲಾಸ್ಪತ್ರೆಗೆ ಕರೆದುಕೊಂಡು ಹೋಗಿ ಪರೀಕ್ಷೆ ನಡೆಸಲಾಗಿದೆ.ಅವರಿಗೆ ಹಣೆ, ಭುಜ ,ಬೆನ್ನು ,ಕೈಯಲ್ಲಿ ಅಯಸ್ಕಾಂತೀಯ ಗುಣ ಇದೆ.ಆದರೆ ಅವರ ಒಂದು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು ,ಅದರಲ್ಲಿ ವ್ಯಾಕ್ಸಿನ್ ನಿಂದ ಹೀಗಾಗಿದೆ ಎಂದು ಹೇಳಿದ್ದಾರೆ.ಆ ವ್ಯಕ್ತಿ ಮೊದಲ ಡೋಸ್ ಲಸಿಕೆ ಪಡೆದಿದ್ದಾರೆ.ಆದರೆ ಲಸಿಕೆಯಿಂದ ಅಯಸ್ಕಾಂತೀಯ ಗುಣ ಬರುವುದಿಲ್ಲ ಎಂದು ಹೇಳಿದ್ದಾರೆ.

Reach Count: 
8283