Public News

News Subject: 
ಒಂದು ಟ್ವೀಟ್‌ನಿಂದ ಗೌತಮ್ ಅದಾನಿಗೆ ಷೇರು ಶೇಕ್- 43,500 ಕೋಟಿ ರೂ. ಹೂಡಿಕೆ ಫ್ರೀಜ್
Upload Image: 
PublicNext--514802--node-nid
Category: 
Business
Body: 

ಮುಂಬೈ: ಒಂದೇ ಒಂದು ಟ್ವೀಟ್ ಭಾರತದ ಎರಡನೇ ಶ್ರೀಮಂತ ವ್ಯಕ್ತಿ ಗೌತಮ್ ಅದಾನಿ ಗ್ರೂಪ್‌ಗೆ ಬಿಗ್ ಶಾಕ್ ನೀಡಿದೆ.

ಹೌದು. ನ್ಯಾಷನಲ್ ಸೆಕ್ಯುರಿಟೀಸ್ ಡಿಪಾಸಿಟರಿ ಲಿಮಿಟೆಡ್ (ಎನ್‌ಎಸ್‌ಡಿಎಲ್) ನಾಲ್ಕು ವಿದೇಶಿ ನಿಧಿಗಳಾದ ಅಲ್ಬುಲಾ ಇನ್ವೆಸ್ಟ್‌ಮೆಂಟ್ ಫಂಡ್, ಕ್ರೆಸ್ಟಾ ಫಂಡ್ ಮತ್ತು ಎಪಿಎಂಎಸ್ ಇನ್ವೆಸ್ಟ್‌ಮೆಂಟ್ ಫಂಡ್‌ನ ಖಾತೆಗಳನ್ನು ಸ್ಥಗಿತಗೊಳಿಸಿದೆ. ಇದು ನಾಲ್ಕು ಅದಾನಿ ಗ್ರೂಪ್ ಕಂಪನಿಗಳಲ್ಲಿ 43,500 ಕೋಟಿ ರೂ. ಹೂಡಿಕೆ ಮಾಡಿದ್ದು, ಮನಿ ಲಾಂಡರಿಂಗ್ ತಡೆ ಕಾಯ್ದೆ (ಪಿಎಂಎಲ್‌ಎ) ಪ್ರಕಾರ ಲಾಭದಾಯಕ ಮಾಲೀಕತ್ವದ ಸಂಪೂರ್ಣ ವಿವರಗಳನ್ನು ಬಹಿರಂಗಪಡಿಸದ ಕಾರಣ ಈ ಮೂರು ಖಾತೆಗಳನ್ನು ಅಮಾನತುಗೊಳಿಸಬಹುದು ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಈ ಬೆಳವಣಿಗೆ ಬೆನ್ನಲ್ಲೇ ಅದಾನಿ ಗ್ರೂಪ್‌ನ ಷೇರುಗಳು ಕುಸಿಯಲಾರಂಭಿಸಿವೆ. ಅದಾನಿ ಅವರ ಅನೇಕ ಕಂಪನಿಗಳಲ್ಲಿ ಲೋವರ್ ಸರ್ಕಿಟ್ ಕೂಡ ವಿಧಿಸಲಾಗಿದೆ. ಇನ್ನು ಆರಂಭಿಕ ವಹಿವಾಟಿನ ಮೊದಲ ಒಂದು ತಾಸಿನಲ್ಲಿ ಕಂಪನಿಗಳ ಷೇರು ಶೇ.20 ರಷ್ಟು ಕುಸಿತವಾಗಿವೆ. ಇದರಿಂದ ಅದಾನಿ ಸಂಪತ್ತು 7.6 ಮಿಲಿಯನ್ ಡಾಲರ್ ಅಂದರೆ 55 ಸಾವಿರ ಕೋಟಿ ಕುಸಿತವಾಗಿದೆ.

ವಾಣಿಜ್ಯ ಪತ್ರಕರ್ತೆ ಸುಚೇತ ದಲಾಲ್ ಅವರು ಕಂಪನಿಯ ಹೆಸರನ್ನು ಉಲ್ಲೇಖಿಸದೇ ಕಂಪನಿಯ ಒಳಗೆ ನಡೆದಿರುವ ಲಾಭಿ ಕುರಿತು ಹಾಗೂ ಷೇರುಗಳ ಪರವಾಗಿ ಸಂಭವನೀಯ ಹಗರಣದ ಬಗ್ಗೆ ಸುಳಿವಿರುವ ಸಂದೇಶವನ್ನು ಜೂನ್ 12ರಂದು ನೀಡಿದ್ದಾರೆ. ಈ ಟ್ವೀಟ್‌ನಲ್ಲಿ ಕಂಪನಿಯ ಹೆಸರು ಉಲ್ಲೇಖಿಸದೇ ಇದ್ದರೂ ಮೇಲ್ನೋಟಕ್ಕೆ ಅದಾನಿ ಗ್ರೂಪ್ ಎಂಬ ಸಂದೇಶವಿದೆ. ಅದಾನಿ ಗ್ರೂಪ್‌ಗಳಲ್ಲಿ ಹೂಡಿಕೆದಾರ ನಿಧಿಗಳು ಸ್ಥಗಿತಗೊಳಿಸಿದ ಬಳಿಕ ಸುಚೇತ ಅವರ ಟ್ವೀಟ್ ಸಾಕಷ್ಟು ಟ್ರೆಂಡ್ ಸೃಷ್ಟಿಸಿದೆ.

Reach Count: 
41603