Kshetra Samachara

Local News Subject: 
ಸುಳ್ಳು ಸುದ್ದಿ : ಮೆಸ್ಕಾಂ ಕಚೇರಿಗೆ ದೌಡಾಯಿಸಿದ ಗ್ರಾಹಕರು
City: 
Udupi
Mangalore
Upload Image: 
PublicNext--514787--node-nid
Category: 
WaterPower
Body: 

ಬ್ರಹ್ಮಾವರ: ಮಂಗಳೂರು ವಿದ್ಯುಚ್ಛಕ್ತಿ ಸರಬರಾಜು ಕಂಪನಿ (ಮೆಸ್ಕಾಂ) ನಿಂದ ಕೊರೊನಾ ಸಮಯದಲ್ಲಿ ಬಡ ಮತ್ತು ಮಧ್ಯಮ ವರ್ಗದ ಬಿಪಿಎಲ್ ಕಾರ್ಡ್ ದಾರರಿಗೆ 3 ತಿಂಗಳ ವಿದ್ಯುತ್ ಬಿಲ್ ಮನ್ನಾ ಮಾಡಲಾಗುವುದು. ಪ್ರತಿ ಶಾಖೆಯವರು ತಮ್ಮ ವ್ಯಾಪ್ತಿಯ ಬಿ.ಪಿ.ಎಲ್. ಕಾರ್ಡ್ ಹೊಂದಿದ ಬಳಕೆದಾರರ ವಿವರ ನೀಡಬೇಕೆನ್ನುವ ಸುಳ್ಳು ಆದೇಶ ಪ್ರತಿಯನ್ನೊಳಗೊಂಡ ಸುದ್ದಿಯೊಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದ್ದು ಗ್ರಾಮಾಂತರ ಭಾಗದ ಒಂದಷ್ಟು ಮಂದಿ‌ ಗ್ರಾಹಕರು ಬಿ.ಪಿ.ಎಲ್. ಕಾರ್ಡ್ ನೊಂದಿಗೆ ಮೆಸ್ಕಾಂ ಕಚೇರಿಗೆ ದೌಡಾಯಿಸಿ ತಮ್ಮ‌ಬಿಲ್ ರದ್ದಾಗಲಿದೆಯೇ ಎಂದು ವಿಚಾರಿಸಿದ ಘಟನೆ ಉಡುಪಿ, ಮಂಗಳೂರು ಸೇರಿದಂತೆ ಹಲವು ಕಡೆಗಳಲ್ಲಿ ನಡೆಯಿತು.

ಶಿವಮೊಗ್ಗ ಭದ್ರಾವತಿಯ ಬೆಜ್ಜವಳ್ಳಿ ಶಾಖೆಯ ಲೆಟರ್ ಹೆಡ್ ನಲ್ಲಿದ್ದ ಈ ರೀತಿಯ ಆದೇಶ ಪ್ರತಿಯೊಂದು ನಿನ್ನೆಯಿಂದ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿತ್ತು ಹಾಗೂ ಸಾಕಷ್ಟು ಮಂದಿ ಇದನ್ನು ಫಾರ್ವರ್ಡ್ ಮಾಡಿದ್ದರು. ಆದರೆ ಮೆಸ್ಕಾಂ ಆಗಲೀ, ಸರಕಾರವಾಗಲೀ ಇಂತಹದ್ದೊಂದು ಆದೇಶ ಹೊರಡಿಸಿಲ್ಲ ಎಂದು ಮೆಸ್ಕಾಂ ಅಧಿಕಾರಿಗಳು ಸ್ಪಷ್ಟಪಡಿಸಿ ಗೊಂದಲಕ್ಕೆ ತೆರೆ ಎಳೆದರು.

ಸತ್ಯ ವಿಚಾರವೇನು? ಸಂಸದರೋರ್ವರು ರಾಜ್ಯದ ಬಿ.ಪಿ.ಎಲ್ ಕಾರ್ಡ್ ದಾರರಿಗೆ ಕೊರೊನಾ ಸಂಕಷ್ಟದ ಸಮಯದಲ್ಲಿ ಮೂರು ತಿಂಗಳ ವಿದ್ಯುತ್ ಬಿಲ್ ನ್ನು ಮನ್ನಾ ಮಾಡುವಂತೆ ಮುಖ್ಯಮಂತ್ರಿಯವರಿಗೆ ಮನವಿಯೊಂದನ್ನು ಮಾಡಿದ್ದು, ಈ ಮನವಿ ಆಧಾರದಲ್ಲಿ ಮುಖ್ಯಮಂತ್ರಿ ಕಚೇರಿಯಿಂದ ಎಲ್ಲಾ ಸಬ್ ಡಿವಿಷನ್ ಗಳಿಗೆ ಮೂರು ತಿಂಗಳ ಬಿಪಿಎಲ್ ಫಲಾನುಭವಿ ಕುಟುಂಬಗಳ ಎಷ್ಟು ರೀಡಿಂಗ್ ಆಗಿದೆ, ಎಷ್ಟು ಮೊತ್ತವಾಗಿದೆ ಎಂದು ಮಾಹಿತಿ ಕೋರಿ ಪತ್ರ ಬಂದಿತ್ತು. ಯಾರೋ ದುಷ್ಕರ್ಮಿಗಳು ಈ ಆದೇಶವನ್ನು ತಿರುಚಿ ವೈರಲ್ ಮಾಡಿರುವುದು ಗೊಂದಲಕ್ಕೆ ಕಾರಣವಾಯಿತು. ಸರಕಾರದಿಂದ ಈ ರೀತಿಯ ಯಾವುದೇ ಆದೇಶವಾಗಿಲ್ಲ ಎಂದು ಮಂಗಳೂರು ವಿಭಾಗದ ಮೆಸ್ಕಾಂ ಉನ್ನತಾಧಿಕಾರಿಗಳು ಕೂಡ ಸ್ಪಷ್ಟಪಡಿಸಿದ್ದಾರೆ.

Reach Count: 
5565