Kshetra Samachara

Local News Subject: 
ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಗೂ ತಟ್ಟಿದ ಟ್ರಾಫಿಕ್ ಜಾಮ್ ಅನುಭವ...!
City: 
Hubballi-Dharwad
Video Thumbnail: 
PublicNext--514770--node-nid
Category: 
Infrastructure
Body: 

ಹುಬ್ಬಳ್ಳಿ: ರಾಜ್ಯದ ಎರಡನೇ ಅತಿದೊಡ್ಡ ಮಹಾನಗರ ಪಾಲಿಕೆ ಎಂಬ ಹೆಗ್ಗಳಿಕೆ ಪಾತ್ರವಾಗಿರುವ ಹು-ಧಾ ಮಹಾನಗರದಲ್ಲಿ ಟ್ರಾಫಿಕ್ ಸಮಸ್ಯೆ ದಿನದಿಂದ ದಿನಕ್ಕೆ ಹೆಚ್ಚಳವಾಗುತ್ತಿದೆ. ಇದರಿಂದ ಜನಪ್ರತಿನಿಧಿಗಳ ವಾಹನ ಹಾಗೂ ಅಂಬ್ಯುಲೆನ್ಸ್ ಕೂಡ ಪರದಾಡುವಂತಾಗಿದೆ.

ಹೌದು.. 48 ದಿನಗಳ ಬಳಿಕ ಅನ್ ಲಾಕ್ ಆದ ಹುಬ್ಬಳ್ಳಿಯಲ್ಲಿ ಸಾವಿರಾರು ವಾಹನಗಳು ರಸ್ತೆಗೆ ಇಳಿದಿದ್ದು, ಕೋರೊನಾ ವೈರಸ್ ಹರಡದಂತೆ ಕೈಗೊಂಡಿರುವ ಲಾಕ್ ಡೌನ ಗೆ ಜಿಲ್ಲಾಡಳಿತ ಇವತ್ತು ರೀಲಿಫ್ ನೀಡಿರುವ ಹಿನ್ನಲೆಯಲ್ಲಿ ಪ್ರಮುಖ ರಸ್ತೆಗಳೆಲ್ಲ ಟ್ರಾಫಿಕ್ ಜಾಮ್ ಆಗಿದ್ದು, ಕೇಂದ್ರ ಸಚಿವ್ ಪ್ರಹ್ಲಾದ ಜೋಶಿಯವರಿರಗೂ ಟ್ರಾಫಿಕ್ ಜಾಮ್ ಬಿಸಿ ತಟ್ಟಿದೆ.

ಇನ್ನೂ ಕೇಂದ್ರ ಸಚಿವರ ಸುಗಮ ಸಂಚಾರಕ್ಕೆ ಸಂಚಾರಿ ಪೊಲೀಸ್ ಸಿಬ್ಬಂದಿ ಅನುವು ಮಾಡಿಕೊಟ್ಟಿದ್ದಾರೆ. ಟ್ರಾಫಿಕ್ ಐಲ್ಯಾಂಡ್ ನಲ್ಲಿ ವಾಹನ ದಟ್ಟಣೆ ಹೆಚ್ಚಾಗಿದ್ದು,

ನಗರದ ಕಿತ್ತೂರು ಚನ್ನಮ್ಮ ಸರ್ಕಲನಲ್ಲಿ ಹ್ಯಾವಿ ಟ್ರಾಪಿಕ ಜಾಮ್ ಆಗಿದ್ದು,ಪಾದಾಚಾರಿಗಳು ಪರದಾಡುವಂತಾಗಿದೆ.

Reach Count: 
43307