Public News

News Subject: 
ತೈಲ ಬೆಲೆ ಏರಿಕೆ ಖಂಡಿಸಿ ಅಥಣಿಯಲ್ಲಿ ಕಾಂಗ್ರೆಸ್ ಪ್ರತಿಭಟನೆ
Category: 
Politics
Body: 

ಅಥಣಿ:ತೈಲ ಬೆಲೆ ಏರಿಕೆ ಮತ್ತು ದಿನಬಳಕೆ ವಸ್ತುಗಳ ಬೆಲೆ ಏರಿಕೆ ಖಂಡಿಸಿ ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಕಾಂಗ್ರೆಸ್ ಪಕ್ಷದಿಂದ ಏಕಕಾಲಕ್ಕೆ ಹನ್ನೊಂದು ಪೆಟ್ರೋಲ್ ಬಂಕ್ ಗಳಲ್ಲಿ ಪ್ರತಿಭಟನೆ ನಡೆಸಲಾಯಿತು. ಈ ವೇಳೆ ಮೋದಿ ಹಠಾವೋ ದೇಶ ಬಚಾವೋ, ಮೋದಿ ತುಮ್ನೆ ಕ್ಯಾ ಕಿಯಾ ದೇಶ ಕೊ ಬರಬಾದ ಕಿಯಾ ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರದ ವಿರುದ್ದ ಘೋಷಣೆ ಕೂಗಿದರು.ಅಥಣಿ ಪಟ್ಟಣದ ಹಲವು ಪೆಟ್ರೋಲ್ ಬಂಕ್ ಗಳಲ್ಲಿ ಕಾಂಗ್ರೆಸ್ ಎಸ್ ಸಿ ಎಸ್ ಟಿ ಘಟಕ,ಕಾಂಗ್ರೆಸ್ ಯುವ ಘಟಕ, ಮಹಿಳಾ ಘಟಕ,ಓಬಿಸಿ ಘಟಕ,ಸೇರಿದಂತೆ ಅಥಣಿ ಮತ್ತು ತೆಲಸಂಗ ಬ್ಲಾಕ್ ಕಾಂಗ್ರೆಸ್ ವತಿಯಿಂದ ಪ್ರತಿಭಟನೆ ನಡೆಸಲಾಯಿತು.

ಪೆಟ್ರೋಲ್ ಬೆಲೆ ಇಂದು ನೂರು ರೂಪಾಯಿ ದಾಟುತ್ತಿದ್ದು ಬಡವರು,ರೈತರು, ಮತ್ತು ದುಡಿಯುವ ವರ್ಗಕ್ಕೆ ತೀವ್ರ ತೊಂದರೆ ಆಗುತ್ತಿದೆ.ಆದ್ದರಿಂದ ಮೋದಿ ಹಠಾವೋ ದೇಶ ಬಚಾವೋ ಅಭಿಯಾನಕ್ಕೆ ಕಾಂಗ್ರೆಸ್ ಪಕ್ಷ ಬದ್ದವಾಗಿದೆ ಈ ಹಿಂದೆ ಪೆಟ್ರೋಲ್ ದರ ಎಪ್ಪತ್ತು ರೂಪಾಯಿ ತಲುಪಿದಾಗ ಕಾಂಗ್ರೆಸ್ ಪಕ್ಷದ ಪ್ರಧಾನಿ ಆಗಿದ್ದ ಮನಮೋಹನ್ ಸಿಂಗ್ ಅವರಿಗೆ ಸ್ಮೃತಿ ಇರಾಣಿ ಅವರು ಬಳೆಗಳನ್ನು ಕಳಿಸಿ ಪ್ರತಿಭಟನೆ ಮಾಡಿದ್ದರು ಈಗ ಬಿಜೆಪಿ ಸರ್ಕಾರದ ಆಡಳಿತದಲ್ಲಿ ಮೋದಿ ಪ್ರಧಾನಿಯಾಗಿದ್ದು ಪೆಟ್ರೋಲ್ ದರ ನೂರು ರೂಪಾಯಿ ದಾಟುತ್ತಿದೆ.ಈಗ ಸ್ಮೃತಿ ಇರಾಣಿ ಎಷ್ಟು ಬಳೆಗಳನ್ನು ಕಳಿಸುತ್ತಾರೆ ಎಂದು ಕಾಂಗ್ರೆಸ್ ಮುಖಂಡ ಗಜಾನನ ಮಂಗಸೂಳಿ ಮಾಧ್ಯಮಗಳ ಮೂಲಕ ಪ್ರಶ್ನೆ ಮಾಡಿದರು.

ಮುಲ್ಲಾ,ಶಬ್ಬಿರ ಸಾತಬಚ್ಚೆ,ಸೇರಿದಂತೆ ಹಲವರು ಉಪಸ್ಥಿತರಿದ್ದರು.

Reach Count: 
26933