Kshetra Samachara

Local News Subject: 
ಕುಂದಗೋಳ : ಕುಬಿಹಾಳದಲ್ಲಿ 45.97 ಲಕ್ಷ ವೆಚ್ಚದ ತ್ಯಾಜ್ಯ ಘಟಕ ನಿರ್ಮಾಣ - ಜೋಶಿ
City: 
Hubballi-Dharwad
Video Thumbnail: 
PublicNext--514667--node-nid
Category: 
Politics
Infrastructure
Body: 

ಕುಂದಗೋಳ : ಕೇಂದ್ರ ಸರ್ಕಾರದ ಸ್ವಚ್ಚ ಭಾರತ ಯೋಜನೆಯಡಿ ನಿಮ್ಮೂರು ಕುಬಿಹಾಳ ಗ್ರಾಮದಲ್ಲಿ 45.97 ಲಕ್ಷ ರೂಪಾಯಿ ವೆಚ್ಚದಲ್ಲಿ "ಸ್ವಚ್ಚ ಸಂಕೀರ್ಣ" ಘನತ್ಯಾಜ್ಯ ನಿರ್ವಹಣೆ ಘಟಕ ನಿರ್ಮಾಣಕ್ಕೆ ಇಂದು ಶುಭ ಸಂಧರ್ಭ ಒದಗಿ ಬಂದಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ಹೇಳಿದರು.

ಅವರು ಭಾನುವಾರ ಕುಬಿಹಾಳ ಗ್ರಾಮದಲ್ಲಿ ಘನ ತ್ಯಾಜ್ಯ ಘಟಕ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ ನೇರವೇರಿಸಿ ಮಾತನಾಡಿ ಈ ಘಟಕ ನಿರ್ಮಾಣದ ನಂತರ ಸುತ್ತ ಮುತ್ತಲಿನ 10 ಕಿಲೋ ಮೀಟರ್ ವ್ಯಾಪ್ತಿಯ ಹಳ್ಳಿಯ ಐದು ಗ್ರಾಮ ಪಂಚಾಯಿತಿಗಳಿಗೆ ಕಸ ವಿಂಗಡಣೆ ನಿರ್ವಹಣೆಗೆ ಉಪಯುಕ್ತವಾಗಲಿದೆ ಎಂದರು.

ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ್ ಶೆಟ್ಟರ್ ಮಾತನಾಡಿ ಈ ತಾಲೂಕಿನ ಗ್ರಾಮೀಣ ಭಾಗದ ಜನರಿಗೆ ಇಂತಹದೊಂದ್ದು ಸೌಲಭ್ಯ ಅಗತ್ಯವಿತ್ತು, ಇದೀಗ ಘನ ತ್ಯಾಜ್ಯ ಘಟಕ ನಿರ್ಮಾಣವಾಗ್ತಿದೆ ಅಧಿಕಾರಿಗಳು ಸಮರ್ಪಕವಾಗಿ ಇದರ ನಿರ್ಮಾಣ ಬಳಕೆಗೆ ಮುಂದಾಗಬೇಕು ಜನತೆ ಸಾಥ್ ನೀಡಬೇಕು ಎಂದರು.

ಈ ಸಂದರ್ಭದಲ್ಲಿ ಶಾಸಕಿ ಕುಸುಮಾವತಿ ಶಿವಳ್ಳಿ, ಕೃಷಿ ಉತ್ಪನ್ನ ಮತ್ತು ರಫ್ತು ನಿಗಮ ಮಂಡಳಿ ಅಧ್ಯಕ್ಷ ಎಸ್.ಐ.ಚಿಕ್ಕನಗೌಡರ, ಬಿಜೆಪಿ ಮುಖಂಡ ಎಮ್.ಆರ್.ಪಾಟೀಲ, ಜಿಪಂ ಸಿಇಒ ಡಾ.ಬಿ ಸುಶೀಲಾ, ತಾಪಂ ಇಒ ಮಹೇಶ್ ಕುರಿಯವರ, ಗ್ರಾಪಂ ಅಧ್ಯಕ್ಷೆ ಶಕೀನಾಬ್ ನಧಾಪ್, ಉಪಾಧ್ಯಕ್ಷ ನಾಗನಗೌಡರ ಸಾತ್ಕಾರ ಹಾಗೂ ಅಧಿಕಾರಿ ವರ್ಗದವರು ಉಪಸ್ಥಿತರಿದ್ದರು.

Reach Count: 
98717