Public News

News Subject: 
ಬೆಂಗಳೂರಿಗೆ ಬರಲು ಕೊರೊನಾ ವರದಿ ಕಡ್ಡಾಯವಲ್ಲ: ಬಿಬಿಎಂಪಿ
Upload Image: 
PublicNext--514652--node-nid
Category: 
Politics
Body: 

ಬೆಂಗಳೂರು: ರಾಜ್ಯ ರಾಜಧಾನಿಯಲ್ಲಿ ಇಂದಿನಿಂದ ಲಾಕ್ ಡೌನ್ ಬಹುತೇಕ ಸಡಿಲಿಕೆಯಾಗಿದೆ. ಬೆಂಗಳೂರು ನಗರಕ್ಕೆ ಹೊರ ರಾಜ್ಯ ಹಾಗೂ ಹೊರ ಜಿಲ್ಲೆಗಳಿಂದ ಬರುವವರು ಕೋವಿಟ್ ನೆಗೆಟಿವ್ ವರದಿ ಕಡ್ಡಾಯವಲ್ಲ ಎಂದು ಬಿಬಿಎಂಪಿ ಹೇಳಿದೆ. ಈನಡುವೆ ಲಾಕ್ ಡೌನ್ ಮುಗಿದ ನಂತರ ಕೋವಿಡ್‌ ನಿಯಂತ್ರಣ ನಿಯಮಗಳು ಕಡ್ಡಾಯವಾಗಿ ಪಾಲನೆ ಆಗುತ್ತಿರುವ ಬಗ್ಗೆ ಹೆಚ್ಚಿನ ನಿಗಾ ಇಡುವುದಕ್ಕೆ ಸಿದ್ಧತೆ ಮಾಡಿಕೊಂಡಿದೆ.

‘ನಗರಕ್ಕೆ ಬರುವವರು ಕೋವಿಡ್‌ ಪರೀಕ್ಷೆಯಲ್ಲಿ ಸೋಂಕು ಇಲ್ಲ ಎಂದು ದೃಢಪಟ್ಟ ವರದಿಯನ್ನು ತಮ್ಮ ಜೊತೆ ಹೊಂದಿರಬೇಕು ಎಂದು ಕಡ್ಡಾಯ ಮಾಡಿಲ್ಲ. ಆದರೆ, ರೈಲ್ವೆ ನಿಲ್ದಾಣಗಳು, ಬಸ್‌ನಿಲ್ದಾಣಗಳು ಹಾಗೂ ವಿಮಾನ ನಿಲ್ದಾಣದಲ್ಲಿ ಕೆಲವು ಪ್ರಯಾಣಿಕರನ್ನು ಕೋವಿಡ್ ಪರೀಕ್ಷೆಗೆ ಒಳಪಡಿಸಲಿದ್ದೇವೆ’ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್‌ ಗುಪ್ತ ಹೇಳಿದ್ದಾರೆ.

Reach Count: 
23658