Public News

News Subject: 
ಇಂದು ವಿಶ್ವ ರಕ್ತದಾನಿಗಳ ದಿನಾಚರಣೆ': ಸದಾ ಇರಲಿ ಈ ಮಾನವೀಯ ಗುಣ ಸಂಪನ್ನರ ಸ್ಮರಣೆ
Video Thumbnail: 
PublicNext-474823-514503-Cultural-Activity-node
Category: 
Cultural Activity
Body: 

ವರದಿ : ಮನೋಜ್ ಕೆ.ಬೆಂಗ್ರೆ

ಮಂಗಳೂರು: ಇಂದು ಜೂನ್ 14. ಈ ಸುದಿನವನ್ನು 'ವಿಶ್ವ ರಕ್ತದಾನಿಗಳ ದಿನ' ವೆಂದು ಜಗತ್ತಿನಾದ್ಯಂತ ವರ್ಷಂಪ್ರತಿ ಆಚರಿಸಲಾಗುತ್ತಿದೆ.
ವಿಶ್ವ ಸಂಸ್ಥೆ 2005 ರಲ್ಲಿ ವಿಶ್ವ ರಕ್ತದಾನಿಗಳ ದಿನ ಆಚರಣೆಗೆ ಘೋಷಣೆ ಮಾಡಿತ್ತು. ಇದು ಇಡೀ ಜಗತ್ತಿನ ಪ್ರತಿ ಸಹೃದಯಿ ರಕ್ತದಾನಿಗೆ ಸಲ್ಲಿಸುವ ಮಹಾ ಗೌರವವೂ ಹೌದು.

'ರಕ್ತದಲ್ಲಿ ಆರ್ ಎಚ್ ಫ್ಯಾಕ್ಟರ್' ಕಂಡು ಹುಡುಕಿದ, ನೊಬೆಲ್ ಪುರಸ್ಕೃತ ವಿಜ್ಞಾನಿ ಕಾರ್ಲ್ ಲ್ಯಾಂಡ್ ಸ್ಟೈನರ್ ಅವರ ಸಂಸ್ಮರಣೆಯಲ್ಲಿ ವಿಶ್ವ ರಕ್ತದಾನಿಗಳ ದಿನಾಚರಣೆ ನಡೆಯುತ್ತದೆ.

ಇಂದು ಪ್ರತಿ 2 ಸೆಕೆಂಡ್ ಗೆ ಯಾರಾದರೊಬ್ಬರಿಗೆ ರಕ್ತದ ಅವಶ್ಯಕತೆಯಿದ್ದು, ಈ ತುರ್ತು ಸಂದರ್ಭ ರಕ್ತದಾನಿಗಳು ತಾವೇ ಮುಂದೆ ಬಂದು ರಕ್ತ ಕೊಡುತ್ತಿದ್ದಾರೆ. ಇದೇ ಅಲ್ಲವೇ? ಮಾನವತೆಯ ಸ್ಪರ್ಶ ಬಾಂಧವ್ಯ.

ವಿಶ್ವವ್ಯಾಪಿ ಕೊರೊನಾ ಕಬಂಧಬಾಹುವಿನಿಂದ ತಪ್ಪಿಸಿ ಕೊಳ್ಳಲು ಹೆಣಗಾಡುತ್ತಿದೆ ಮನುಕುಲ. ನಮ್ಮದೇಶದ ಜನಜೀವನವಂತೂ 2ನೇ ಅಲೆಯ ಪ್ರಹಾರದಿಂದಾಗಿ ತತ್ತರಿಸಿಯೇ ಹೋಗಿದೆ. ಒಂದೆಡೆ ಕೋವಿಡ್ ವಿರುದ್ಧದ ಸಮರದ ಜತೆ ಮತ್ತೊಂದೆಡೆ ರಕ್ತದ ಕೊರತೆಯಾಗದಂತೆ ನೋಡಿಕೊಳ್ಳುವುದು ಸರ್ವ ಭಾರತೀಯರ ಹೊಣೆಗಾರಿಕೆಯಾಗಿದೆ.

Reach Count: 
33363