Public News

News Subject: 
ಜಲಪಾತಕ್ಕೆ ದಾರಿ : ಧರೆಗುರುಳಿದ ಮರ
Upload Image: 
PublicNext--514487--node-nid
Category: 
Nature
Body: 

ಯಲ್ಲಾಪುರ : ಅರಣ್ಯ ಇಲಾಖೆ ಎಚ್ಚರಿಕೆಯನ್ನು ಧಿಕ್ಕರಿಸಿ ರಾತ್ರೋರಾತ್ರಿ ಯಲ್ಲಾಪುರ ತಾಲ್ಲೂಕಿನ ಕುಂಬ್ರಾಳದಲ್ಲಿ, ಸಂರಕ್ಷಿತ ಅರಣ್ಯ ಪ್ರದೇಶದಲ್ಲಿರುವ ಜಲಪಾತಕ್ಕೆ ನೂರಾರು ಮರಗಳ ಹನನ ಮಾಡಿ ರಸ್ತೆ ನಿರ್ಮಿಸಲಾಗಿದೆ. ದೇಹಳ್ಳಿ ಗ್ರಾಮ ಪಂಚಾಯಿತಿಯು ರಸ್ತೆ ನಿರ್ಮಿಸಿದ್ದು, ಶಿವಪುರದ ತೂಗುಸೇತುವೆ ಪಕ್ಕದಿಂದ ಸಾಗುತ್ತದೆ. ಕಾಮಗಾರಿಗಾಗಿ ಸೀಸಂ, ಸಾಗವಾನಿಯಂಥ ಬೆಲೆ ಬಾಳುವ ಮರಗಳನ್ನು ಕತ್ತರಿಸಲಾಗಿದೆ.

ಇನ್ನು ಧರೆಗೆ ಬಿದ್ದ ಮರಗಳು ಒಂದಷ್ಟು ಮಣ್ಣಿನಡಿಯಲ್ಲಿ ಹೂತು ಹೋಗಿದ್ರೆ ಕೆಲವು ಕಾಳಿನದಿಯ ಹಿನ್ನೀರಿನ ಪಾಲಾಗಿವೆ. ಇನ್ನೂ ಕೆಲವು ರಸ್ತೆಯ ಪಕ್ಕದಲ್ಲಿ ಬಿದ್ದಿವೆ. ಹೊಸ ರಸ್ತೆಯ ಎಡಭಾಗದ ಗುಡ್ಡದ ಮಣ್ಣು ಸಡಿಲವಾಗಿದ್ದು, ಅಲ್ಲಿರುವ ಮರಗಳೂ ಮಳೆಗಾಲದಲ್ಲಿ ಬೀಳುವ ಸಾಧ್ಯತೆಯಿದೆ. 'ನಮ್ಮ ಭಾಗದ ಅರಣ್ಯದಲ್ಲಿ ಇಂತಹ ಹಲವು ಜಲಪಾತಗಳಿವೆ. ಎಲ್ಲವಕ್ಕೂ ರಸ್ತೆ ನಿರ್ಮಿಸಲು ಹೊರಟರೆ ಕಾಡು ಸಂಪೂರ್ಣ ನಾಶವಾಗುತ್ತದೆ. ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು' ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

ಲಾಕ್ ಡೌನ್ ಅವಧಿಯಲ್ಲಿ ರಾತ್ರಿ ವೇಳೆ ಕಾಮಗಾರಿ ಮಾಡಲಾಗಿದೆ. ಹಾಗಾಗಿ ಅರಣ್ಯ ಇಲಾಖೆಯ ಗಮನಕ್ಕೆ ಬಂದಿರಲಿಲ್ಲ' ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.

Reach Count: 
26155