Public News

News Subject: 
ಸಿದ್ದರಾಮಯ್ಯ, ದಿಗ್ವಿಜಯ್ ಸಿಂಗ್ ಪಾಕಿಸ್ತಾನ ಪರ ಇದ್ದಾರೆ: ಈಶ್ವರಪ್ಪ
Upload Image: 
PublicNext--514485--node-nid
Category: 
Politics
Body: 

ಶಿವಮೊಗ್ಗ: ದಿಗ್ವಿಜಯ್ ಸಿಂಗ್, ಸಿದ್ದರಾಮಯ್ಯ ಹಾಗೂ ಜಮೀರ್ ಅಹಮದ್‍ ಪಾಕಿಸ್ತಾನದ ಪರ ಇರುವ ಕಾಂಗ್ರೆಸ್ಸಿಗರು ಎಂದು ಸಚಿವ ಕೆ.ಎಸ್. ಈಶ್ವರಪ್ಪ ಗಂಭೀರ ಆರೋಪ ಮಾಡಿದ್ದಾರೆ.

ಶಿವಮೊಗ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಸಚಿವರು, ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಆರ್ಟಿಕಲ್ 370ನ್ನು ರದ್ದು ಮಾಡುತ್ತೇವೆ ಎಂದು ದಿಗ್ವಿಜಯ್ ಸಿಂಗ್ ಹೇಳುತ್ತಾರೆ ಇದು ದಿಗ್ವಿಜಯ್ ಸಿಂಗ್ ಅವರ ರಾಷ್ಟ್ರದ್ರೋಹದ ಹೇಳಿಕೆ. ಅದೇ ರೀತಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗೋವುಗಳನ್ನು ಪೂಜೆ ಮಾಡುತ್ತೇವೆ. ಅದೇ ರೀತಿ ಗೋವುಗಳನ್ನು ಹತ್ಯೆಯನ್ನು ಮಾಡುತ್ತೇವೆ ಎಂದು ಹೇಳುತ್ತಾರೆ. ಸಿದ್ದರಾಮಯ್ಯ ಅವರ ಈ ಹೇಳಿಕೆ ಪರ ಇದ್ದೇವೆ ಎಂದು ಜಮೀರ್ ಅಹಮದ್ ಹೇಳುತ್ತಾರೆ. ಹಾಗಾಗಿ, ಈ ಮೂರು ಜನ ಪಾಕಿಸ್ತಾನದ ಪರ ಇದ್ದಾರೆ ಎಂದು ಸಚಿವ ಈಶ್ವರಪ್ಪ ಕಿಡಿಕಾರಿದ್ದಾರೆ.

Reach Count: 
23271