Kshetra Samachara

Local News Subject: 
ಧಾರವಾಡ: ಜೂನ್ 21 ರಿಂದ 18-44 ವರ್ಷ ವಯಸ್ಸಿನವರಿಗೆ ಕೊರೊನಾ ಲಸಿಕೆ
City: 
Hubballi-Dharwad
Upload Image: 
PublicNext--514456--node-nid
Category: 
Politics
Health & Fitness
COVID
Body: 

ಧಾರವಾಡ: ತಾತ್ಕಾಲಿಕವಾಗಿ ನಿಲ್ಲಿಸಲಾಗಿದ್ದ 18-44 ವರ್ಷ ವಯಸ್ಸಿನವರಿಗೆ ಕೊರೊನಾ ಲಸಿಕೆ ನೀಡುವ ಅಭಿಯಾನ ಜೂನ್.21 ರಿಂದ ಮತ್ತೆ ಪುನರಾರಂಭಗೊಳ್ಳಲಿದೆ.

ವ್ಯಾಕ್ಸಿನೇಷ್ ಡ್ರೈವ್ ನಡೆಸಲು ಧಾರವಾಡ ಜಿಲ್ಲಾಡಳಿತ ಈಗಾಗಲೇ ಸಿದ್ಧತೆ ನಡೆಸಿಕೊಳ್ಳುತ್ತಿದೆ.

ಈ ಸಂಬಂಧ ಹುಬ್ಬಳ್ಳಿಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಜಗದೀಶ ಶೆಟ್ಟರ್, ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ಜಿಲ್ಲಾಧಿಕಾರಿ ನಿತೇಶ ಪಾಟೀಲ, ಜಿಲ್ಲಾ ಆರೋಗ್ಯ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.

ಕೋವಿನ್ ಪೋರ್ಟಲ್ ಪ್ರಕಾರ ಜಿಲ್ಲೆಯಲ್ಲಿ 3,23,471 ಜನರು ಮೊದಲ ಡೋಸ್ ಪಡೆದಿದ್ದಾರೆ. ಅದರಲ್ಲಿ 73,999 ಫಲಾನುಭವಿಗಳು ಎರಡನೇ ಡೋಸ್ ಪೂರ್ಣಗೊಳಿಸಿದ್ದಾರೆ.

ರಾಜ್ಯಕ್ಕೆ ಇದುವರೆಗೆ 1,69,12,193 ಲಸಿಕೆ ಪೂರೈಕೆ ಮಾಡಲಾಗಿದ್ದು, ಕೇಂದ್ರದಿಂದ ಲಸಿಕೆ ಸಂಗ್ರಹಿಸಿ ರಾಜ್ಯಗಳಿಗೆ ಉಚಿತವಾಗಿ ನೀಡಲಾಗುವುದು ಎಂದು ಜೂನ್ 8 ರಂದು ಪ್ರಧಾನಿ ನರೇಂದ್ರ ಮೋದಿ ಘೋಷಿಸಿದ್ದಾರೆ. 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಉಚಿತ ಲಸಿಕೆ ನೀಡುಬ ಸಂಬಂಧ ವ್ಯಾಕ್ಸಿನೇಷನ್ ಡ್ರೈವ್ ನಡೆಸಲು ಜಿಲ್ಲಾಡಳಿತ ಸನ್ನದ್ಧಗೊಳ್ಳಬೇಕು ಎಂದು ಸಭೆಯಲ್ಲಿ ಸಚಿವರು ತಿಳಿಸಿದರು.

Reach Count: 
62781