Public News

News Subject: 
ಇಸ್ರೆಲ್ ನೂತನ ಪ್ರಧಾನಿಯಾಗಿ ನಫ್ತಾಲಿ ಬೆನೆಟ್: ನೆತನ್ಯಾಹು 12 ವರ್ಷಗಳ ಅಧಿಕಾರ ಅಂತ್ಯ
Upload Image: 
PublicNext--514447--node-nid
Category: 
Politics
Body: 

ಇಸ್ರೇಲ್​ನ ನೂತನ ಪ್ರಧಾನಿಯಾಗಿ ನಫ್ತಾಲಿ ಬೆನೆಟ್ ಆಯ್ಕೆಯಾಗಿದ್ದಾರೆ. ಈಮೂಕ ಬೆಂಜಮಿನ್ ನೆತನ್ಯಾಹು ಅವರ 12 ವರ್ಷಗಳ ಅಧಿಕಾರ ಅಂತ್ಯವಾಗಿದೆ. ಅವರನ್ನು ಕುರ್ಚಿಯಿಂದ ಇಳಿಸಲು ಅವರದೇ ಮೈತ್ರಿಕೂಟದ ನಾಯಕರು ಮತ್ತು ವಿರೋಧ ಪಕ್ಷದ ನಾಯಕರು ಈ ಮುನ್ನ ಒಟ್ಟುಗೂಡಿದ್ದರು.

ಬೆಂಜಮಿನ್ ನೆತನ್ಯಾಹು ಸರ್ಕಾರದ ಭಾಗವೇ ಆಗಿದ್ದ ನಫ್ತಾಲಿ ಬೆನೆಟ್ ನೇತೃತ್ವದಲ್ಲಿ ವಿರೋಧ ಪಕ್ಷದ ನಾಯಕರು 2009ರಿಂದ ಪ್ರಧಾನಿಯಾಗಿ ಅಧಿಕಾರದಲ್ಲಿದ್ದ ಬೆಂಜಮಿನ್ ನೆತನ್ಯಾಹು ಅವರನ್ನು ಕೆಳಗಿಳಿಸುವಲ್ಲಿ ಸಫಲರಾಗಿದ್ದಾರೆ. ಹೊಸದಾಗಿ ರೂಪಿಸಿರುವ ಸಮಿಶ್ರ ಸರ್ಕಾರಕ್ಕೆ ಸಂಸತ್ ಸದಸ್ಯರ ಅಂಗೀಕಾರ ದಕ್ಕಿದ್ದು, ಮಿಲೇನಿಯರ್, ಮಾಜಿ ಟೆಕ್ ಉದ್ಯಮಿ ನಫ್ತಾಲಿ ಬೆನೆಟ್ ಇಸ್ರೇಲ್​ನ ಪ್ರಧಾನಿಯಾಗಿದ್ದಾರೆ.

Reach Count: 
33805