Public News

News Subject: 
ತುಂಬ ದಪ್ಪ, ಆಂಟಿ ತರ ಕಾಣಿಸ್ತೀರಿ ಅಂದ್ರು: ಬೇಸರ ಹೊರಹಾಕಿದ ಪ್ರಿಯಾಮಣಿ
Upload Image: 
PublicNext--514366--node-nid
Category: 
Health & Fitness
Cinema
Body: 

ಎರಡನೇ ಆವೃತ್ತಿಯ ಫ್ಯಾಮಿಲಿ ಮ್ಯಾನ್ ಚಿತ್ರದ ಮುಖ್ಯ ಭೂಮಿಕೆಯಲ್ಲಿ ಪ್ರಿಯಮಾಣಿ ಪಾತ್ರ ಮೆಚ್ಚುಗೆ ಗಳಿಸಿಕೊಂಡಿದೆ. ಮದುವೆ ಆದ್ಮೇಲೆ ಒಳ್ಳೊಳ್ಳೆ ಕಥೆಗಳನ್ನು ಮಾತ್ರ ಆಯ್ಕೆ ಮಾಡಿಕೊಂಡು ನಟಿಸುತ್ತಿರುವ ಪ್ರಿಯಾಮಣಿ, ಬಾಡಿ ಶೇಮಿಂಗ್ ಬಗ್ಗೆ ಮಾತನಾಡಿದ್ದಾರೆ. ಇತ್ತೀಚಿಗಷ್ಟೆ ಸಂದರ್ಶನವೊಂದರಲ್ಲಿ ಈ ಕುರಿತು ಪ್ರತಿಕ್ರಿಯಿಸಿದ ರಾಷ್ಟ್ರ ಪ್ರಶಸ್ತಿ ವಿಜೇತೆ ''ನನ್ನ ಆಂಟಿ ಅಂದ್ರು, ಕಪ್ಪು ಆಗಿ ಕಾಣ್ತಿಯಾ ಅಂದ್ರು, ಡುಮ್ಮಿ ಅಂದ್ರು'' ಎಂದು ಬೇಸರ ಹೊರಹಾಕಿದ್ದಾರೆ.

'ಪ್ರಾಮಾಣಿಕವಾಗಿ ಹೇಳುವುದಾದರೆ ನನ್ನ ತೂಕ 65 ಕೆಜಿವರೆಗೂ ಏರಿಕೆಯಾಗಿತ್ತು. ಈಗ ಇರುವುದಕ್ಕಿಂತ ದಪ್ಪ ಕಾಣುತ್ತಿದ್ದೆ. ಆ ಸಂದರ್ಭದಲ್ಲಿ ಬಹಳಷ್ಟು ಜನರು, 'ಹೇ ನೀವು ತುಂಬಾ ದಪ್ಪ ಕಾಣುತ್ತೀರಿ, ಏಕೆ ಇಷ್ಟು ದಪ್ಪ ಆದ್ರಿ' ಎಂದು ಹೇಳಿದ್ದರು. ಆದ್ರೀಗ, ''ನೀವು ಏಕೆ ತೆಳ್ಳಗೆ ಆಗಿದ್ದೀರಾ, ನೀವು ದಪ್ಪ ಇದ್ದಾಗಲೇ ತುಂಬಾ ಸುಂದರವಾಗಿ ಕಾಣ್ತಿದ್ರಿ' ಅಂತಾರೆ. ಸಣ್ಣ ಇದ್ದಾಗಲೂ ಮಾತಾಡ್ತಾರೆ, ದಪ್ಪ ಆದರೂ ಮಾತಾಡ್ತಾರೆ. ಮೊದಲು ನೀವು ನನ್ನ ಯಾವ ರೀತಿ ಇಷ್ಟಪಡ್ತೀರಾ ಎನ್ನುವುದನ್ನು ಸ್ಪಷ್ಟಪಡಿಸಿಕೊಳ್ಳಿ ಎಂದು ಹೇಳಿದ್ದೇನೆ' ಎಂದು ಪ್ರಿಯಾಮಣಿ ಹೇಳಿಕೊಂಡಿದ್ದಾರೆ.

ನೀನು ಕಪ್ಪು ಅಂದ್ರು, ಆಂಟಿ ತರ ಕಾಣ್ತೀಯ ಅಂದ್ರು..

''ಬಹಳಷ್ಟು ಜನ ನನ್ನನ್ನು ಕಪ್ಪು ಎಂದರು. ನಿನ್ನ ಬಣ್ಣ ಕಪ್ಪು ಎಂದು ಟೀಕಿಸಿದರು. ಚರ್ಮ ಕಪ್ಪಾಗಿದ್ದರೆ ತಪ್ಪೇನಿದೆ? ಕಪ್ಪು ಎಂದು ಯಾರನ್ನು ನಿಂದಿಸಬೇಡಿ. ಅದರಲ್ಲಿಯೂ ಸುಂದರತೆ ಇದೆ'' ಎಂದು ನಟಿ ಪ್ರಿಯಾಮಣಿ ಹೇಳಿದ್ದಾರೆ. ನಾನು ಮೇಕಪ್ ಮಾಡದಿರುವ ಫೋಟೋ ಹಾಕಿದ್ರೆ ತುಂಬಾ ಜನರೂ ಅದರಲ್ಲಿಯೂ ಟೀಕೆ ಮಾಡ್ತಾರೆ. ಓಹ್ ನೀನು ಮೇಕಪ್ ಇದ್ದರೆ ಚೆನ್ನಾಗಿ ಕಾಣ್ತಿಯಾ, ಮೇಕಪ್ ಇಲ್ಲಂದ್ರೆ ಆಂಟಿ ಥರ ಇದ್ದೀಯಾ ಎಂದು ಹೇಳ್ತಾರೆ. ನಾಳೆ ನೀವು ಆಂಟಿ-ಅಂಕಲ್ ಆಗಲೇಬೇಕು ಅಲ್ಲವೇ ಎಂದು ಪ್ರಶ್ನಿಸಿದ್ದಾರೆ.

Reach Count: 
57195