Public News

News Subject: 
ದಿನ ಭವಿಷ್ಯ: 14 ಜೂನ್ 2021
Upload Image: 
PublicNext--514358--node-nid
Category: 
Astrology
Body: 

ಮೇಷ ರಾಶಿ:
ಭೂ ಖರೀದಿ, ವಾಹನ ಖರೀದಿ,ಗೃಹ ನಿರ್ಮಾಣ, ಇದು ಸಕಾಲ ,ವಿಚ್ಛೇದನ ಅಥವಾ ವಿಧವಾ ಮಹಿಳೆಯ ಅಥವಾ ಪುರುಷರಿಗೆ ಮರು ಮದುವೆ ಸಾಧ್ಯತೆ ಇದೆ, ಉದ್ಯೋಗ ಕ್ಷೇತ್ರದಲ್ಲಿ ಒತ್ತಡವಿದ್ದರೂ ಮುನ್ನಡೆಯಿರಿ, ನಿಮ್ಮ ಅನಿಸಿಕೆಯಂತೆ ಕೆಲಸ ಕಾರ್ಯಗಳು ನಡೆಯಲಿವೆ, ವ್ಯಾಪಾರ ವಹಿವಾಟಿನಲ್ಲಿ ಲಾಭಾಂಶ ಉತ್ತಮವಾಗಿದೆ, ವ್ಯಾಪಾರ-ವ್ಯವಹಾರಗಳಲ್ಲಿ ಸದ್ಯಕ್ಕೆ ಬಂಡವಾಳ ಹಾಕುವುದು ಬೇಡ, ಕೆಲಸದಲ್ಲಿ ಧನಾಗಮನವಿದೆ, ದಾಯಾದಿಗಳಿಂದ ಆಗಾಗ ವಾದ-ವಿವಾದಗಳು ಸೃಷ್ಟಿ, ನಿಮ್ಮ ನೆಮ್ಮದಿ ಕೆಡಿಸಲಿದೆ.

ವೃಷಭ ರಾಶಿ:
ಕೆಲಸ ಪಡೆಯುವುದಕ್ಕಾಗಿ ಪ್ರಯತ್ನಬಲದ ಅಗತ್ಯವಿದೆ, ಉದ್ಯೋಗದಲ್ಲಿ ಶತ್ರುಗಳ ಕಾಟ ಕಿರಿಕಿರಿ ಎನಿಸಲಿದೆ, ಶುಭಮಂಗಲ ಕಾರ್ಯಗಳಿಗೆ ಅನುಕೂಲವಾಗಲಿದೆ, ಎಲ್ಲಾ ತರಹದ ವ್ಯಾಪಾರಸ್ಥರಿಗೆ ವ್ಯಾಪಾರದಲ್ಲಿ ಆದಾಯ ದ್ವಿಗುಣವಾಗಲಿದೆ, ಜನಪ್ರತಿನಿಧಿಗಳು ಪಕ್ಷಗಳ ಆಂತರಿಕ, ಕಲಹ ಕಚ್ಚಾಟಗಳು ಎದುರಿಸಲಿದ್ದೀರಿ, ಭೂ ಖರೀದಿ, ವಾಹನ ಖರೀದಿ, ಗೃಹ ನಿರ್ಮಾಣ ಆರ್ಥಿಕ ಸಮಸ್ಯೆ ಎದುರಾಗಲಿದೆ, ನ್ಯಾಯಾಲಯ ತೀರ್ಪು ಯಶಸ್ಸು ನಿಮ್ಮದಾಗಲಿದೆ, ನವಯುವಕರ ಶುಭ್ರತೆ ,ಶಿಸ್ತುಬದ್ಧ ಜೀವನ.

ಮಿಥುನ ರಾಶಿ:
ಕೃಷಿ ತೋಟಗಾರಿಕೆ ಬೆಳೆಯಿಂದ ಆದಾಯ ಕಂಡುಬರುವುದು, ಮದುವೆ ವಿಚಾರದಲ್ಲಿ ಅಡತಡೆಗಳು ಕಂಡುಬಂದರೂ ಕಂಕಣಬಲ ಪ್ರಾಪ್ತಿ ಇದೆ, ಉದ್ಯೋಗ ಕ್ಷೇತ್ರದಲ್ಲಿ ನಿಮ್ಮ ಕ್ರಿಯಾಶೀಲತೆಯಿಂದ ಹೆಚ್ಚಿನ ಜವಾಬ್ದಾರಿ ಸಿಗಲಿದೆ, ಮನೆಗೆ ಹೊಸ ಸದಸ್ಯರ ಆಗಮನ, ಸಭೆಯಲ್ಲಿ ಪಾಲ್ಗೊಳ್ಳುವಿರಿ, ಆಗಾಗ ಧನಾಗಮನದಿಂದ ಮನಸ್ಸಿಗೆ ನೆಮ್ಮದಿ ಸಿಗಲಿದೆ, ಸಂಗಾತಿಯ ಹಿರಿಯರ ಸಲಹೆಗಳಿಗೆ ಮಾನ್ಯತೆ ನೀಡಿರಿ, ಅಧಿಕಾರಿವರ್ಗದವರು ಸಹೋದ್ಯೋಗಿಗಳ ಮೇಲೆ ಹಿಡಿತ ಸಾಧಿಸಿರಿ.

ಕರ್ಕಾಟಕ ರಾಶಿ:
ಸಂತಾನದ ಫಲಶ್ರುತಿ, ಸಂತಾನಕ್ಕಾಗಿ ವೈದ್ಯಕೀಯ ಚಿಕಿತ್ಸೆಗಳನ್ನು ಪಡೆಯುತ್ತಿರುವವರಿಗೆ ಚಿಕಿತ್ಸೆ ಫಲಕಾರಿ, ಬಹುಕಾಲದಿಂದ ಐಷಾರಾಮಿ ಕಾರು ಖರೀದಿ ಮಾಡಬೇಕು ಎಂದುಕೊಳ್ಳುತ್ತಿರುವವರಿಗೆ ಆಸೆ ಈಡೇರುತ್ತದೆ, ಮನಸ್ತಾಪ ಆಗಿ ದೂರ ಹೋದ ದಾಂಪತ್ಯ ಮತ್ತೆ ಹತ್ತಿರ ಆಗಲಿದ್ದಾರೆ, ವಿದೇಶ ಪ್ರಯಾಣ ಯೋಗ ಯಶಸ್ಸು, ಪ್ರೇಮಿಗಳಿಬ್ಬರ ಕುಟುಂಬದಲ್ಲಿ ಶಾಂತಿ ಸೌಹಾರ್ದ ಹೆಚ್ಚಾಗುತ್ತದೆ, ವಿವಾಹ ಯೋಗ ಕೂಡಿ ಬರಲಿದೆ, ಶತ್ರುಗಳ ಉಪಟಳ ಕಡಿಮೆಯಾಗಲಿದೆ, ಆಕಸ್ಮಿಕ ಧನಾಗಮನ, ಸರಕಾರಿ ಶೈಕ್ಷಣಿಕ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವವರಿಗೆ ಹೆಚ್ಚುವರಿ ವೇತನ ಆಗಲಿದೆ.

ಸಿಂಹ ರಾಶಿ:
ವೃತ್ತಿ ಕ್ಷೇತ್ರದಲ್ಲಿ ಸ್ಥಾನದ ಬದಲಾವಣೆ ಸಾಧ್ಯತೆ, ಉದ್ಯೋಗದ ವರ್ಗಾವಣೆ ಕನಸು ನನಸಾಗಲಿದೆ, ಬಹುದಿನದ ಪ್ರಮೋಷನ್ ಇಂದು ತೆರೆಕಾಣಲಿದೆ, ಅವಿವಾಹಿತರಿಗೆ ಮದುವೆ ಭಾಗ್ಯ, ಉದ್ಯೋಗದ ಸಂದರ್ಶನ ನೀಡಿದ್ದು ಆ ಅಪ್ರತಿ ನಿಮ್ಮ ಕೈ ಸೇರಲಿದೆ, ಇದು ಮೊದಲಿನ ಯಶಸ್ಸಿನ ಹೆಜ್ಜೆ, ಇಲಾಖೆಯ ವೃತ್ತಿನಿರತರಿಗೆ ಅನಿರೀಕ್ಷಿತ ರೀತಿಯಲ್ಲಿ ಸಂಪಾದನೆ ಹೆಚ್ಚಾಗುವುದು, ಕೃಷಿಕರಿಗೆ ಧನಲಾಭವಿದೆ, ಶುಭ ಮಂಗಳ ಕಾರ್ಯ ಜರುಗುವ ಸಂಭವ, ಕುಟುಂಬದಲ್ಲಿ ಸುಖ ಶಾಂತಿ ಸಮಾಧಾನವಿರುತ್ತದೆ, ಆರೋಗ್ಯ ಸುಧಾರಣೆ.

ಕನ್ಯಾ ರಾಶಿ:
ಶ್ರವಣದೋಷ ಸಮಸ್ಯೆ ಕಾಡಲಿದೆ, ಹೃದಯಾಘಾತ ಅನುಭವಿಸಿದವರು ಜಾಗ್ರತೆವಹಿಸಿ,
ಮಹಿಳೆಯರು ಕಠಿಣ ಸವಾಲು ಎದುರಿಸುವಿರಿ, ಗರ್ಭಿಣಿಯರು ಜಾಗೃತೆಯಿಂದ ಇರಿ,ವ್ಯಾಪಾರಿಗಳಿಗೆ ಆರ್ಥಿಕ ಹಿನ್ನಡೆ, ಉದ್ಯೋಗ ಕ್ಷೇತ್ರದಲ್ಲಿ ಒಳ್ಳೆಯ ಬೆಳವಣಿಗೆ, ತುಂಬಾ ಕಷ್ಟದಲ್ಲಿ ಇದ್ದವರು ಚೇತರಿಕೆ ಕಾಣುವರು, ಆರೋಗ್ಯದ ಬಗ್ಗೆ ಕಾಳಜಿ ಇರಲಿ, ಉದ್ಯೋಗಿಗಳು ಮೇಲಾಧಿಕಾರಿ ಜೊತೆ ಜಾಗ್ರತೆವಹಿಸಿ, ರಾಜಕಾರಣಿಗಳಿಗೆ ಕೇಂದ್ರ ಅಥವಾ ರಾಜ್ಯ ಸರಕಾರಗಳಿಂದ ಹೆಚ್ಚಿನ ನಿರೀಕ್ಷೆ ಸಫಲತೆ ಪಡೆಯುವಿರಿ, ಕೋರ್ಟು ವ್ಯವಹಾರಗಳಲ್ಲಿ ನಿಮ್ಮಂತೆ ನಿರ್ಣಯ, ಕುಟುಂಬದ ಪದೇಪದೇ ಕಲಹಗಳಿಂದ ಮಾನಸಿಕ ಅಶಾಂತಿ ಹೆಚ್ಚುತ್ತಿದೆ.

ತುಲಾ ರಾಶಿ:
ಉದ್ಯೋಗ ಕಳೆದುಕೊಳ್ಳುವ ಭೀತಿ, ವಿದೇಶ ಪ್ರವಾಸ ಅತಂತ್ರ, ಆಸ್ತಿ ವಿಚಾರದಲ್ಲಿ ಕಾನೂನು ತೊಡಕು ಸಂಭವ, ಅಧಿಕಾರಿ ವರ್ಗದೊಂದಿಗೆ ಸಮಾಧಾನದಿಂದ ವರ್ತಿಸಿ ಅನೇಕ ತೊಂದರೆಗಳಿಂದ ಪಾರಾಗಬಹುದು, ಶತ್ರುಗಳು ನಿಮ್ಮ ಚಲನವಲನ ಪರೀಕ್ಷಿಸುತ್ತಿದ್ದಾರೆ, ಕಠಿಣ ಶ್ರಮದಿಂದ ಸರ್ಕಾರಿ ಉದ್ಯೋಗ ಪಡೆಯುವ ಸಾಧ್ಯತೆ, ದಾಂಪತ್ಯ ವಿರಸ ದಿಂದ ಆರೋಗ್ಯಕ್ಕೆ ಹಾನಿ ಸಂಭವ, ಪ್ರೇಮಿಗಳ ಮದುವೆ ವಿಫಲ, ರಾಜಕಾರಣಿಗಳು ಜಾಗರೂಕತೆಯಿಂದ ಇರುವುದು ಉತ್ತಮ, ನಿಮ್ಮ ಮಕ್ಕಳಿಗೆ ಸ್ವತಂತ್ರ ನೀಡಬೇಡಿ, ವಾಹನ ಅಪಘಾತ ಸಂಭವ.

ವೃಶ್ಚಿಕ ರಾಶಿ:
ಪಿತ್ರಾರ್ಜಿತ ಆಸ್ತಿ ಗಳಿಕೆ, ಉದ್ಯೋಗದಲ್ಲಿ ಧನಲಾಭ, ಪ್ರಯತ್ನಿಸಿದ ಕಾರ್ಯಗಳಲ್ಲಿ ಜಯ, ಸರಕಾರಿ ವರ್ಗದವರಿಗೆ ಪ್ರಮೋಷನ್ ವರ್ಗಾವಣೆ ಇಂಕ್ರಿಮೆಂಟ್ ಸಿಗಲಿದೆ, ಸರ್ಕಾರಿ ಮೇಲಾಧಿಕಾರಿಗಳಿಗೆ ಪ್ರಭಾವಶಾಲಿ ವ್ಯಕ್ತಿಯಿಂದ ಸಮಸ್ಯೆ ಕಾಡಲಿದೆ, ವಾಹನ ಚಾಲನೆ ಮಾಡುವಾಗ ಪೆಟ್ಟು ಸಂಭವ, ಸಾಲದ ಚಿಂತೆಯಿಂದ ನಿದ್ರಾಭಂಗ, ಉದ್ಯೋಗ ಬದಲಾವಣೆ ಸಾಧ್ಯತೆ, ದಾಂಪತ್ಯದಲ್ಲಿ ಮನಸ್ತಾಪ ಮಾಯವಾಗಿ ಕೂಡಿ ಬಾಳುವವರು, ವಿದೇಶದಲ್ಲಿ ನೆಲೆಸಿರುವ ಉದ್ಯೋಗಿಗಳಿಗೆ ಉದ್ಯೋಗದಲ್ಲಿ ಪ್ರಗತಿ, ಪಾಲುದಾರಿಕೆ ವ್ಯವಹಾರದಲ್ಲಿ ನಷ್ಟ ಸಾಧ್ಯತೆ.

ಧನಸ್ಸು ರಾಶಿ:
ಸಂತೋಷದ ಘಟನೆಗಳು ನಡೆಯುವುದು, ಕುಟುಂಬದಲ್ಲಿ ಮಂಗಳ ಕಾರ್ಯ ಚಾಲನೆ, ಸಂಗಾತಿಯ ಕಷ್ಟಕ್ಕೆ ನೆರವಾಗಿವಿರಿ, ಮಹಿಳೆಯರು ಸಾಮಾಜಿಕ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಿರಿ, ಕಡಿಮೆ ಅವಧಿಯಲ್ಲಿ ಹೆಚ್ಚಿನ ಲಾಭ ಗಳಿಸುವ ಸಾಧ್ಯತೆ, ನಿಮ್ಮ ಅದೃಷ್ಟ ನಿಮಗೆ ಅರಿವಾಗಲಿದೆ, ಸಂಗಾತಿಗಳಿಗೆ ಶುಭದಿನ, ವೃದ್ಧರ ಅನಾಥರ ಕಷ್ಟಗಳನ್ನು ಅರ್ಥಮಾಡಿಕೊಂಡು ಕೈಲಾದ ಸಹಾಯ ಮಾಡುವ ಸಮಯ ಬಂದಿದೆ, ಅನಾವಶ್ಯಕವಾಗಿ ಬೇರೊಬ್ಬರಿಗೆ ಅವಮಾನ ಮಾಡಬೇಡಿ, ಕಿರಾಣಿ, ಸಿದ್ಧ ಉಡುಪು, ಹಾರ್ಡ್ವೇರ್, ಬ್ಯೂಟಿ ಪಾರ್ಲರ್, ಅಲಂಕಾರ ಮಾಡುವ ವ್ಯಾಪಾರಸ್ಥರಿಗೆ ಉತ್ತಮ ಧನಲಾಭವಿದೆ.

ಮಕರ ರಾಶಿ:
ದಾಂಪತ್ಯದಲ್ಲಿ ಸಮೃದ್ಧಿ ಹಾಗು ತೃಪ್ತಿ ದಾಯಕ, ಆಸ್ತಿ ಮತ್ತು ಧನಾಗಮನ, ಮದುವೆ ಚರ್ಚೆ ಸಂಭವ, ಸಂತಾನ ಫಲದ ಸಿಹಿಸುದ್ದಿ, ಮಕ್ಕಳಿಂದ ಧನಪ್ರಾಪ್ತಿ, ಕೋರ್ಟ್ ಕೇಸ್ ಜಯ, ಸಾಲದಿಂದ ಮುಕ್ತಿ, ನಿವೇಶನ ಖರೀದಿ ಸಾಧ್ಯತೆ, ಆರೋಗ್ಯ ಸುಧಾರಣೆ, ಹೊಸ ವಾಹನ ಖರೀದಿ, ವಾಸವಾಗಿರುವ ಮನೆ ವಾಸ್ತು ಪ್ರಕಾರ ಬದಲಾಯಿಸುವ ಚಿಂತನೆ, ಶತ್ರುಗಳು ಮಿತ್ರರಾಗುವರು, ಎಲ್ಲಾ ತರಹದ ವ್ಯಾಪಾರಸ್ಥರಿಗೆ ಆರ್ಥಿಕ ಚೇತರಿಕೆ, ಬಂಗಾರದ ಆಭರಣ ಖರೀದಿ ಸಾಧ್ಯತೆ, ಉದ್ಯೋಗ ಸಿಗಲಿದೆ, ಉದ್ಯೋಗಿಗಳಿಗೆ ವರ್ಗಾವಣೆಯ ಭಾಗ್ಯ, ಕೆಲಸದಲ್ಲಿ ಪ್ರಮೋಷನ್ ದೊರೆಯಲಿದೆ, ಪತ್ರಿಕೋದ್ಯಮಿಗಳಿಗೆ ಉದ್ಯೋಗ ಪ್ರಾಪ್ತಿ, ಕೃಷಿಕರಿಗೆ ಧನಾಗಮನ, ಬಹುದಿನದ ಕನಸು ಇಂದು ನೆನಸಾಗುವ ಹಂತ ತಲುಪಿದೆ, ಪ್ರೇಮಿಗಳ ಮದುವೆ ಎರಡು ಕುಟುಂಬಗಳಿಂದ ಗ್ರೀನ್ ಸಿಗ್ನಲ್.

ಕುಂಭ ರಾಶಿ:
ಆಸ್ತಿ ವಿಚಾರಕ್ಕಾಗಿ ಆತಂಕ, ಮಕ್ಕಳಿಂದ ಕುಟುಂಬ ವರ್ಗಕ್ಕೆ ಧಕ್ಕೆ, ಪ್ರೀತಿ-ಪ್ರೇಮದಲ್ಲಿ ಕುಟುಂಬದಿಂದ ಸಮಸ್ಯೆ, ದಾಂಪತ್ಯದಲ್ಲಿ ಅನುಮಾನ, ಇದರಿಂದ ಕುಟುಂಬದಲ್ಲಿ ಅತೃಪ್ತಿ, ಅನಗತ್ಯ ವಿಷಯಗಳಿಂದ ಸಮಸ್ಯೆ ಎದುರಿಸುವಿರಿ, ಹಣಕಾಸು ವ್ಯವಹಾರದಲ್ಲಿ ಮೋಸ ಸಂಭವ, ನಿಮ್ಮ ದುಶ್ಚಟಗಳಿಂದ ಕುಟುಂಬದಲ್ಲಿ ಅಶಾಂತಿ, ಸಣ್ಣ ವಿಚಾರಕ್ಕಾಗಿ ಬಂಧು ಬಾಂಧವರಲ್ಲಿ ಮನಸ್ತಾಪ, ವ್ಯಾಪಾರದಲ್ಲಿ ಅಧಿಕ ನಷ್ಟ ಎದುರಿಸಲಿದ್ದೀರಿ, ಉದ್ಯೋಗಿಗಳು ಅಕ್ರಮ ಧನಸಂಪಾದನೆಯಿಂದ ಸಮಸ್ಯೆ ಎದುರಿಸಲಿದ್ದೀರಿ.

ಮೀನ ರಾಶಿ:
ಕೃಷಿಭೂಮಿ ಖರೀದಿಸುವಿರಿ, ರಿಯಲ್ ಎಸ್ಟೇಟ್ ಉದ್ಯಮದಾರರು ಹೊಸತನಕ್ಕೆ ಕೈ ಹಾಕುವ ಸಾಧ್ಯತೆ, ನೀವು ದೇಶಿಯ ಮೂಲಗಳ ಜೊತೆ ಒಡಂಬಡಿಕೆ ಸಾಧ್ಯತೆ, ಹೊಸ ಫ್ರಾಂಚೈಸಿ ತೆಗೆದುಕೊಳ್ಳುವ ಚಿಂತನೆ, ಪ್ರದೇಶದಲ್ಲಿ ಹೊಸ ನಿವೇಶನ ಖರೀದಿಸುವ ಚಿಂತನೆ ಯಶಸ್ಸು ,ವ್ಯಾಪಾರದಲ್ಲಿ ಆರ್ಥಿಕ ಚೇತನ ಸಿಗುತ್ತದೆ, ನಿಮ್ಮ ಮನದಲ್ಲಿ ಚೈತನ್ಯ ಮೂಡಲಿದೆ, ಉದ್ಯೋಗ ಕಂಡುಕೊಳ್ಳುವುದರಲ್ಲಿ ಸಫಲರಾಗುವಿರಿ, ಮಿತ್ರರು ನಿಮ್ಮ ಕೈಹಿಡಿಯಲಿದ್ದಾರೆ, ಹೊಸ ಅವಕಾಶಗಳು ನಿಮ್ಮ ಕಣ್ಣು ಮುಂದೆ ಗೋಚರ, ಯೋಜನೆಗಳ ಕಾರ್ಯರೂಪಕ್ಕೆ ಪ್ರಯತ್ನಿಸಿ, ಪತ್ನಿಯ ಮಾತಿಗೆ ಮಾನ್ಯತೆ ನೀಡಿ.

Reach Count: 
41415