Kshetra Samachara

Local News Subject: 
ಮಂಗಳೂರು: ಟ್ವೀಟ್ ಮೂಲಕ ತುಳು ಭಾಷೆಗೆ ಅಧಿಕೃತ ರಾಜ್ಯಭಾಷೆ ಮಾನ್ಯತೆಯ ಭರವಸೆ ನೀಡಿದ ನಳಿನ್
City: 
Udupi
Mangalore
Upload Image: 
PublicNext--514277--node-nid
Category: 
Politics
Body: 

ಮಂಗಳೂರು: ತುಳುಭಾಷೆಗೆ ನಮ್ಮ ಅವಧಿಯಲ್ಲಿಯೇ ರಾಜ್ಯಭಾಷೆಯ ಸ್ಥಾನಮಾನ ನೀಡಲಾಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ , ಸಂಸದ ನಳಿನ್ ಕುಮಾರ್ ಕಟೀಲ್ ಟ್ವೀಟ್ ಮೂಲಕ ಭರವಸೆ ನೀಡಿದ್ದಾರೆ‌.

ಒಂದಷ್ಟು ತಾಂತ್ರಿಕ ದೋಷಗಳನ್ನು ಸರಿಪಡಿಸಿಕೊಂಡು ನಮ್ಮ ಅವಧಿಯಲ್ಲಿಯೇ ತುಳು ಭಾಷೆಗೆ ರಾಜ್ಯದ ಅಧಿಕೃತ ಭಾಷೆಯಾಗಿ ಮಾನ್ಯತೆ ನೀಡುತ್ತೇವೆ ಎಂದು ಹೇಳಿರುವ ಅವರು, ತುಳುಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸುವ ಬಗ್ಗೆಯೂ ಸರಕಾರದೊಂದಿಗೆ ಮಾತುಕತೆ ನಡೆಯುತ್ತಿದೆ ಎಂದು ಟ್ವೀಟ್ ಮಾಡಿ, ತುಳುವರ ಸಾಕಷ್ಟು ವರ್ಷಗಳ ಕೂಗಿಗೆ ಬಲ ನೀಡುವಂತಹ ಬೆಂಬಲ ನೀಡಿದ್ದಾರೆ‌.

ತುಳುಭಾಷೆಗೆ ಅಧಿಕೃತ ಸ್ಥಾನಮಾನ ದೊರಕಬೇಕೆಂದು ಸರಕಾರದ ಗಮನ ಸೆಳೆಯಲು #TuluOfficialinKA_KL ಎಂಬ ಹ್ಯಾಶ್ ಟ್ಯಾಗ್ ನಡಿಯಲ್ಲಿ 'ಟ್ವೀಟ್ ತುಳುನಾಡು' ಟ್ವೀಟರ್ ಅಭಿಯಾನವು ಇಂದು ಬೆಳಗ್ಗೆ 6 ರಿಂದ ರಾತ್ರಿ 11.59 ಗಂಟೆವರೆಗೆ ನಡೆಯುತ್ತಿದೆ. ಈ ಹ್ಯಾಶ್ ಟ್ಯಾಗ್ ನಡಿಯಲ್ಲಿಯೇ ಟ್ವೀಟ್ ಮಾಡಿರುವ ನಳಿನ್ ಕುಮಾರ್ ಕಟೀಲ್, 'ಹೆತ್ತು ಹೊತ್ತು ಸಾಕಿ ಸಲಹಿದ ತಾಯಿಯಂತೆ ಮಡಿಲಲ್ಲಿ ಕೂರಿಸಿ ಜೋಗುಳ ಹಾಡಿದ ತಾಯಿ ಭಾಷೆಗೆ ರಾಜ್ಯದ ಅಧಿಕೃತ ಭಾಷೆಯ ಸ್ಥಾನಮಾನ ದೊರಕಬೇಕೆಂಬ ಹೋರಾಟಕ್ಕೆ ನನ್ನ ಬೆಂಬಲ ಖಂಡಿತಾ ಇದೆ. ತುಳುಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರಿಸುವ ಬಗ್ಗೆಯೂ ಸರಕಾರದೊಂದಿಗೆ ಮಾತುಕತೆ ನಡೆಯುತ್ತಿದೆ. ಅಲ್ಲದೆ ರಾಜ್ಯದ ಅಧಿಕೃತ ಭಾಷೆಯಾಗಿ ಮಾನ್ಯತೆ ನೀಡಲಾಗುತ್ತದೆ ಎಂದು ನಳಿನ್ ಟ್ವೀಟ್ ಮಾಡಿದ್ದಾರೆ.

Reach Count: 
9941