Public News

News Subject: 
ಕುದುರೆ ಜೊತೆ ರೇಸ್​​ಗಿಳಿದ ಧೋನಿ
Category: 
Sports
Body: 

ರಾಂಚಿ: ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್ ಮಹೇಂದ್ರ ಸಿಂಗ್ ಧೋನಿ ಮೈದಾನದ ಹೊರಗೂ ಫುಲ್‌ ಆ್ಯಕ್ಟಿವ್ ಆಗಿರುತ್ತಾರೆ. ಮೈದಾನದಲ್ಲಿ ರನ್​ಗಳ ಹಿಂದೆ ಓಡುವ ಧೋನಿ ಇದೀಗ ಕುದುರೆಯೊಂದರ ಜೊತೆಗೆ ರೇಸ್​ಗೆ ಇಳಿದಿದ್ದಾರೆ.

ಎಂ.ಎಸ್‌.ಧೋನಿ ಪತ್ನಿ ಸಾಕ್ಷಿ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡಿದ್ದು, ಅದರಲ್ಲಿ ಧೋನಿ ಕುದುರೆಯ ಬೆನ್ನತ್ತಿದ್ದಾರೆ. ಇದಕ್ಕೆ "ಧೋನಿ ಮತ್ತಷ್ಟು ವೇಗಿಯಾಗಿದ್ದಾರೆ" ಎಂದು ಶೀರ್ಷಿಕೆ ಹಾಕಿ ಕುತೂಹಲ ಮೂಡಿಸಿದ್ದಾರೆ.

ಕೆಲ ದಿನಗಳ ಹಿಂದೆ ಧೋನಿ ಚೇತಕ್ ಹಾಗೂ ಲಿಲ್ಲಿ ಎಂಬ ಹೆಸರಿನ ಎರಡು ಕುದುರೆಗಳನ್ನು ಖರೀದಿಸಿದ್ದರು. ಕುದುರೆಯೊಂದಿಗಿನ ಫೋಟೋವನ್ನು ಸಾಕ್ಷಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದರು.

Reach Count: 
112827