Kshetra Samachara

Local News Subject: 
ಕುಂದಗೋಳ : ಆಕಸ್ಮಿಕ ಬೆಂಕಿ ಅವಘಡ ಆಕಳು ಅಪಾಯದಿಂದ ಪಾರು
City: 
Hubballi-Dharwad
Video Thumbnail: 
PublicNext--511911--node-nid
Category: 
Accident
Body: 

ಕುಂದಗೋಳ : ಆಕಸ್ಮಿಕವಾಗಿ ಕಟ್ಟಿಗೆ ಮತ್ತು ಮೇವಿನ ಬಣವಿಗೆ ಬೆಂಕಿ ತಗುಲಿ ಕೊಟ್ಟಿಗೆಯಲ್ಲಿ ಕಟ್ಟಿದ್ದ ಆಕಳು ಗಾಯಗೊಂಡ ಘಟನೆ ಕುಂದಗೋಳ ತಾಲೂಕಿನ ಹಂಚಿನಾಳ ಗ್ರಾಮದಲ್ಲಿ ಇಂದು ಬೆಳಿಗ್ಗಿನ ಅವಧಿಯಲ್ಲಿ ನಡೆದಿದೆ.

ದೇವೇಂದ್ರಪ್ಪ ವೀರಪ್ಪ ಹಡಪದ ಎಂಬುವವರ ಹಿತ್ತಲಿನ ಬಣವಿಗೆ ಇಂದು ಬೆಳಂ ಬೆಳಿಗ್ಗೆ ಆಕಸ್ಮಿಕ ಬೆಂಕಿ ತಗುಲಿ ಕಟ್ಟಿಗೆ ಮತ್ತು ಮೇವಿನ ಬಣವಿ ಬೆಂಕಿಗೆ ಆಹುತಿ ಆಗಿದ್ದು, ಆ ಬೆಂಕಿಯ ಝಳಕ್ಕೆ ಕೊಟ್ಟಿಗೆಯಲ್ಲಿ ಕಟ್ಟಿಹಾಕಿದ್ದ ಆಕಳ ಕೈ ಕಾಲು ದೇಹಕ್ಕೆ ಗಾಯಗಳಾಗಿದ್ದು ಅದೃಷ್ಟವಶಾತ್ ಆಕಳು ಪ್ರಾಣಾಪಾಯದಿಂದ ಪಾರಾಗಿದೆ.

ತಕ್ಷಣ ಬೆಂಕಿ ನೋಡಿದ ಮನೆಯವರು ಅಗ್ನಿಶಾಮಕ ದಳಕ್ಕೆ ವಿಷಯ ತಿಳಿಸಿದ್ದು ಅಷ್ಟರಲ್ಲಾಗಲೇ ಗ್ರಾಮಸ್ಥರೇ ಬೆಂಕಿ ನಂದಿಸಿ ಅವಘಡಯೊಂದನ್ನು ತಪ್ಪಿಸಿದ್ದಾರೆ.

Reach Count: 
56704