Kshetra Samachara

Local News Subject: 
ಮಂಗಳೂರು: "100 ನಾಟೌಟ್ ಮುಂದುವರಿಯುತ್ತೆ, ಕೇಂದ್ರದಲ್ಲಿ ಕರುಣೆಯಿಲ್ಲದ ಸರಕಾರದ ದುರಾಡಳಿತ"
City: 
Udupi
Mangalore
Category: 
Politics
Body: 

ಮಂಗಳೂರು: ದೇಶದಲ್ಲಿ ತೈಲ ಬೆಲೆ ನೂರರ ಗಡಿ ದಾಟಿದ್ದು ಇದು ಕಡಿಮೆಯಾಗಲ್ಲ. ಇದನ್ನು ಖಂಡಿಸಿ ನಾವು '100 ನಾಟೌಟ್' ಹೆಸರಿನಲ್ಲಿ ಪ್ರತಿಭಟನೆ ನಡೆಸುತ್ತಿದ್ದೇವೆ ಎಂದು
ಮಾಜಿ ಸಚಿವ ಬಿ.ರಮಾನಾಥ ರೈ ತಿಳಿಸಿದ್ದಾರೆ.

ನಗರದ ಕದ್ರಿ‌ ಕೆಪಿಟಿ ಬಳಿ ನಡೆದ ಪ್ರತಿಭಟನೆ ವೇಳೆ ಮಾತನಾಡಿದ ರೈ, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೈಲ ಬೆಲೆ ಬ್ಯಾರೆಲ್ ಗೆ 140 ಡಾಲರ್ ಇದ್ದಾಗಲೂ ಮೇಲಿದ್ದರೂ 70 ವರ್ಷದಲ್ಲಿ ಪೆಟ್ರೋಲ್ ಗೆ 70 ರೂ.ಗಿಂತ ಏರಿಕೆಯಾಗದಂತೆ ಕಾಂಗ್ರೆಸ್ ನೋಡಿಕೊಂಡಿತ್ತು. ಇದೀಗ ಬ್ಯಾರೆಲ್ ಬೆಲೆ ಅತಿ ಕಡಿಮೆ ಆಗಿದ್ದರೂ ಇಂಧನ ಬೆಲೆ ನಿರಂತರವಾಗಿ ಏರುತ್ತಿದೆ.

ಈ ಬಗ್ಗೆ ಜನಸಾಮಾನ್ಯರೊಂದಿಗೆ ಪ್ರತಿಪಕ್ಷಗಳೂ ಧ್ವನಿ ಎತ್ತಬೇಕಾಗಿದೆ. ಕೊರೊನಾದ ಈ ಸಂಕಷ್ಟದ ಸಂದರ್ಭ ಜನ ಸಾಮಾನ್ಯರು ಬದುಕಬೇಕಾದರೆ ಇಂಧನ ಬೆಲೆ ಕಡಿಮೆಯಾಗಬೇಕು. ಆಗ ಅಗತ್ಯ ವಸ್ತು ಬೆಲೆ ಏರಿಕೆಯೂ ನಿಯಂತ್ರಣಕ್ಕೆ ಬರುತ್ತದೆ ಎಂದರು.

Reach Count: 
7918