Public News

News Subject: 
ಸಿದ್ದರಾಮಯ್ಯಗೆ ಬುದ್ಧಿನೇ ಇಲ್ಲ ಎಂದ ಈಶ್ವರಪ್ಪ
Upload Image: 
PublicNext--511881--node-nid
Category: 
Politics
Body: 

ಶಿವಮೊಗ್ಗ: ಕಾಂಗ್ರೆಸ್ ಪಕ್ಷ ವಿಪಕ್ಷ ಸ್ಥಾನದಲ್ಲಿರಲು ವಿಫಲವಾಗಿದೆ. ಮಾಜಿ ಸಿಎಂ ಸಿದ್ದರಾಮಯ್ಯ ಅವರಿಗೆ ಬುದ್ಧಿ ಇಲ್ಲ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಮಾಧ್ಯಮದವರ ಜೊತೆ ಮಾತನಾಡಿದ ಈಶ್ವರಪ್ಪ ನಮ್ಮ ವಿರುದ್ದ ಆರೋಪ ಮಾಡಲು ಸಹ ಕಾಂಗ್ರೆಸ್ ವಿಫಲವಾಗಿದೆ. ಕೋವಿಡ್‍ಗೆ ದೇಶದಲ್ಲಿ ಲಸಿಕೆ ಬಂದ ಆರಂಭದಲ್ಲಿ ಲಸಿಕೆ ತೆಗೆದುಕೊಳ್ಳಬೇಡಿ ಎಂದು ಇಡೀ ದೇಶದಲ್ಲಿ ಅಪಪ್ರಚಾರ ಮಾಡಿದವರೇ ಕಾಂಗ್ರೆಸ್ಸಿಗರು. ಆದರೆ ಈಗ ಲಸಿಕೆ ಪಡೆದುಕೊಳ್ಳಲು ಅವರೇ ಕ್ಯೂನಲ್ಲಿ ನಿಂತಿದ್ದಾರೆ. ಜೊತೆಗೆ ಲಸಿಕೆ ಸಿಗುತ್ತಿಲ್ಲ ಎಂದು ಆರೋಪ ಮಾಡುತ್ತಿದ್ದಾರೆ ಕಿಡಿಕಾರಿದ್ದಾರೆ.

Reach Count: 
30625