Public News

News Subject: 
ಬ್ರೇಕಿಂಗ್: ಪ್ರಥಮ ಪಿಯುಸಿ ಪರೀಕ್ಷೆ ನಡೆಸಲು ನಿರ್ಧಾರ
Upload Image: 
PublicNext--511819--node-nid
Category: 
Politics
Education
Body: 

ಬೆಂಗಳೂರು: ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ತಾಲೂಕು ಮಟ್ಟದಲ್ಲಿ ಆನ್ಲೈನ್ ಪರೀಕ್ಷೆ ನಡೆಸಲು ನಿರ್ಧರಿಸಲಾಗಿದೆ. ಈ ಬಗ್ಗೆ ಈಗಾಗಲೇ ಪಿಯು ಮಂಡಳಿಯು ಎಲ್ಲ ಕಾಲೇಜುಗಳಿಗೆ ಸುತ್ತೋಲೆ ಹೊರಡಿಸಿದೆ.

ಜೂನ್ 20 ರೊಳಗೆ ಮೊದಲ ಅಸೆಸ್ಮೆಂಟ್ ಸಲ್ಲಿಸಲು ಹಾಗೂ ಜುಲೈ 20 ರಂದು 2 ನೇ ಅಸೆಸ್ಮೆಂಟ್ ಸಲ್ಲಿಸಲು ಕೊನೆಯ ದಿನಾಂಕವಾಗಿದೆ. ಈ ಅಸೆಸ್ಮೆಂಟ್ ಆಧಾರಿತವಾಗಿ ಉಪನ್ಯಾಸಕರೇ ಮೌಲ್ಯಮಾಪನ ಮಾಡಿ ಫಲಿತಾಂಶ ಪ್ರಕಟಿಸಲಿದ್ದಾರೆ.

ಇದರ ಮಾದರಿ ಪ್ರಶ್ನೆ ಪತ್ರಿಕೆಗಳು ಈಗಾಗಲೇ ಪಿಯು ಮಂಡಳಿಯ ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದೆ.

Reach Count: 
121930