Public News

News Subject: 
ಬ್ರೇಕಿಂಗ್ : ಕೆಲಸಕ್ಕೆಂದು ಹೊರಟಿದ್ದು ಕೆನಡಕ್ಕೆ: ಮುಟ್ಟಿದ್ದು ಮಂಗಳೂರಿಗೆ!; 38 ಶ್ರೀಲಂಕಾ ಪ್ರಜೆಗಳ ಸೆರೆ
Video Thumbnail: 
PublicNext--511740--node-nid
Category: 
Crime
Law and Order
Body: 

ಮಂಗಳೂರು: ಅಕ್ರಮವಾಗಿ ನುಸುಳಿದ್ದ ಶ್ರೀಲಂಕಾ ಪ್ರಜೆಗಳ ಬಂಧನ ವಿಚಾರಕ್ಕೆ ಸಂಬಂಧಿಸಿ
ಮಂಗಳೂರಲ್ಲಿ ಪೊಲೀಸ್ ಕಮಿಷನರ್ ಎನ್.ಶಶಿಕುಮಾರ್ ಮಾಹಿತಿ ನೀಡಿದ್ದಾರೆ.

ತಮ್ಮ ಕ‍ಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಕಮಿಷನರ್, ಶ್ರೀಲಂಕಾದಿಂದ ತಮಿಳುನಾಡಿನ ತೂತುಕುಡಿಗೆ ಬಂದು ಅಲ್ಲಿಂದ ಕೆನಡಾಗೆ ಹೋಗಲು ನಿರ್ಧರಿಸಿದ್ದರು. ಆದರೆ, ತಮಿಳುನಾಡು ಚುನಾವಣೆ ಹಿನ್ನೆಲೆಯಲ್ಲಿ ಅವರನ್ನು ಮಂಗಳೂರಿಗೆ ತಂದು ಬಿಡಲಾಗಿತ್ತು. ಇಲ್ಲಿಗೆ ಬಂದು ಲಾಡ್ಜ್ ಗಳಲ್ಲಿ ತಿಂಗಳಿನಿಂದ ವಾಸ್ತವ್ಯ ಹೂಡಿದ್ದರು. ಈ ಬಗ್ಗೆ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸದ್ಯ 38 ಜನರನ್ನು ವಶಕ್ಕೆ ಪಡೆದಿದ್ದೇವೆ. ಉಳಿದವರ ಹುಡುಕಾಟ ಮುಂದುವರಿದಿದೆ.

ಬೇರೆ ದೇಶದ ವ್ಯಕ್ತಿಗಳು ಮಂಗಳೂರಿಗೆ ಬಂದು ಅಕ್ರಮ ಆಶ್ರಯ ಪಡೆದಿರುವ ಬಗ್ಗೆ ತನಿಖೆ ಮುಂದುವರಿದಿದೆ. ಇವರಿಗೆ ಆಶ್ರಯ, ನೆರವು ನೀಡಿದ ಇಲ್ಲಿನ ಆರು ಜನರನ್ನು ವಶಕ್ಕೆ ಪಡೆಯಲಾಗಿದೆ. ಅವರಲ್ಲಿ ಕೆಲವರಿಗೆ ಇಂಗ್ಲಿಷ್ ಗೊತ್ತಿದೆ, ಬಹುತೇಕರು ತಮಿಳು ‌ಮಾತನಾಡುತ್ತಾರೆ. ಶ್ರೀಲಂಕಾದಿಂದ ಮಾ. 17ಕ್ಕೆ ಹೊರಟು ತಮಿಳುನಾಡಿಗೆ ಬಂದಿದ್ದಾರೆ. ಮಂಗಳೂರಿನ 2 ಲಾಡ್ಜ್, 2 ಎರಡು ಮನೆಗಳಲ್ಲಿ ವಾಸವಾಗಿದ್ದರು.

ತಮಿಳುನಾಡು ‌ಗುಪ್ತಚರ ಇಲಾಖೆ ಪ್ರಕಾರ ಇವರು ಕೆಲಸಕ್ಕಷ್ಟೇ ಕೆನಡಾಗೆ ಹೋಗುವವರಿದ್ದರು. ಇವರಿಗೆ ಶ್ರೀಲಂಕಾ ಮತ್ತು ತಮಿಳುನಾಡಿನಲ್ಲಿ ಏಜೆಂಟ್ ಇದ್ದಾರೆಂಬ ಮಾಹಿತಿ ಸಿಕ್ಕಿದೆ. ಮಂಗಳೂರಲ್ಲೂ ಏಜೆಂಟ್ ಗಳಿರೋ ಸಾಧ್ಯತೆ ಇದ್ದು, ತನಿಖೆ ನಡೆಸುತ್ತಿದ್ದೇವೆ ಎಂದರು.

Reach Count: 
67017