Kshetra Samachara

Local News Subject: 
ಹುಬ್ಬಳ್ಳಿ: ರುಂಡ ಮುಂಡ ಕೊಲೆ ಪ್ರಕರಣ:ಡಿಎನ್ಎ ವರದಿಗಾಗಿ ಕಾಯುತ್ತಿರುವ ಪೊಲೀಸರು
City: 
Hubballi-Dharwad
Video Thumbnail: 
PublicNext--511579--node-nid
Category: 
Crime
Body: 

ಹುಬ್ಬಳ್ಳಿ: ಅದು ವಾಣಿಜ್ಯನಗರಿ ಹುಬ್ಬಳ್ಳಿಯನ್ನೇ ಬೆಚ್ಚಿ ಬಿಳಿಸಿದ್ದ ಕೊಲೆ ಪ್ರಕರಣ. ಪ್ರೀತಿ ಹಾಗೂ ಆಸ್ತಿ ಹೊಡೆಯುವ ಕುತಂತ್ರಕ್ಕೆ ನಡೆದಿತ್ತು ಬೀಕರ ಕೊಲೆ. ಈಗ ಆ ಕೊಲೆ ಪ್ರಕರಣ ದಿನಕ್ಕೊಂದು ಟ್ವಿಸ್ಟ್ ನೀಡುತ್ತಿದೆ. ಹಾಗಿದ್ದರೇ ಯಾವುದು ಆ ಕೊಲೆ ಪ್ರಕರಣ..? ಪ್ರಕರಣದ ಟ್ವಿಸ್ಟ್ ಆದರೂ ಏನು ಅಂತೀರಾ ಈ ಸ್ಟೋರಿ ನೋಡಿ...

ಕಳೆದ ಕೆಲವು ದಿನಗಳ ಹಿಂದೆ ಹುಬ್ಬಳ್ಳಿ ತಾಲೂಕಿನ ದೇವರಗುಡಿಹಾಳದಲ್ಲಿ ನಡೆದಿದ್ದ ರುಂಡ ಮುಂಡ ಕೊಲೆ ಪ್ರಕರಣ ದಿನಕ್ಕೊಂದು ಹೊಸ ಹೊಸ ತಿರುವುಗಳು ಸಿಗುತ್ತಿವೆ. ಚಿತ್ರ ನಟಿಯೇ ಕೊಲೆ ಮಾಡಿಸಿದ ಪ್ರಕರಣಕ್ಕೆ ಈಗ ಟ್ವಿಸ್ಟ್ ಸಿಕ್ಕಿದ್ದು,‌ ರುಂಡ ಮುಂಡ ಕೊಲೆ ಪ್ರಕರಣದ ತನಿಖೆಯನ್ನು ಆಳಕ್ಕೆ ಇಳಿದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕೊಲೆಯಾದ ರಾಕೇಶ್ ಕಾಟವೆಯ ಡಿಎನ್ಎ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ. ವಾರಾನುಗಟ್ಟಲೆ ದಿನಕ್ಕೊಂದು ತಿರುವು ಪಡೆಯುತ್ತಿದ್ದ ಪ್ರಕರಣವನ್ನು ಬೆನ್ನಟ್ಟಿದ್ದ ಪೊಲೀಸರು ಸುಟ್ಟ ಸ್ಥಿತಿಯಲ್ಲಿ ಸಿಕ್ಕ ಮೃತ ದೇಹ ರಾಕೇಶ್ ಕಾಟವೇ ಅವನದೇ ಎಂಬುವುದಕ್ಕೆ ಡಿಎನ್ಎ ವರದಿಗಾಗಿ ಕಾಯುತ್ತಿದ್ದಾರೆ.

ಚಿತ್ರ ನಟಿ ಶನಾಯ್ ಕಾಟವೆ ತನ್ನ ಸಹೋದರನನ್ನೆ ರುಂಡ-ಮುಂಡ ಕತ್ತರಿಸಿ ಬರ್ಬರವಾಗಿ ಕೊಲೆ ಮಾಡಿಸಿದ್ದ ಪ್ರಕರಣ ವಾಣಿಜ್ಯನಗರಿ ಜನರನ್ನು ಬೆಚ್ಚಿ ಬಿಳಿಸಿತ್ತು. ಈ ಪ್ರಕರಣದಲ್ಲಿ ಈಗಾಗಲೇ 8 ಆರೋಪಿಗಳನ್ನು ಪೊಲೀಸರು ಹೆಡೆಮುರಿಕಟ್ಟಿದ್ದಾರೆ. ಕೇಶ್ವಾಪುರ ಮತ್ತು ಹುಬ್ಬಳ್ಳಿ ಗ್ರಾಮೀಣ ಠಾಣೆ ವ್ಯಾಪ್ತಿಯಲ್ಲಿ ಸುಟ್ಟ ಸ್ಥಿತಿಯಲ್ಲಿ ದೊರೆತ ರುಂಡ-ಮುಂಡಗಳು ಕೊಲೆಯಾದ ರಾಕೇಶನದೇ ಎಂಬುದು ಡಿಎನ್ಎ ವರದಿಗಾಗಿ ಪೊಲೀಸರು ಕಾಯುತ್ತಿದ್ದಾರೆ.

ಶನಾಯ್ ಮತ್ತು ನಿಯಾಜ್ ನಡುವೆ ಪ್ರೀತಿ ಅಂಕುರವಾಗಿತ್ತು. ಶನಾಯ್ ಸಹೋದರ ರಾಕೇಶ ವಿರೋಧ ವ್ಯಕ್ತಪಡಿಸಿದ್ದ. ಎಪ್ರಿಲ್ 9 ರಂದು ರಾಕೇಶ್‌ನನ್ನು ಬೈಕಿನಲ್ಲಿ ಕರೆದುಕೊಂಡು ಹೋಗಿ ತಾರಿಹಾಳ ಸೇತುವೆ ಬಳಿ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದರು. ನಂತರ ಶವವನ್ನು ಶಿಕ್ಷಾ ನಗರದ ಬಾತ್ ರೂಮ್‌ನಲ್ಲಿಟ್ಟಿದ್ದರು. ಅಲ್ತಾಫ್ ಮತ್ತು ನಿಯಾಜ್ ಶವದ ರುಂಡ-ಮುಂಡ ಬೇರ್ಪಡಿಸಿ ಪ್ರಕರಣ ಮುಚ್ಚಿ ಹಾಕಲು ಸುಟ್ಟು ಹಾಕಿದ್ದರು. ಶನಾಯ್ ಮತ್ತು ರಾಕೇಶ್ ಅವರ ತಾಯಿ ಹೆಸರಲ್ಲಿ ಕೆಲ ನಿವೇಶನಗಳು ಇದ್ದವು.‌ ತಾಯಿ ಮೃತಪಟ್ಟಿದ್ದರಿಂದ ಆಕೆಯ ಹೆಸರಲ್ಲಿದ್ದ ನಿವೇಶನಗಳನ್ನು ಶನಾಯ್ ತನ್ನ ಪ್ರಿಯಕರನ ಜೊತೆಗೂಡಿ ಕಬಳಿಸಲು ತಂತ್ರ ನಡೆಸಿ ರಾಕೇಶನನ್ನೇ ಇಲ್ಲವಾಗಿಸಿ ಬಿಟ್ಟರೆ ತಮ್ಮ ಪ್ರೀತಿಗೂ ಅಡ್ಡ ಬರೋರು ಯಾರೂ ಇಲ್ಲ ಎಂದು ಕೊಲೆ ಮಾಡಲಾಗಿತ್ತು.

Reach Count: 
53520