Public News

News Subject: 
ಅನ್ ಲಾಕ್ ಆಗಿದೆ ಎಂದು ಯಾಮಾರಬೇಡಿ : ಎಚ್ಚರಿಕೆ ವಹಿಸಿ ಸುಧಾಕರ್
Upload Image: 
PublicNext--511577--node-nid
Category: 
Politics
Health & Fitness
COVID
Body: 

ಬೆಂಗಳೂರು : ಹೆಮ್ಮಾರಿ ಸೋಂಕಿನಿಂದ ರಾಜ್ಯಕ್ಕೆ ಹಾಕಿದ ಬೀಗವನ್ನು ಸದ್ಯಕ್ಕೆ ತೆಗೆಯಲಾಗಿದೆ. ಅದು 11 ಜಿಲ್ಲೆಗಳನ್ನು ಹೊರತುಪಡಿಸಿ.. ಈಗ ರಾಜ್ಯದಲ್ಲಿ ಕೊರೊನಾ ಕೊಂಚ ಇಳಿಕೆಯಾದ ಹಿನ್ನೆಲೆ ಅನ್ ಲಾಕ್ ಮಾಡಿದ್ದು, ಆದರೂ ಜನ ಎಚ್ಚರಿಕೆಯಿಂದ ಇರಬೇಕು ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿದರು. ಎರಡು ಡೋಸ್ ಲಸಿಕೆ ಪಡೆಯೋವರೂ ಎಚ್ಚರವಾಗಿ ಇರಬೇಕು. ರಾಜ್ಯದಲ್ಲಿ ಕನಿಷ್ಟ 70% ಡೋಸ್ ಲಸಿಕೆ ಕಂಪ್ಲೀಟ್ ಆದ ಮೇಲೆ ನಾವು ಮೊದಲಿನಂತೆ ಆರಾಮಾಗಿ ಇರಬಹುದು ಎಂದರು.

ಲಸಿಕೆ ಹಾಕಿಸಿಕೊಳ್ಳೋವರೆಗೂ ಯಾರು ಮೈ ಮರೆಯಬೇಡಿ. ರಾಜ್ಯದಲ್ಲಿ ಆರ್ಥಿಕ ನಷ್ಟ ಆಗಿದೆ. ಹೀಗಾಗಿ ಕೆಲ ವಿನಾಯಿತಿ ಕೊಡಲಾಗಿದೆ. ಅಳೆದು ತೂಗಿ ನಿರ್ಧಾರ ಮಾಡಿದ್ದೇವೆ. ಒಂದು ವೇಳೆ ರಿಯಾಯ್ತಿಯಿಂದ ಸೋಂಕು ಹೆಚ್ಚಳವಾದ್ರೆ ಮತ್ತೆ ಕಠಿಣ ಕ್ರಮ ಗ್ಯಾರಂಟಿ ಎಂದು ಸುಧಾಕರ್ ಹೇಳಿದರು. 10% ಹೆಚ್ಚು ಸೋಂಕು ಇರುವ ಜಿಲ್ಲೆಗಳು ಗಂಭೀರವಾಗಿ ಪರಿಗಣಿಸಬೇಕು. 5% ಒಳಗೆ ಸೋಂಕು ಇರುವ ಜಿಲ್ಲೆಗಳು ಎಚ್ಚರ ತಪ್ಪಬಾರದು..

ಒಂದು ಗ್ರಾಮದಲ್ಲಿ 5 ಸೋಂಕಿತರು ಕಂಡು ಬಂದರೇ ಅ ಗ್ರಾಮವನ್ನೆ ಸೀಲ್ ಡೌನ್ ಮಾಡಬೇಕು. ಬೆಂಗಳೂರು ನೋಡಿದರೆ ನನಗೂ ಭಯ ಆಗುತ್ತದೆ. ಸ್ವಲ್ಪ ಎಚ್ಚರ ತಪ್ಪಿದರೂ ಅಪಾಯ ಗ್ಯಾರಂಟಿ. ಇದರಿಂದ ಜನ ಎಚ್ಚರಿಕೆಯಿಂದ ಇರಬೇಕು. ಸರ್ಕಾರದ ನಿಯಮ ಎಲ್ಲರೂ ಕಡ್ಡಾಯವಾಗಿ ಪಾಲನೆ ಮಾಡಬೇಕು ಎಂದರು.

Reach Count: 
43576