Public News

News Subject: 
ತುಟ್ಟಿಯಾದ ತೈಲ : ದರ ಎಲ್ಲೆಲ್ಲಿ ಎಷ್ಟೆಷ್ಟು
Upload Image: 
PublicNext--511491--node-nid
Category: 
Business
Body: 

ನವದೆಹಲಿ: ಕೊರೊನಾ ಸಂಕಷ್ಟದ ನಡುವೆಯೇ ಜನತೆಗೆ ತೈಲ ಬೆಲೆ ಜಾಸ್ತಿಯಾಗಿರುವುದು ನುಂಗಲಾರದ ತುತ್ತಾಗಿದೆ. ದೇಶಾದ್ಯಂತ ಪೆಟ್ರೋಲ್, ಡೀಸೆಲ್ ಬೆಲೆಗಳಲ್ಲಿ ಮತ್ತೆ ಏರಿಕೆಯಾಗಿದ್ದು, ಪೆಟ್ರೋಲ್ 29 ಪೈಸೆ ಮತ್ತು ಡೀಸೆಲ್ 29 ಪೈಸೆ ಏರಿಕೆಯಾಗಿದೆ.
ಸರ್ಕಾರಿ ಸ್ವಾಮ್ಯದ ತೈಲ ಸಂಸ್ಕರಣಾ ಕಂಪನಿಗಳು (ಒಎಂಸಿ) ಶುಕ್ರವಾರ ದೇಶಾದ್ಯಂತ ಇಂಧನ ದರವನ್ನು ಮತ್ತೊಮ್ಮೆ ಹೆಚ್ಚಿಸಿದ್ದು, ಈ ಮೂಲಕ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಹೊಸ ದಾಖಲೆಯ ಗರಿಷ್ಠ ಮಟ್ಟಕ್ಕೆ ತಲುಪಿದೆ.

ಇಂಡಿಯನ್ ಆಯಿಲ್ ಕಾರ್ಪೊರೇಷನ್ ಮೂಲಗಳ ಪ್ರಕಾರ ಪ್ರತೀ ಲೀಟರ್ ಪೆಟ್ರೋಲ್ ದರದಲ್ಲಿ 29 ಪೈಸೆ ಮತ್ತು ಡೀಸೆಲ್ ದರ 29 ಪೈಸೆ ಏರಿಕೆಯಾಗಿದೆ. ಬೆಂಗಳೂರಿನಲ್ಲಿ ಲೀಟರ್ ಪೆಟ್ರೋಲ್ ದರ 99.11 ಲೀಟರ್ ಡೀಸೆಲ್ ದರ 92.03ರೂ ಗೆ ಏರಿಕೆಯಾಗಿದೆ. ದೆಹಲಿಯಲ್ಲಿ ಪೆಟ್ರೋಲ್ ದರ 95.91ಕ್ಕೆ ಡೀಸೆಲ್ ದರ 86.81ರೂ ತಲುಪಿದೆ. ಮುಂಬೈನಲ್ಲಿ ಪೆಟ್ರೋಲ್ 102.1,ಡೀಸೆಲ್ ದರ 94.2ರೂ ಕೋಲ್ಕತಾದಲ್ಲಿ ಪೆಟ್ರೋಲ್ 95.86, ಡೀಸೆಲ್ 89.65ರೂ. ಚೆನ್ನೈನಲ್ಲಿ ಪೆಟ್ರೋಲ್ 97.24 ಡೀಸೆಲ್ 1.47 ರೂ ಗೆ ಏರಿಕೆಯಾಗಿದೆ.

Reach Count: 
33434