Kshetra Samachara

Local News Subject: 
ಹಳೆಯಂಗಡಿ: ಕೊಳುವೈಲ್ ರಸ್ತೆಯತ್ತ ಗಿಡಗಂಟಿ ದಾಪುಗಾಲು; ಸ್ವಚ್ಛತೆಗೆ ಅಹವಾಲು
City: 
Udupi
Mangalore
Video Thumbnail: 
PublicNext--511261--node-nid
Category: 
Infrastructure
Body: 

ಮುಲ್ಕಿ: ಮುಲ್ಕಿ ಬಳಿಯ ಹಳೆಯಂಗಡಿ ಗ್ರಾಪಂ ವ್ಯಾಪ್ತಿಯ ಕೊಳುವೈಲಿನ ಸೇತುವೆಯಿಂದ ಪಡುಹಿತ್ಲುವರೆಗೆ ಹೋಗುವ ಮಾರುತಿ ಮಿಲ್ ಸಮೀಪದ ಕಾಂಕ್ರೀಟ್ ರಸ್ತೆ ಬದಿ ಗಿಡಗಂಟಿಗಳ ಪೊದೆ ಹಬ್ಬಿ ಅಪಾಯಕಾರಿಯಾಗಿ ಪರಿಣಮಿಸಿದೆ ಎಂದು ದ.ಕ. ಜಿಲ್ಲಾ ಬಡಜನರ ಹಾಗೂ ನದಿಕೊರೆತ ಎದುರಿಸುವವರ ಸಂಘದ ಅಧ್ಯಕ್ಷ ಡೇನಿಯಲ್ ದೇವರಾಜ್ ತಿಳಿಸಿದ್ದಾರೆ.

ಈ ಬಗ್ಗೆ ಮಾತನಾಡಿದ ದೇವರಾಜ್, ಕೊಳುವೈಲು ಸೇತುವೆಯಿಂದ ಪಡುಹಿತ್ಲುವರೆಗಿನ ಕಾಂಕ್ರೀಟ್ ರಸ್ತೆ ಇಕ್ಕೆಲದಲ್ಲಿ ಬೇಕಾಬಿಟ್ಟಿಯಾಗಿ ಬೆಳೆದಿರುವ ಮುಳ್ಳು ಗಿಡ ಸಹಿತ ಪೊದೆಗಳ ಕಾರಣದಿಂದಾಗಿ ಈ ಪರಿಸರದಲ್ಲಿ ಹೆಗ್ಗಣ, ಹಾವು ಸಹಿತ ವಿಷಜಂತುಗಳ ಹಾವಳಿ ತೀವ್ರಗೊಂಡಿದ್ದು, ಪಾದಚಾರಿಗಳು, ವಾಹನ ಸವಾರರು ಭಯ- ಭೀತಿಯಿಂದಲೇ ಸಂಚರಿಸುವಂತಾಗಿದೆ.

ಆದ್ದರಿಂದ ಹಳೆಯಂಗಡಿ ಗ್ರಾಪಂ ಅಧಿಕಾರಿಗಳು ಈ ಪ್ರದೇಶ ಸ್ವಚ್ಛಗೊಳಿಸಲು ಶೀಘ್ರ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ಗ್ರಾಮಸ್ಥರು ಹಾಗೂ ಸಂಘದ ವತಿಯಿಂದ ರಸ್ತೆ ಇಕ್ಕೆಲ ಸ್ವಚ್ಛ ಪಡಿಸುವುದಲ್ಲದೆ ಗ್ರಾಪಂ ಕಚೇರಿ ಎದುರು ಪ್ರತಿಭಟನೆಯನ್ನೂ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

Reach Count: 
11616