Public News

News Subject: 
ಕೊನೆಗೂ ಸೆರೆಸಿಕ್ಕ ಪುಂಡಾನೆಗಳು: ಹಾಸನ ಮಂದಿ ನಿಟ್ಟುಸಿರು
Upload Image: 
PublicNext--511246--node-nid
Category: 
Nature
Body: 

ಹಾಸನ: ಜಿಲ್ಲೆಯ ಸಕಲೇಶಪುರ, ಅಲೂರು ಭಾಗದಲ್ಲಿ ಪುಂಡಾಟಿಕೆ ತೋರುತ್ತಿದ್ದ ಎರಡು ಪುಂಡಾನೆಗಳು ಅರಣ್ಯ ಇಲಾಖೆ ಖೆಡ್ಡಾದಲ್ಲಿ ಸೆರೆಯಾಗಿವೆ. ಈ ಆನೆಗಳಿಗೆ ರೇಡಿಯೋ ಕಾಲರ್ ಅಳವಡಿಸಲಾಗಿದೆ ಎಂದು ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ. ಬಸವರಾಜ್ ತಿಳಿಸಿದ್ದಾರೆ.
ಕೋವಿಡ್ ಕಾಲದಲ್ಲಿ ನಡೆದ ಆನೆಗಳ ಸರೆ ಕಾರ್ಯಾಚರಣೆ ಸವಾಲಿನದ್ದಾಗಿತ್ತು.

ಕಾರ್ಯಾಚರಣೆಯಲ್ಲಿ ಪಾಲ್ಗೊಂಡ ಎಲ್ಲಾ ಅಧಿಕಾರಿ ಸಿಬ್ಬಂದಿ, ಆನೆಗಳ ಮಾವುತರು, ಆರೈಕೆಗಾರರೆಲ್ಲರಿಗೂ ಒಂದು ದಿನ ಮೊದಲೇ ಕೋವಿಡ್ ಪರೀಕ್ಷೆ ನಡೆಸಿ ಸೋಂಕು ಇಲ್ಲದೆ ಇರುವುದನ್ನು ಖಚಿತಪಡಿಸಿಕೊಂಡು ಕಾರ್ಯಾಚರಣೆ ಮಾಡಲಾಗಿದೆ ಎಂದು ಡಾ. ಬಸವರಾಜ್ ಹೇಳಿದ್ದಾರೆ.

Reach Count: 
14031