Public News

News Subject: 
ಲಸಿಕೆ ಪೋಲು: ಜಾರ್ಖಂಡ್ ಮೊದಲು, ಕೊನೆಯಲ್ಲಿ ಬಂಗಾಳ
Upload Image: 
PublicNext--511233--node-nid
Category: 
Health & Fitness
COVID
Body: 

ನವದೆಹಲಿ: ಜೂ.21 ರಿಂದ ದೇಶಾದ್ಯಂತ ಹೊಸ ಲಸಿಕೆ ನೀತಿ ಜಾರಿಗೆ ಬರಲಿದ್ದು, ಇದಕ್ಕೂ ಮುನ್ನ ಮೇ ತಿಂಗಳಲ್ಲಿ ರಾಜ್ಯವಾರು ಲಸಿಕೆಗಳು ಪೋಲಾಗಿರುವ ಮಾಹಿತಿ ಲಭ್ಯವಾಗಿದೆ.

ಕೇರಳ ಹಾಗೂ ಪಶ್ಚಿಮ ಬಂಗಾಳದಲ್ಲಿ ಲಸಿಕೆ ಬಳಕೆ ಅತ್ಯಂತ ಪರಿಣಾಮಕಾರಿಯಾಗಿದ್ದು, ಲಸಿಕೆ ಪೋಲು ಋಣಾತ್ಮಕ ಶ್ರೇಣಿಯಲ್ಲಿರುವುದು ಗಮನಾರ್ಹವಾಗಿದೆ. 1.10 ಲಕ್ಷ. 1.61 ಲಕ್ಷ ಡೋಸ್ ಗಳನ್ನು ಅನುಕ್ರಮವಾಗಿ ಎರಡೂ ರಾಜ್ಯಗಳು ಪೋಲಾಗುವುದರಿಂದ ತಪ್ಪಿಸಿ ಉಳಿಸಿದ್ದರೆ, ಜಾರ್ಖಂಡ್ ರಾಜ್ಯ ಅತಿ ಹೆಚ್ಚು ಅಂದರೆ ಶೇ.33.95 ರಷ್ಟು ಲಸಿಕೆಯನ್ನು ಪೋಲು ಮಾಡಿದೆ. ಕೇರಳ ಶೇ.-6.37 ರಷ್ಟು ಲಸಿಕೆಯನ್ನು ಪೋಲು ಮಾಡಿದ್ದರೆ, ಪಶ್ಚಿಮ ಬಂಗಾಳ ಶೇ.-5.48 ರಷ್ಟು ಲಸಿಕೆಯನ್ನು ಪೋಲು ಮಾಡಿದೆ.
ಚತ್ತೀಸ್ ಗಢ ಶೇ.15.79 ರಷ್ಟು ಲಸಿಕೆ, ಮಧ್ಯಪ್ರದೇಶದಲ್ಲಿ ಶೇ.7.35 ರಷ್ಟು ಲಸಿಕೆ ಪೋಲಾಗಿದ್ದರೆ, ಪಂಜಾಬ್, ದೆಹಲಿ, ರಾಜಸ್ಥಾನ, ಉತ್ತರ ಪ್ರದೇಶ, ಗುಜರಾತ್, ಮಹಾರಾಷ್ಟ್ರಗಳಲ್ಲಿ ಅನುಕ್ರಮವಾಗಿ ಶೇ.7.08, ಶೇ.3.95, ಶೇ.3.91, ಶೇ.3.78, ಶೇ.3.63, ಶೇ. 3.59 ರಷ್ಟು ಲಸಿಕೆ ಪೋಲಾಗಿದೆ.

Reach Count: 
61704