ER NEWS

News Subject: 
ಜೈ ಶ್ರೀ ರಾಮ್ ಘೋಷಣೆಯೊಂದಿಗೆ ಪುಷ್ಪಕ ವಿಮಾನದಲ್ಲಿ ಬಂದಿಳಿದ ರಾಮ-ಸೀತೆ!
Upload Image: 
Body: 

ಪೌರಾಣಿಕ, ಧಾರ್ಮಿಕ ಪುಸ್ತಕಗಳಲ್ಲಿ ಉಲ್ಲೇಖಿಸಿದ ತ್ರೇತಾ ಯುಗದ ಪುಷ್ಪಕ ವಿಮಾನಕ್ಕೆ ಬಲವಾದ ತಿರುಗುವ ಬ್ಲೇಡ್‌ಗಳು ಇಲ್ಲದಿರಬಹುದು, ಆದರೆ ಉತ್ತರ ಪ್ರದೇಶ ಸರಕಾರ ಅಯೋಧ್ಯೆಯಲ್ಲಿ ದಿವ್ಯಾ ದೀಪಾವಳಿ ಆಚರಿಸಲು ರಚಿಸಿರುವ ಪುಷ್ಪಕ ವಿಮಾನಕ್ಕೆ ಶಕ್ತಿಯುತ ಬ್ಲೇಡ್‌ಗಳಿವೆ.

ಹೌದು, 14 ವರ್ಷಗಳ ವನವಾಸದ ನಂತರ ರಾಮ-ಸೀತೆಯನ್ನು ಲಕ್ಷ್ಮಣನೊಂದಿಗೆ ಆಯೋಧ್ಯೆಗೆ ಮರಳಿ ಕರೆ ತಂದ ಪುಷ್ಪಕ ವಿಮಾನದ ಸಂಕೇತವೆಂಬಂತೆ ಈ ವಿಮಾನವನ್ನು ಸೃಷ್ಟಿಸಲಾಗಿದೆ. ರಾಮ ಕಥಾ ಪಾರ್ಕಿನಲ್ಲಿ ಸೇರಿದ ಸಾವಿರಾರು ಜನರ ಸಮ್ಮುಖದಲ್ಲಿ ಈ ಹೆಲಿಕಾಪ್ಟರ್ ಹಾರಿದ್ದು, ಶ್ರೀ ರಾಮನ ಮಂತ್ರ ಘೋಷಗಳೊಂದಿಗೆ, ಕೆಳಗೆ ಇರುವವವರಿಗೆ ಪುಷ್ಪ ಮಳೆ ಸುರಿಸಿತು.

ರಾಜ್ಯ ಸರಕಾರದ ಮಹತ್ವಾಕಾಂಕ್ಷೆಯ ದಿವ್ಯ ದೀಪಾವಳಿಯ 'ಶೋಭಾ ಯಾತ್ರೆ' ಸಾಕೇತ್ ಕಾಲೇಜಿನಿಂದ ಪ್ರಾರಂಭಗೊಂಡು ರಾಮ್ ಕಥಾ ಪಾರ್ಕ್‌ ತಲುಪಿತು. ಈ ವೇಳೆ ಶ್ರೀ ರಾಮ, ಸೀತೆ ಹಾಗೂ ಲಕ್ಷಣರ ವೇಷ ಧರಿಸಿದ್ದ ಕಲಾವಿದರು ಹೆಲಿಕಾಪ್ಟರ್‌ನಲ್ಲಿ ಬಂದಿಳಿದದ್ದು, ತ್ರೇತಾ ಯುಗವನ್ನೇ ಮರುಸೃಷ್ಟಿಸಿದಂತಿತ್ತು.

ಈ ಮೂವರು ವೇಷಧಾರಿಗಳನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹಾಗೂ ರಾಜ್ಯಪಾಲರಾದ ರಾಮ್ ನಾಯ್ಕ ಅವರು ಸ್ವಾಗತಿಸಿ, ಸಾಂಕೇತಿಕ ಪಟ್ಟಾಭಿಷೇಕ ನೆರವೇರಿಸಿದರು. ವೇದಿಕೆಯಲ್ಲಿ ಹಲವು ಗಣ್ಯರು ಉಪಸ್ಥಿತರಿದ್ದು, ಎಲ್ಲರೂ ಶ್ರೀ ರಾಮ, ಸೀತೆ ಮತ್ತು ಲಕ್ಷ್ಮಣರಿಗೆ ಆರತಿ ಸಮರ್ಪಿಸಿದರು.

Reach Count: 
1