ER NEWS

News Subject: 
ಡಿಕೆಶಿ, ಯೋಗೇಶ್ವರ್ ಬ್ರದರ್ಸ್ ನಡುವೆ ಶುರುವಾಯ್ತು ರಂಗೀಲಾ ರಾಜಕಾರಣ
Upload Image: 
Body: 

ಇಂಡಿಪೆಂಡೆಂಟ್ ಆಗಿ ಗೆದ್ದು ಕ್ಷೇತ್ರದ ಶಾಸಕರಾದ ಯೋಗೇಶ್ವರ್ ಇದೀಗ ಮತ್ತೆ ಇಂಡಿಪೆಂಡೆಂಟ್ ಆಗಲು ಹೊರಟಿದ್ದಾರಾ? ರಾಜಕಾರಣದಲ್ಲಿ ಶತೃ-ಮಿತ್ರ ಯಾರೂ ಇಲ್ಲ ಎಂಬಂತೆ ಕೈ ಜೋಡಿಸಿ ಇದೀಗ ಅದೇ ಕೈ ಕುಲುಕಾಟವನ್ನು ಕಡೆಗಣಿಸಲಾರಂಭಿಸಿದ್ದಾರಾ? ಮತ್ತೊಂದೆಡೆ ಅದೇ ಯೋಗೇಶ್ವರ್‍ ಅವರ ರಾಜಕೀಯ ಬೆಳವಣಿಗೆಗೆ ಡಿಕೆಶಿ ಸೋದರರು ಕಳೆದ ಹದಿನೆಂಟು ವರ್ಷಗಳಿಂದ ಎಡರು ತೊಡರಾಗಿದ್ದಾರಾ? ಅದೆಲ್ಲವೂ ನಿಗೂಢ. ಆದರೆ ಸತ್ಯವಾಗಿರುವುದು ಬಣ್ಣದ ಬೊಂಬೆಗಳಿಗೆ ಖ್ಯಾತಿ ಪಡೆದಿರುವ ಬೊಂಬೆನಗರಿ ವಿಧಾನಸಭಾ ಕ್ಷೇತ್ರದಲ್ಲಿ ಇದೀಗ ತಲೆ ಎತ್ತಿರುವ ರಂಗೀಲಾ ಜಕಾರಣವಷ್ಟೆ.
ಯೋಗೇಶ್ವರ್ ರಾಜಕಾರಣವನ್ನು ಗಂಭೀರವಾಗಿ ಪರಿಗಣಿಸಿದ್ದಾರೋ ಏನೋ ಗೊತ್ತಿಲ್ಲ. ಆದರೆ ಅದೇ ವಿಚಾರದಲ್ಲಿ ಲೋಪಗಳನ್ನು ಮಾಡಿಕೊಂಡಿದ್ದಾರೆ. ಅದು ಜಗಜ್ಜಾಹಿರು. ಈಗ ವೈಮನಸ್ಸು ಮನೆ ಮಾಡಿದೆ. ಯೋಗೇಶ್ವರ್ ಮತ್ತೆ ರಾಜಕೀಯ ಹಕ್ಕಿಯಾಗಿದ್ದಾರೆ. ಅದೇ ಕಾರಣಕ್ಕೆ ಹಾರುವ ಹಕ್ಕಿ ಹಿಕ್ಕೆ ಬೀಳಿಸಿತು ಎಂಬಂತೆ ಮಾತನಾಡಿದ್ದು ಶಪಥ ರಾಜಕಾರಣಕ್ಕೆ ಮುನ್ನುಡಿ ಬರೆದಿದೆ. ಆವತ್ತು ಜಾನಪದ ಲೋಕದಲ್ಲಿ ಕಾಂಗ್ರೆಸ್ ತೊರೆವ ನಿರ್ಧಾರ ಪ್ರಕಟಿಸಿ ಸೈನಿಕನ ಹೋರಾಟದ ಮುನ್ನುಡಿ ಬರೆದ ಯೋಗೇಶ್ವರ್ ಅವರಿಗೆ ಆ ಗ್ರಂಥದ ಅಧ್ಯಾಯದ ಭಾಗಗಳು ನಾವಾಗುತ್ತೇವೆಂದು ಡಿಕೆಶಿ ಬ್ರದರ್ಸ್ ರಣಕಹಳೆ ಮೊಳಗಿಸಿದ್ದಾರೆ.

ಕಾಂಗ್ರೆಸ್ ಕಾರ್ಯಕರ್ತರ ಸಭೆಯ ಬಗ್ಗೆ ಪುಂಖಾನು ಪುಂಕವಾಗಿ ವರದಿಗಳಾಗಿವೆ. ಅಂಥವರು ಅದೇ ತಮ್ಮ ಪಟೇಲರು ಈ ಹಿಂದೆ ಇಂಥದ್ದೆನ್ನೆಲ್ಲ ಮಾಡಿರುವುದರ ಬಗ್ಗೆ ಚಕಾರ ಎತ್ತದಿದ್ದುದು ದುರಂತವೂ ಹೌದು. ಚೌಡೇಶ್ವರಿ ಕಲ್ಯಾಣ ಮಂಟಪದಲ್ಲಿ ಡಿಕೆಶಿ ಸೋದರರು ಹರಿಹಾಯ್ದದ್ದರ ವಿರುದ್ಧ ಖಾಸಗಿ ಹೊಟೇಲ್‍ನಲ್ಲಿ ಕುಳಿತು ಯೋಗೇಶ್ವರ್ ಹರಿಹಾಯ್ದಿದ್ದಾರೆ. ಅಲ್ಲಿನ ಸತ್ಯಾಸತ್ಯತೆ ಅವರುಗಳಿಗಷ್ಟೆ ಗೊತ್ತು. ಆದರೆ ಯುದ್ದವೊಂದು ಆರಂಭಗೊಂಡಿದೆ. ಯೋಗೇಶ್ವರ್-ರಾಜೇಶ್ ಮತ್ತು ಡಿಕೆಶಿ ಬ್ರದರ್ಸ್ ಇವರಲ್ಲಿ ಯಾರೂ ಗುಡುಗುತ್ತಾರೋ ಎಂಬುದು ಕುತೂಹಲಕಾರಿಯಾಗಿದೆ. ಇದರೊಂದಿಗೆ ಬ್ರದರ್ಸ್ ವಾರ್ ಫಿಕ್ಸ್ ಆಗಿದೆ. ಮುಂದೆ ಕಾದು ನೋಡುವುದಷ್ಟೆ ಬಾಕಿ.

Reach Count: 
1