ER NEWS

News Subject: 
ಮನೆ ಖರೀದಿದಾರರಿಗೆ ಇಲ್ಲಿದೆ ಸಿಹಿಯಾದ ಸುದ್ದಿ
Upload Image: 
Body: 

ಜೀವನದಲ್ಲಿ ಸ್ವಂತ ಮನೆಯನ್ನು ಹೊಂದುವ ಆಸೆಯಿಂದ ಕಷ್ಟಪಟ್ಟು ದುಡಿದ ಹಣವನ್ನು ಬಿಲ್ಡರ್ ಗಳಿಗೆ ಕೊಟ್ಟರೂ, ನಿಗದಿತ ಸಮಯಕ್ಕೆ ಮನೆ ಹಸ್ತಾಂತರ ಮಾಡದೇ ಕೆಲವರು ಸತಾಯಿಸುತ್ತಾರೆ. ಇಂತಹ ರಿಯಲ್ ಎಸ್ಟೇಟ್ ಸಂಸ್ಥೆಗಳಿಗೆ ರಾಷ್ಟ್ರೀಯ ಗ್ರಾಹಕರ ನ್ಯಾಯಾಲಯ(ನ್ಯಾಷನಲ್ ಕನ್ಸ್ಯೂಮರ್ ಕೋರ್ಟ್) ಚಾಟಿ ಬೀಸಿದೆ. ನಿಗದಿತ ಸಮಯದೊಳಗೆ ಗ್ರಾಹಕರಿಗೆ ಮನೆ ಹಸ್ತಾಂತರ ಮಾಡಲು ಸಾಧ್ಯವಾಗದಿದ್ದರೆ, ಕೊಟ್ಟಿದ್ದ ಹಣಕ್ಕೆ ಬಡ್ಡಿ ಸೇರಿಸಿ ಕೊಡುವಂತೆ ತಾಕೀತು ಮಾಡಿದೆ. ಶಾಲಿನಿ ಲಾನ್ಬಾ ಎಂಬುವವರು ಗ್ರೇಟರ್ ನೋಯ್ಡಾದಲ್ಲಿ ರಿಯಲ್ ಎಸ್ಟೇಟ್ ದೈತ್ಯ ಯುನಿಟೆಕ್ ಬಿಲ್ಡರ್ಸ್ ಬಳಿ 2006 ರಲ್ಲಿ ಒಪ್ಪಂದ ಮಾಡಿಕೊಂಡು ಶೇ. 90 ಕ್ಕಿಂತ ಅಧಿಕ ಹಣ ಪಾವತಿಸಿದ್ದಾರೆ.

ಶಾಲಿನಿ ಒಟ್ಟು ಮೊತ್ತ 66,40,938 ರೂ.ನಲ್ಲಿ 59,78,355 ರೂ. ಪಾವತಿಸಿದ್ದು, ಅವರಿಗೆ 3 ವರ್ಷದೊಳಗೆ ಮನೆ ಹಾಗೂ ಹಲವು ಸೌಲಭ್ಯ ಕಲ್ಪಿಸುವುದಾಗಿ ಭರವಸೆ ನೀಡಿದ್ದ ಯುನಿಟೆಕ್ ಬಿಲ್ಡರ್ಸ್ ಮನೆಯನ್ನೇ ಕೊಟ್ಟಿರಲಿಲ್ಲ. ಆದರೆ, 8 ವರ್ಷ ಕಳೆದರೂ ಸಂಸ್ಥೆ ಮನೆ ಕೊಡದ ಕಾರಣ ಶಾಲಿನಿ ಅವರು ಗ್ರಾಹಕರ ಕೋರ್ಟ್ ಮೊರೆ ಹೋಗಿದ್ದರು. ಇದೇ ರೀತಿ ಹಲವು ಪ್ರಮುಖ ಬಿಲ್ಡರ್ ಕಂಪನಿಗಳು ಗ್ರಾಹಕರನ್ನು ಸತಾಯಿಸುತ್ತಿರುವ ಕುರಿತಾಗಿ ಕೋರ್ಟ್ ನಲ್ಲಿ ದೂರು ದಾಖಲಾಗಿದ್ದವು. ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾ. ಅರಿಜಿತ್ ಭರಿಹೋಕ್ ಅವರ ನೇತೃತ್ವದ ಪೀಠ, ನಿಗದಿತ ಸಮಯದೊಳಗೆ ಗ್ರಾಹಕರಿಗೆ ಮನೆ ಹಸ್ತಾಂತರಿಸದ ರಿಯಲ್ ಎಸ್ಟೇಟ್ ಏಜೆನ್ಸಿಯವರು ಬಡ್ಡಿ ಸಮೇತ ಹಣ ಸಂದಾಯ ಮಾಡಬೇಕು ಎಂದು ತೀರ್ಪು ನೀಡಿದೆ

Reach Count: 
1