ER NEWS

News Subject: 
ತಾಜ್ ಮಹಲ್ ಇರುವಲ್ಲಿ ಹಿಂದೆ ಶಿವಾಲಯ ಇತ್ತು: ಬಿಜೆಪಿ ಸಂಸದ
Upload Image: 
Body: 

ಆಗ್ರಾದಲ್ಲಿರುವ ವಿಶ್ವ ಪ್ರಸಿದ್ಧ ಐತಿಹಾಸಿಕ ಸ್ಮಾರಕ ತಾಜ್ ಮಹಲ್ ಕಟ್ಟಡ ಇರುವಲ್ಲಿ ಮೊದಲು ಶಿವ ದೇವಾಲಯ ಇತ್ತು; ಮೊಘಲರು ಅದನ್ನು ಧ್ವಂಸಗೈದರು; ಬಳಿಕ ಅಲ್ಲಿ ತಾಜಮಹಲ್ ಕಟ್ಟಲಾಯಿತು ಎಂದು ಬಿಜೆಪಿಯ ಸಂಸದ ವಿನಯ ಕಟಿಯಾರ್ ಹೇಳಿದ್ದಾರೆ ಮತ್ತು ಆ ಮೂಲಕ ತಾಜ್ ಮಹಲ್ ಕುರಿತಾದ ವಿವಾದಗಳಿಗೆ ಹೊಸ ತಿರುವನ್ನು ಕೊಟ್ಟಿದ್ದಾರೆ. ಸಂಸದ ಕಟಿಯಾರ್ ಅವರು 1990ರ ದಶಕದ ಆದಿಯಲ್ಲಿ ನಡೆದಿದ್ದ ಆಯೋಧ್ಯಾ ರಾಮ ಮಂದಿರ ಆಂದೋಲನದಲ್ಲಿ ಮುಂಚೂಣಿಯಲ್ಲಿದ್ದವರು.

ತಾಜ್ ಮಹಲ್ ಇರುವಲ್ಲಿ ಮೊದಲು ಇದ್ದ ಶಿವ ದೇವಾಲಯ ಮತ್ತು ಶಿವ ಲಿಂಗವನ್ನು ಮೊಘಲರು ನಾಶಪಡಿಸಿದ್ದಲ್ಲದೆ ಹಿಂದೂಗಳ ಹೆಚ್ಚಿನೆಲ್ಲ ಆರಾಧನಾ ಸ್ಥಳಗಳನ್ನು ಕೂಡ ನಾಶಪಡಿಸಿದ್ದರು ಎಂದು ಕಟಿಯಾರ್ ಹೇಳಿದರು. ಕೆಲವು ದಿನಗಳ ಹಿಂದೆ ಬಿಜೆಪಿ ಶಾಸಕ ಸಂಗೀತ್ ಸೋಮ್ ಅವರು "ತಾಜ್ ಮಹಲ್ ಕಟ್ಟಡವನ್ನು ಕಟ್ಟಿದವರು ದ್ರೋಹಿಗಳು; ಅದು ಭಾರತೀಯ ಸಂಸ್ಕೃತಿಯಲ್ಲಿನ ಒಂದು ಕಪ್ಪು ಚುಕ್ಕೆ, ಅದು ನಮ್ಮ ಭಾರತೀಯ ಸಂಸ್ಕೃತಿಯ ಪ್ರತೀಕವಲ್ಲ; ಮೊಘಲರು ಹಿಂದೂಗಳನ್ನು ಈ ನೆಲದಿಂದ ಅಳಿಸಿ ಹಾಕಲು ಬಯಸಿದ್ದರು' ಎಂದು ಹೇಳಿದ್ದರು.ಆ ಬಳಿಕ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು, "ಐತಿಹಾಸಿಕ ತಾಜ್ ಮಹಲ್ ಕಟ್ಟಡವನ್ನು ಯಾರು, ಯಾಕಾಗಿ ಕಟ್ಟಿದರು ಎಂಬುದು ಮುಖ್ಯವಲ್ಲ; ಅದು ಭಾರತೀಯ ಕಾರ್ಮಿಕರ ರಕ್ತ ಮತ್ತು ಬೆವರಿನ ಫಲವಾಗಿದೆ' ಎಂದು ಹೇಳಿದ್ದರು.

ಇಷ್ಟಕ್ಕೂ ತಾಜ್ ಮಹಲ್ ಕುರಿತ ವಿವಾದ ಆರಂಭವಾದದ್ದು ಉತ್ತರ ಪ್ರದೇಶ ಸರಕಾರದ ಪ್ರವಾಸೋದ್ಯಮ ಇಲಾಖೆ ತನ್ನ ಕೈಪಿಡಿಯಲ್ಲಿ ಐತಿಹಾಸಿಕ ಸ್ಮಾರಕ ತಾಜ್ ಮಹಲ್ ಅನ್ನು ಉಲ್ಲೇಖೀಸದೆ ಕೈಬಿಟ್ಟ ಕಾರಣಕ್ಕೆ !

Reach Count: 
1