ER NEWS

News Subject: 
ಎಚ್.ಡಿ.ಕುಮಾರಸ್ವಾಮಿ ರಾಜ್ಯ ಪ್ರವಾಸಕ್ಕೆ ರೆಡಿಯಾಗಿದೆ ಹೈಟೆಕ್ ಬಸ್
Upload Image: 
Body: 

ಮಾಜಿ ಸಿಎಂ ಮತ್ತು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ ಕುಮಾರಸ್ವಾಮಿ 2018 ರ ವಿಧಾನಸಭಾ ಚುನಾವಣೆಗೆ ಭರ್ಜರಿ ಸಿದ್ಧತೆ ನಡೆಸುತ್ತಿದ್ದಾರೆ. ಹೌದು, ಕುಮಾರಸ್ವಾಮಿ ಅವರು ನವೆಂಬರ್ 1 ರಿಂದ ರಾಜ್ಯ ಪ್ರವಾಸ ಪ್ರಾರಂಭಿಸಲಿದ್ದು, ಅದಕ್ಕಾಗಿ ಹೈಟೆಕ್ ಬಸ್ ಸಿದ್ದಪಡಿಸಲಾಗಿದೆ. ರಾಜ್ಯದಲ್ಲಿಯೇ ಮೊದಲ ಬಾರಿಗೆ ಚುನಾವಣಾ ಪ್ರಚಾರಕ್ಕಾಗಿ ಹೈಟೆಕ್ ಬಸ್ ಬಳಕೆಗೆ ಎಚ್.ಡಿಕೆ ಮುಂದಾಗಿದ್ದಾರೆ. ಈ ಬಸ್ ಚೆನ್ನೈನಲ್ಲಿ ಸಿದ್ಧವಾಗಿದೆ.

ಈ ಬಸ್ ಮಿನಿ ಮನೆಯಂತೆಯೇ ಇದ್ದು, ಹೈಡ್ರಾಲಿಕ್ ಬಳಸಿ ಲಿಫ್ಟ್ ಮೂಲಕ ಭಾಷಣ ಮಾಡಲು ವ್ಯವಸ್ಥೆ ಮಾಡಲಾಗಿದೆ. ಜೊತೆಗೆ ಇದರಲ್ಲಿ ಒಂದು ಕೊಡಠಿಯಿದ್ದು, ಪತ್ರೇಕ ಶೌಚಗೃಹವಿದೆ. ಬಸ್ ನಲ್ಲಿ ಐದಾರು ಜನರು ಕುಳಿತು ಚರ್ಚೆ ನಡೆಸಲೂ ಸಹ ಪ್ರತ್ಯೇಕ ವ್ಯವಸ್ಥೆ ಇದೆ.

Reach Count: 
1