ER NEWS

News Subject: 
ಅಗ್ಗವಾಗಲಿದೆ ಹೋಟೆಲ್ ಊಟ-ತಿಂಡಿ
Upload Image: 
Body: 

ಹೋಟೆಲ್ ಗಳ ತೆರಿಗೆ ಭಾರವನ್ನು ಇಳಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಈವರೆಗೆ ಹೋಟೆಲ್ ಮತ್ತು ರೆಸ್ಟೋರೆಂಟ್ ಗಳಿಗೆ ಶೇ.18ರಷ್ಟು ಜಿಎಸ್ಟಿ ವಿಧಿಸಲಾಗುತ್ತಿತ್ತು. ಅದನ್ನು ಶೇ.12ಕ್ಕೆ ಇಳಿಕೆ ಮಾಡುವ ಬಗ್ಗೆ ಚಿಂತನೆ ನಡೆದಿದೆ. ಅಷ್ಟೇ ಅಲ್ಲ ಹೋಟೆಲ್ ಗಳಿಗಿದ್ದ ಇನ್ಪುಟ್ ಟ್ಯಾಕ್ಸ್ ಕ್ರೆಡಿಟ್ ಸೌಲಭ್ಯವನ್ನೂ ಪಾಪಸ್ ಪಡೆಯುವ ಸಾಧ್ಯತೆ ಇದೆ. ಈ ಬಗ್ಗೆ ವಿವಿಧ ರಾಜ್ಯಗಳ ಹಣಕಾಸು ಸಚಿವರನ್ನೊಳಗೊಂಡ ಸಮಿತಿ ಚರ್ಚೆ ನಡೆಸಿದೆ. ಹೊಸ ತೆರಿಗೆ ನೀತಿಯಿಂದ ಹೋಟೆಲ್ ಗಳು ಲಾಭ ಮಾಡಿಕೊಳ್ಳುತ್ತಿದ್ದು, ಗ್ರಾಹಕರ ಜೇಬಿಗೆ ಕತ್ತರಿ ಬೀಳ್ತಿದೆ ಅನ್ನೋ ದೂರು ಕೇಳಿಬಂದಿತ್ತು.
1 ಕೋಟಿ ರೂಪಾಯಿ ವಹಿವಾಟು ನಡೆಸುವ ಹೋಟೆಲ್ ಗಳಿಗೆ ಶೇ.5ರಷ್ಟು ಹಾಗೂ 1 ಕೋಟಿಗಿಂತ ಅಧಿಕ ವಹಿವಾಟು ನಡೆಸುವ ಹೋಟೆಲ್ ಗಳಿಗೆ ಶೇ.12ರಷ್ಟು ತೆರಿಗೆ ವಿಧಿಸಲು ಕೇಂದ್ರ ಸರ್ಕಾರ ಮುಂದಾಗಿದೆ. ಆದ್ರೆ ಫೈವ್ ಸ್ಟಾರ್ ಹೋಟೆಲ್ ಗಳ ತೆರಿಗೆ ಬಗ್ಗೆ ಯಾವುದೇ ಸ್ಪಷ್ಟತೆ ಸಿಕ್ಕಿಲ್ಲ.
ಸದ್ಯ ಎಸಿ ಹೊಂದಿರುವ ರೆಸ್ಟೋರೆಂಟ್ ಗಳಿಗೆ ಶೇ.18ರಷ್ಟು ಜಿಎಸ್ ಟಿ ವಿಧಿಸಲಾಗುತ್ತಿದೆ. ನಾನ್ ಎಸಿ ಹೋಟೆಲ್ ಗಳು ಶೇ.12ರಷ್ಟು ಜಿಎಸ್ಟಿ ಪಾವತಿಸಬೇಕಿದೆ. ಮುಂದಿನ ತಿಂಗಳು ಗುವಾಹಟಿಯಲ್ಲಿ ನಡೆಯುವ ಜಿಎಸ್ಟಿ ಕೌನ್ಸಿಲ್ ಸಭೆಯಲ್ಲಿ ಪರಿಷ್ಕೃತ ತೆರಿಗೆ ದರ ಜಾರಿ ಬಗ್ಗೆ ಚರ್ಚೆಯಾಗಲಿದೆ.

Reach Count: 
1