ER NEWS

News Subject: 
ವೀರಶೈವ–ಲಿಂಗಾಯತ ಬೇರೆ ಬೇರೆ ಧರ್ಮಗಳಲ್ಲ: ವಿಶ್ವೇಶತೀರ್ಥ ಸ್ವಾಮೀಜಿ
Upload Image: 
Body: 

‘ವೀರಶೈವ ಮತ್ತು ಲಿಂಗಾಯತ ಎರಡೂ ಒಂದೇ ಪ್ರಭೇದ ಅಥವಾ ಧರ್ಮವೆಂದು ಸ್ವೀಕರಿಸಿದರೆ ಸಮಗ್ರ ವೀರಶೈವ ಲಿಂಗಾಯತ ಸಮಾಜಕ್ಕೆ ಹೆಚ್ಚಿನ ಬಲ ಬರಲಿದೆ’ ಎಂದು ಪರ್ಯಾಯ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಅಭಿಪ್ರಾಯಪಟ್ಟರು.ಮಂಗಳವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಲಿಂಗಾಯತರಲ್ಲಿ ಎರಡು ತರಹದ ಸಂಪ್ರದಾಯ, ಭಿನ್ನಾಭಿಪ್ರಾಯಗಳಿದ್ದರೂ ಎರಡೂ ಬೇರೆ ಬೇರೆ ಧರ್ಮಗಳಲ್ಲ. ಲಿಂಗಾಯತ ವೀರಶೈವ ಎರಡು ಪ್ರಭೇದಗಳು ಎನ್ನಬಹುದು.

ಹೇಗೆ ದ್ವೈತ, ಅದ್ವೈತಗಳಲ್ಲಿ ಮೂಲಭೂತವಾದ ತಾತ್ವಿಕ ಭಿನ್ನಾಭಿಪ್ರಾಯಗಳಿದ್ದರೂ ಒಂದೇ ವೈದಿಕ ಧರ್ಮದ ಪ್ರಭೇದಗಳೋ, ಅದೇ ರೀತಿ ಅವುಗಳಿಗಿಂತಲೂ ಅತ್ಯಲ್ಪ ಭಿನ್ನತೆ ಇರುವ ಶಿವನೇ ಪರದೈವ ಎನ್ನುವ ಈ ಎರಡೂ ಸಂಪ್ರದಾಯಗಳು ಬೇರೆ ಬೇರೆ ಆಗಿರುವುದು ಸಾಧ್ಯವೇ ಇಲ್ಲ’ ಎಂದರು.

Reach Count: 
1