ER NEWS

News Subject: 
ನ್ಯೂಟ್ರಾನ್‌ ನಕ್ಷತ್ರಗಳ ವಿಸ್ಫೋಟ: ಚಿನ್ನ ಸೃಷ್ಟಿಯ ರಹಸ್ಯ ಬಯಲು
Upload Image: 
Body: 

ಇದು ವಿಶ್ವದ ಅತ್ಯಂತ ಹಿಂಸಾತ್ಮಕ ವಿಸ್ಫೋಟ. ಎರಡು ನ್ಯೂಟ್ರಾನ್‌ ನಕ್ಷತ್ರಗಳು ಪರಸ್ಪರ ಡಿಕ್ಕಿ ಹೊಡೆದು ಚೂರಾಗಿ ಹೋಗುವ ಆಘಾತಕಾರಿ ಘಟನೆ. ಆದರೆ, ಭಯಾನಕ ಘಟನೆ ಚಿನ್ನ ಹೇಗೆ ಹುಟ್ಟಿತು ಎಂಬುದೂ ಸೇರಿದಂತೆ ಬ್ರಹ್ಮಾಂಡದ ಹಲವು ವಿಸ್ಮಯಗಳನ್ನು ತೆರೆದಿಟ್ಟಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಭೂಮಿಯಿಂದ 130 ಮಿಲಿಯನ್‌ ಜ್ಯೋತಿರ್ವರ್ಷಗಳನ್ನು ದೂರದಲ್ಲಿ ಸಂಭವಿಸಿದ ಈ ಘಟನೆಯ ಸಂಕೇತಗಳು ಕಳೆದ ಆಗಸ್ಟ್‌ 17ರಂದು ವಿಜ್ಞಾನಿಗಳಿಗೆ ತಲುಪಿದ್ದವು. ಇದೀಗ ವಿಶ್ವದ ಎಲ್ಲ ಖಗೋಳ ವಿಜ್ಞಾನಿಗಳು ಇದರ ವಿಶ್ಲೇಷಣೆಯಲ್ಲಿ ತೊಡಗಿದ್ದು, ಸೋಮವಾರ ಅತ್ಯಂತ ಕೆಲವೊಂದು ಮಾಹಿತಿಗಳು ಹೊರಬಿದ್ದಿವೆ.

ನಡೆದಿರುವುದೇನು?:
ಆಕಾಶದ ಒಂದು ಮೂಲೆಯಲ್ಲಿ ಎರಡು ನ್ಯೂಟ್ರಾನ್‌ ನಕ್ಷತ್ರಗಳು ಪರಸ್ಪರ ಡಿಕ್ಕಿ ಹೊಡೆದುಕೊಂಡಿವೆ. ಈ ಘರ್ಷಣೆಯಿಂದ ಬಿಡುಗಡೆಗೊಂಡ ಬೆಳಕು ಮತ್ತು ಶಕ್ತಿಯ ಪ್ರಮಾಣದ ಲೆಕ್ಕಾಚಾರದ ಅಧ್ಯಯನವು ಗ್ರಹಗಳ ಪಾಲಿಗೆ ಘಾತಕವಾಗುವ ಗಾಮಾ ಕಿರಣಗಳ ವಿಸ್ಫೋಟದ ಹುಟ್ಟು, ವಿಶ್ವ ವಿಸ್ತಾರವಾಗುತ್ತಿರುವ ರೀತಿಯನ್ನು ಅರಿಯಲು ವಿಜ್ಞಾನಿಗಳಿಗೆ ಅನುಕೂಲ ಮಾಡಿಕೊಟ್ಟಿದೆ. ಅದಕ್ಕಿಂತಲೂ ಮುಖ್ಯವಾಗಿ ಪ್ಲಾಟಿನಂ, ಯುರೇನಿಯಂ ಮತ್ತು ಚಿನ್ನದಂಥ ಅತಿ ಭಾರದ ಲೋಹಗಳ ಹುಟ್ಟಿನ ರಹಸ್ಯವನ್ನೂ ಸ್ವಲ್ಪ ಮಟ್ಟಿಗೆ ತೆರೆದಿಟ್ಟಿದೆ.

ಎಲ್ಲಿ ಸ್ಫೋಟ?:
ಈ ವಿಸ್ಪೋಟ ಸಂಭವಿಸಿರುವುದು ಎನ್‌ಜಿಸಿ 4993 ಎಂಬ ನಕ್ಷತ್ರಪುಂಜದಲ್ಲಿ. ಇಲ್ಲಿ ಎರಡು ನ್ಯೂಟ್ರಾನ್‌ ನಕ್ಷತ್ರಗಳ ಮೂಲಧಾತುಗಳು ಪರಸ್ಪರ ಡಿಕ್ಕಿಯಾಗಿವೆ. ಈ ನಕ್ಷತ್ರಗಳು ಎಷ್ಟೊಂದು ಗಟ್ಟಿ ಎಂದರೆ ಅದರ ಒಂದು ಚಮಚದಷ್ಟು ಭಾಗ ಒಂದು ಬಿಲಿಯನ್‌ ಟನ್‌ನಷ್ಟು ತೂಗುತ್ತದೆ ಎಂದು ಕಾರ್ನೆಗಿ ಖಗೋಳ ವಿಜ್ಞಾನ ಸಂಸ್ಥೆಯ ವಿಜ್ಞಾನ ಮಾರಿಯಾ ಡ್ರೌಟ್‌ ತಿಳಿಸಿದ್ದಾರೆ.

ಕಿಲೊನೊವಾ ಎಂಬ ಹೆಸರಿನ ಈ ಡಿಕ್ಕಿಯು ಭಾರಿ ಪ್ರಮಾಣದಲ್ಲಿ ಗಾಮಾ ಕಿರಣಗಳು, ಗುರುತ್ವಾಕರ್ಷಣ ಅಲೆಗಳುಗಳನ್ನು ಸೃಷ್ಟಿಸಿದೆ. ಇಂತಹುದೊಂದು ಸಾಧ್ಯತೆಯನ್ನು ಅಲ್ಬರ್ಟ್‌ ಐನ್‌ಸ್ಟೀನ್‌ ತಮ್ಮ ಸಿದ್ಧಾಂತದಲ್ಲಿ ವಿವರಿಸಿದ್ದರು. ಈ ವಿಶ್ವ ವಿಸ್ಫೋಟದ ಮಾಹಿತಿಗಳು ಅಮೆರಿಕದ ಲೂಸಿಯಾನಿಯಾ ಮತ್ತು ವಾಷಿಂಗ್ಟನ್‌ ಕೇಂದ್ರದಲ್ಲಿ ದಾಖಲಾದವು. ಇವು ಕಪ್ಪು ರಂಧ್ರಗಳ ಬಗ್ಗೆ ಅಪಾರ ಅಧ್ಯಯನ ನಡೆಸಿದ ಲಿಗೋ ಪ್ರಯೋಗಾಲಯಕ್ಕೆ ಸೇರಿದ ಸಂಸ್ಥೆಗಳು. ಹಬಲ್‌ ಟೆಲಿಸ್ಕೋಪ್‌ ಡಿಕ್ಕಿಯ ಬಳಿಕ ಬೆಳಕನ್ನು ಸೆರೆಹಿಡಿದಿದೆ.

ಸ್ಫೋಟಗೊಂಡ ನಕ್ಷತ್ರಗಳಿಂದ ಸಿಡಿದ ಕಡು ನೀಲಿ ಬಣ್ಣ, ಅತ್ಯಂತ ಬಿಸಿಯಾದ ತುಂಡುಗಳು ಅತಿ ಭಾರ ಲೋಹಗಳಾಗಿದ್ದು, ಕೆಲವು ಚಿನ್ನ, ಪ್ಲಾಟಿನಂ, ಯುರೇನಿಯಂಗಳಾಗಿ ರೂಪಾಂತರ ಹೊಂದಿದವು ಎಂದು ಹೇಳಲಾಗುತ್ತಿದೆ. ಚಿನ್ನದ ಹುಟ್ಟಿನ ಬಗ್ಗೆ ಇದೇ ವಿವರಗಳಿದ್ದರೂ ಮೊದಲ ಬಾರಿ ಅದಕ್ಕೆ ಸಾಕ್ಷಿ ಸಿಕ್ಕಿದೆ. ಇದು ವಿಶ್ವದ ಅತ್ಯಂತ ಹಿಂಸಾತ್ಮಕ ವಿಸ್ಫೋಟ. ಎರಡು ನ್ಯೂಟ್ರಾನ್‌ ನಕ್ಷತ್ರಗಳು ಪರಸ್ಪರ ಡಿಕ್ಕಿ ಹೊಡೆದು ಚೂರಾಗಿ ಹೋಗುವ ಆಘಾತಕಾರಿ ಘಟನೆ. ಆದರೆ, ಭಯಾನಕ ಘಟನೆ ಚಿನ್ನ ಹೇಗೆ ಹುಟ್ಟಿತು ಎಂಬುದೂ ಸೇರಿದಂತೆ ಬ್ರಹ್ಮಾಂಡದ ಹಲವು ವಿಸ್ಮಯಗಳನ್ನು ತೆರೆದಿಟ್ಟಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

Reach Count: 
1