ER NEWS

News Subject: 
ಯಾವುದೇ ಅರ್ಜಿ ಭರ್ತಿ ಮಾಡಿದರೂ, ಇದು ಮೋದಿಯ ಕೆಲಸ. ನಿಮ್ಮ ಬ್ಯಾಂಕ್‌ ಖಾತೆಯ ವಿವರ ಕೇಳಿಕೊಂಡು ಅವನು ಬರುತ್ತಾನೆ ಎಂದು ವ್ಯಾಪಾರಸ್ಥರನ್ನು ಪ್ರಚೋದಿಸಲಾಗುತ್ತಿದೆ’ ಮೋದಿ
Upload Image: 
Body: 

ಜಿಎಸ್‌ಟಿ ನಿರ್ಧಾರವನ್ನು ಮೋದಿ ಒಬ್ಬನೇ ತೆಗೆದುಕೊಂಡಿದ್ದಲ್ಲ. ಎಲ್ಲಾ ರಾಜ್ಯಗಳೊಂದಿಗೆ ಸಮಾಲೋಚನೆ ನಡೆಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಈ ರಾಜ್ಯಗಳ ತಂಡವೇ ಅದನ್ನು ನಿರ್ವಹಿಸುತ್ತಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. ಗಾಂಧಿನಗರದಲ್ಲಿ ಸೋಮವಾರ ಮಾತನಾಡಿದ ಅವರು,‘ಜಿಎಸ್‌ಟಿಗೆ ಸಂಬಂಧಿಸಿದಂತೆ ತೆಗೆದುಕೊಂಡ ನಿರ್ಧಾರದಲ್ಲಿ ಕಾಂಗ್ರೆಸ್‌ ಕೂಡ ಸಮಾನ ಪಾಲುದಾರ. ಈ ಬಗ್ಗೆ ಸುಳ್ಳು ಹರಡಬಾರದು’ ಎಂದು ಹೇಳಿದರು.

‘ಯಾವುದೇ ಅರ್ಜಿ ಭರ್ತಿ ಮಾಡಿದರೂ, ಇದು ಮೋದಿಯ ಕೆಲಸ. ನಿಮ್ಮ ಬ್ಯಾಂಕ್‌ ಖಾತೆಯ ವಿವರ ಕೇಳಿಕೊಂಡು ಅವನು ಬರುತ್ತಾನೆ ಎಂದು ವ್ಯಾಪಾರಸ್ಥರನ್ನು ಪ್ರಚೋದಿಸಲಾಗುತ್ತಿದೆ’ ಎಂದು ಅವರು ಆರೋಪಿಸಿದರು.

Reach Count: 
1