ER NEWS

News Subject: 
ಕಟ್ಟಡ ಕುಸಿತ ಪ್ರಕರಣ : ಸಾವಿನ ಸಂಖ್ಯೆ 5ಕ್ಕೆ ಏರಿಕೆ -ಮೂರು ವರ್ಷದ ಮಗು ಪವಾಡ ಸದೃಶವಾಗಿ ಪಾರು
Upload Image: 
Body: 

ಈಜಿಪುರದ ಕಟ್ಟಡ ಕುಸಿತ ಪ್ರಕರಣದಲ್ಲಿ ಮೃತಪಟ್ಟವರ ಸಂಖ್ಯೆ 5 ಕ್ಕೆ ಏರಿಕೆಯಾಗಿದೆ. ಈ ನಡುವೆ ಕಟ್ಟಡದ ಅವಶೇಷಗಳಡಿ ಸಿಲುಕಿ ಮೃತಪಟ್ಟಿರಬಹುದು ಎಂದು ಎನ್ನಲಾಗಿದ್ದ ಮೂರು ವರ್ಷದ ಮಗುವೊಂದು ಪವಾಡ ಸದೃಶವಾಗಿ ಪಾರಾಗಿದೆ.ಮೂರು ವರ್ಷದ ಸಂಜನಾ ಸೇರಿದಂತೆ ಆರು ಜನ ಕಟ್ಟಡದ ಅವಶೇಷಗಳಡಿ ಸಿಲುಕ್ಕಿದ್ದರು. ರಕ್ಷಣಾ ಕಾರ್ಯಾಚರಣೆ ವೇಳೆ ಸಂಜನಾ ಜೀವಂತವಾಗಿರುವುದು ಪತ್ತೆಯಾಗಿದೆ. ಕೂಡಲೇ ಅಗ್ನಿ ಶಾಮಕ ಸಿಬ್ಬಂದಿ ಸಂಜನಾಳನ್ನು ರಕ್ಷಣೆ ಮಾಡಿ ಚಿಕಿತ್ಸೆ ಕೊಡಿಸಲು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಘಟನೆಯಲ್ಲಿ ಕಟ್ಟಡದಲ್ಲಿದ್ದ ಗರ್ಭಿಣಿ ಅಶ್ವಿನಿ (22) ಪೆರುಮಾಳ್ (42), ಕಲಾವತಿ (68) ರವಿಚಂದ್ರ (30) ಹಾಗೂ ನೆರೆಮನೆಯ ಆಂಧ್ರಪ್ರದೇಶ ಮೂಲದ ವ್ಯಕ್ತಿ ಸಾವನ್ನಪ್ಪಿದ್ದಾರೆ. ಈಗಾಗಲೇ ನಾಲ್ವರ ಮೃತದೇಹವನ್ನು ಹೊರತೆಗೆಯಲಾಗಿದೆ.

Reach Count: 
1