ER NEWS

News Subject: 
ಮತ್ತೆ ಚರ್ಚೆ ಹುಟ್ಟು ಹಾಕಿದ ಟಿಪ್ಪು ಜಯಂತಿ ಆಚರಣೆ
Upload Image: 
Body: 

ಇದೀಗ ಮತ್ತೆ ಟಿಪ್ಪು ಜಯಂತಿ ಆಚರಣೆ ವಿಚಾರ ಸಾಕಷ್ಟು ಸದ್ದು ಮಾಡುತ್ತಿದೆ. ಕೊಡಗು ಜಿಲ್ಲಾ ಪಂಚಾಯತಿ ಟಿಪ್ಪು ಜಯಂತಿ ಆಚರಿಸುವುದಿಲ್ಲ ಅನ್ನೋ ನಿರ್ಣಯವನ್ನ ಕೈಗೊಂಡಿದ್ದು, ಬಿಜೆಪಿಯೂ ಸಹ ಟಿಪ್ಪು ಜಯಂತಿ ಆಚರಣೆ ಬೇಡ ಅಂತಾ ಪಟ್ಟು ಹಿಡಿದಿದೆ. ಆದರೆ, ಇದ್ಯಾವುದಕ್ಕೂ ಕ್ಯಾರೆ ಅನ್ನದ ರಾಜ್ಯ ಸರ್ಕಾರ ಮಾತ್ರ ಟಿಪ್ಪು ಜಯಂತಿ ಆಚರಿಸಿಯೇ ಸಿದ್ಧ ಅಂತಾ ರೆಡಿಯಾಗಿದೆ. ಟಿಪ್ಪು ಜಯಂತಿ ಆಚರಣೆ ಬೇಡವೇ ಬೇಡ ಅಂತಿದೆ ಬಿಜೆಪಿ

ಮೈಸೂರು ಹುಲಿ ಎಂದೇ ಹೆಸರಾದ ಟಿಪ್ಪು ಸುಲ್ತಾನ್ ಜಯಂತಿ ಆಚರಣೆ ಮತ್ತೆ ವಿವಾದಕ್ಕೀಡಾಗಿದೆ. ಟಿಪ್ಪು ಜಯಂತಿಯನ್ನು ಸರ್ಕಾರದ ವತಿಯಿಂದಲೇ ಆಚರಣೆ ಮಾಡಲಾಗುತ್ತಿದೆ. ಈ ಹಿಂದೆ ಟಿಪ್ಪು ಜಯಂತಿ ಆಚರಣೆ ವೇಳೆ ಕೊಡಗು ಜಿಲ್ಲೆಯಲ್ಲಿ ಸಾಕಷ್ಟು ಹಿಂಸಾಚಾರ ನಡೆದಿತ್ತು. ಆದ್ರಿಂದ ಈ ಬಾರಿ ಟಿಪ್ಪು ಜಯಂತಿ ಆಚರಣೆ ಬೇಡ ಅನ್ನೋ ನಿರ್ಣಯವನ್ನ ಬಿಜೆಪಿ ಮತ್ತು ಕೊಡಗು ಜಿಲ್ಲಾ ಪಂಚಾಯತಿ ಕೈಗೊಂಡಿದೆ. ಅಲ್ಪಸಂಖ್ಯಾತ ಇಲಾಖೆಯಿಂದ ಆಚರಣೆ ನಡೆಯಲಿ. ಆದರೆ ಸಮಾಜ ಕಲ್ಯಾಣ ಇಲಾಖೆಯಿಂದ ಆಚರಣೆ ಬೇಡ ಅಂತಾ ಪಟ್ಟು ಹಿಡಿದಿದೆ.

ಟಿಪ್ಪು ಜಯಂತಿ ನಿಲ್ಲಲ್ಲ ಎಂದ ರಾಜ್ಯ ಸರ್ಕಾರ

ಯಾವುದಕ್ಕೂ ಕ್ಯಾರೆ ಎನ್ನದ ರಾಜ್ಯ ಸರ್ಕಾರ ನವೆಂಬರ್ ಹತ್ತರಂದು ಟಿಪ್ಪು ಜಯಂತಿ ಆಚರಿಸಿಯೇ ಸಿದ್ಧ ಅಂತಾ ಹೇಳಿದೆ. ಕೊಡಗು ಜನತೆಗೆ ಟಿಪ್ಪು ಜಯಂತಿ ಬೇಡ ಅನ್ನೋ ನಿರ್ಣಯವನ್ನ ಅಲ್ಲಿನ ಜಿಲ್ಲಾ ಪಂಚಾಯತಿ ತಗೆದುಕೊಂಡಿದ್ದರೂ, ಸರ್ಕಾರ ಮಾತ್ರ ತನ್ನ ಮೊಂಡುತನವನ್ನ ಪ್ರದರ್ಶಿಸುತ್ತಿದೆ.

Reach Count: 
1