ER NEWS

News Subject: 
ಕೇರಳ ರಾಜ್ಯಕ್ಕೆ 60 ಸಾವಿರ ಕೋಟಿ ರು. ಅನುದಾನ ಘೋಷಿಸಿದ ಸಚಿವ ನಿತಿನ್ ಗಡ್ಕರಿ
Upload Image: 
Body: 

ಕೇಂದ್ರ ಸಚಿವ ನಿತಿನ್ ಗಡ್ಕರಿ ಕೇರಳಗೆ 60 ಸಾವಿರ ಕೋಟಿ ರು. ಅನುದಾನ ಘೋಷಿಸಿದ್ದಾರೆ, ಕೊಲ್ಲಂ ನಲ್ಲಿ ಏರ್ಪಡಿಸಿದ್ದ ಜನ ರಕ್ಷಾ ಯಾತ್ರೆಯಲ್ಲಿ ಮಾತನಾಡಿದ ಅವರು, ರಾಷ್ಟ್ರದ ಹಿತಾಸಕ್ತಿಯಲ್ಲಿ ಬಿಜೆಪಿ ಎಂದಿಗೂ ರಾಜಕೀಯ ಬೆರೆಸುವುದಿಲ್ಲ, ಸಬ್ ಕಾ ಸಾಥ್ ಸಬ್ ಕಾ ವಿಕಾಸ್ ನಮ್ಮ ಉದ್ದೇಶವಾಗಿದೆ ಎಂದು ಹೇಳಿದ್ದಾರೆ. ನಾಳೆ ಬೆಳಗ್ಗೆ 11 ಗಂಟೆಗೆ ಕೇರಳ ಸಿಎಂ ಪಿಣರಾಯಿ ವಿಜಯನ್ ಜೊತೆ ಸಭೆ ನಡೆಸಲಾಗುವುದು, ಆ ವೇಳೆ ಕೇರಳ ರಾಜ್ಯಕ್ಕೆ 60 ಸಾವಿರ ಕೋಟಿ ರು, ಅನುದಾನದ ಘೋಷಣೆ ಮಾಡಲಾಗುವುದು ಎಂದು ಹೇಳಿದ್ದಾರೆ.

ಸಿಪಿಎಂ, ಕಾಂಗ್ರೆಸ್, ಮತ್ತು ಇತರೆ ರಾಜಕೀಯ ಪಕ್ಷಗಳು ಏನು ಬೇಡಿಕೆ ಇಟ್ಟಿದ್ದವೋ ಅದನ್ನು ನಾನು ಈಡೇರಿಸಿದ್ದೇನೆ, ಬಿಜೆಪಿ ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿಟ್ಟಿದೆ. ನಮ್ಮನ್ನು ಕೋಮುವಾದಿಗಳೆಂದು ಬಿಂಬಿಸಲಾಗಿದೆ, ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ನಮ್ಮ ಉದ್ದೇಶ, ಅದರಂತೆ ನಾವು ನಡೆಯುತ್ತೇವೆ. ದೇಶಧ ಉಳಿದ ರಾಜ್ಯಗಳಂತೆ ಕೇರಳದಲ್ಲಿಯೂ ಕೂಡ ಬಿಜೆಪಿ ಪ್ರವರ್ಧಮಾನಕ್ಕೆ ಬರುತ್ತದೆ ಎಂದು ಭರವಸೆ ವ್ಯಕ್ತ ಪಡಿಸಿದರು. ಸಿಪಿಐ ಎಂ ವಿರುದ್ಧ ವಾಗ್ದಾಳಿ ನಡೆಸಿದ ಗಡ್ಕರಿ ಶೀಘ್ರವೇ ಸರ್ಕಾರ ಅಂತ್ಯವಾಗುತ್ತದೆ ಎಂದು ಹೇಳಿದ್ದಾರೆ, ಮುಂದಿನ ವಿಧಾನ ಸಭೆ ಚುನಾವಣೆಯಲ್ಲಿ ಕೇರಳ ಜನ ಸಿಪಿಐ ಎಂ ಪಕ್ಷವನ್ನು ತಿರಸ್ಕರಿಸುತ್ತಾರೆ ಎಂದು ಹೇಳಿದ್ದಾರೆ.

Reach Count: 
1