ER NEWS

News Subject: 
ವಾಹನ ಮಾಲೀಕರೇ ಗಮನಿಸಿ, ಇನ್ಮೂಂದೆ ಎಲ್ಲಾ ವಾಹನಗಳಿಗೂ ಹೊಸ ನಂಬರ್ ಪ್ಲೇಟ್ ಕಡ್ಡಾಯ
Upload Image: 
Body: 

ಇದೇ ಮೊದಲ ಬಾರಿಗೆ ಇಡೀ ದೇಶದಲ್ಲಿಯೇ ಹೊಸ ಪ್ರಯೋಗ ಮಾಡಲು ರಾಜ್ಯದ ಸಾರಿಗೆ ಇಲಾಖೆ ಸದ್ಯದಲ್ಲೇ ಜಾರಿಗೆ ತರಲು ಪ್ರಯತ್ನ ನಡಿಸಿದೆ ಎನ್ನಲಾಗಿದೆ.ರಾಜ್ಯದಲ್ಲಿರೋ ಸರಿ ಸುಮಾರು 66 ಲಕ್ಷ ವಾಹನಗಳಿಗೆ ಮೋಟಾರ್ ವೆಹಿಕಲ್ ಆಕ್ಟ್ ಪ್ರಕಾರ ಹೈ ಸೆಕ್ಯುರಿಟಿ ರಿಜಿಸ್ಟ್ರೇಷನ್ ಹೊಸ ನಂಬರ್ ಪ್ಲೇಟ್‍ಗಳನ್ನು ಹಾಕಲಾಗುವುದು ಎನ್ನಲಾಗಿದೆ.

ಇದೇ ವೇಳೆ ಇದಕ್ಕೆ ಸಂಬಂಧಪಟ್ಟಂತೆ ಈಗಾಗಲೇ ಟೆಂಡರ್ ಕರೆಯಲಾಗಿದೆ. ಪ್ರಸ್ತುತ ಒಂದು ವಾಹನದ ನಂಬರ್ ಪ್ಲೇಟಿನ ಬೆಲೆ 1 ಸಾವಿರ ಇದೆ. ಆದರೆ ಹೊಸ ನಂಬರ್ ಪ್ಲೇಟ್‍ಗಳ ಅಳವಡಿಕೆ ಸರ್ಕಾರ ಮುಂದಾದರೆ ಮಾಲೀಕರ ಜೇಬಿಗೆ 2200 ರೂಪಾಯಿ ಕತ್ತರಿ ಬೀಳಲಿದೆ ಎಂದು ಹೇಳಲಾಗುತ್ತಿದ್ದು ಒಂದು ವೇಳೆ ಇದು ಜಾರಿಗೆ ಬಂದರೆ ವಾಹನ ಮಾಲಿಕರೀಗೆ ಹೊರೆ ಬೀಳುವುದು ಖಚಿತವಾಗಿದೆ.

ಇನ್ನು ಮುಂದೆ ವಾಹನ ಕಳ್ಳರಿಗೆ ಮತ್ತು ಬೇರೆ ರೀತಿಯ ವ್ಯವಹಾರ ಮಾಡುವವರು ಸುಲಭವಾಗಿ ಸಿಕ್ಕಿಹಾಕಿಕೊಳ್ಳೋದಂತು ಗ್ಯಾರಂಟಿ. ಹಳೆಯ ಐಎನ್‍ಡಿ ಪ್ಲೇಟ್ ಬದಲಾಗಿ ಇದು ಹೊಸ ವಿನ್ಯಾಸವುಳ್ಳ ಪ್ಲೇಟ್ ಇದಾಗಲಿದ್ದು, ಇದು ದೇಶದಲ್ಲಿಯೇ ಮೊದಲು ಎಂದು ಸಾರಿಗೆ ಸಚಿವರು ಹೇಳಿದ್ದಾರೆ.
ಮುಂದಿನ ದಿವಸದಲ್ಲಿ ಈ ಬಗ್ಗೆ ಸಾರ್ವಜನಿಕರಿಂದ ಯಾವ ರೀತಿ ಬೆಂಬಲ ನೀಡುತ್ತಾರೆ ಎನ್ನುವುದನ್ನು ಕಾದು ನೋಡಬೇಕಾಗಿದೆ.

Reach Count: 
1