ER NEWS

News Subject: 
ಬೀದಿ ನಾಯಿಯೊಂದಿಗೆ ಸೆಕ್ಸ್‌: 19ರ ಬಾಲಕ ಅಂದರ್‌
Upload Image: 
Body: 

ವಿಚಿತ್ರ ಪ್ರಕರಣವೊಂದರಲ್ಲಿ ನಗರದ ನಿವಾಸಿಯೊಬ್ಬ ಬೀದಿನಾಯಿಯೊಂದಿಗೆ ಅಸಹಜ ಲೈಂಗಿಕ ಕ್ರಿಯೆ ನಡೆಸಿದ್ದು ಆತನನ್ನು ಪೊಲೀಸರು ಬಂಧಿಸಿದ್ದಾರೆ. ಪೊವೈ ಪ್ರದೇಶದ ನಿವಾಸಿ 19 ವರ್ಷದ ಯುವಕ ಕುಲದೀಪ್ ಕಟೋರಿಯಾ ಎಂಬಾತ ಬೀದಿ ನಾಯಿಯನ್ನು ಪಕ್ಕದ ಶೌಚಾಲಯಕ್ಕೆ ಎಳೆದುಕೊಂಡು ಹೋಗಿದ್ದು, ಅಲ್ಲಿ ಅಸಹಜ ಲೈಂಗಿಕ ಕ್ರಿಯೆ ನಡೆಸಿದ್ದಾನೆ ಎಂದು ಪ್ರತ್ಯಕ್ಷದರ್ಶಿಯೊಬ್ಬ ಪೊಲೀಸರಿಗೆ ದೂರು ನೀಡಿದ್ದರು. ಶುಕ್ರವಾರ ರಾತ್ರಿ ಕುಲದೀಪ್ ಕಟೋರಿಯಾ ಬೀದಿನಾಯಿಯೊಂದನ್ನು ಸಾರ್ವಜನಿಕ ಶೌಚಾಲಯದೊಳೆಗೆ ಕರೆದೊಯ್ದಿದ್ದ. ಈತನ ವಿಕೃತಿಯನ್ನು ಕಂಡ ದೂರುದಾರ ಮೊದಲು ನಾಯಿಯನ್ನು ರಕ್ಷಿಸಿದ್ದಾನೆ. ಈತನನ್ನು ಕಂಡು ಭಯಗೊಂಡ ಕಲದೀಪ್‌ ಯಾರಿಗೂ ಹೇಳದಂತೆ ಅಂಗಲಾಚಿದ್ದ.

ಕುಲದೀಪ್‌ನನ್ನು ಬಂಧಿಸಿದ ಮುಂಬಯಿ ಪೋವೈ ಪೊಲೀಸರು, ಆತನ ವಿರುದ್ಧ ಐಪಿಸಿ ಸೆಕ್ಷನ್ 377 ಕಾಯ್ದೆಯಡಿ (ಅಸಹಜ ಕ್ರಿಮಿನಲ್ ಪ್ರಕರಣ)ಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ.

Reach Count: 
1