ER NEWS

News Subject: 
ಕಾರ್ಪೋರೇಟರ್ ರಿಂದ ಪ್ರಧಾನಿ ವಿರುದ್ಧ ಅಸಹ್ಯದ ಮಾತು
Upload Image: 
Body: 

ಕಾಂಗ್ರೆಸ್ನ ನಗರ ಪಾಲಿಕೆ ಸದಸ್ಯರೊಬ್ಬರು ಪ್ರಧಾನಿಗಳ ವಿರುದ್ಧ ಅವಾಚ್ಯ ಶಬ್ದಗಳನ್ನ ಬಳಸಿ ಮಾತನಾಡಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದ್ದು ಸಚಿವ ರೋಷನ್ ಬೇಗ್ ಮೋದಿ ವಿರುದ್ಧ ಮಾತನಾಡಿದ್ದ ವಿವಾದವೇ ತಣ್ಣಾಗಾಗಿಲ್ಲ ಅಷ್ಟರಲ್ಲಿ ಇನ್ನೊಂದು ವಿವಾದ ಹೊರ ಬಂದಿದೆ.

ಮನೆ ಮನೆಗೆ ಕಾಂಗ್ರೆಸ್ ಕಾರ್ಯಕ್ರಮದಲ್ಲಿ ಹುಬ್ಬಳ್ಳಿ ಧಾರವಾಡ ನಗರ ಪಾಲಿಕೆ ಸದಸ್ಯ ಹಾಗೂ ಕೆಪಿಸಿಸಿ ಸದಸ್ಯ ದೀಪಕ್ ಚಿಂಚೋರೆ ಈ ಬಾರಿ ಎಡವಟ್ಟು ಮಾಡಿಕೊಂಡಿರುವ ರಾಜಕಾರಣಿಯಾಗಿದ್ದು. ದೀಪಕ್ ಚಿಂಚೋರೆ ತಮ್ಮ ನಾಲಿಗೆಯನ್ನು ಹರಿಬಿಟ್ಟಿರುವ ನಾಯಕ ಜನರಿಂದಲೇ ಮೋದಿ ಕೈಸಾ ಹೇ ಲುಚ್ಚಾ ಹೇ ಎಂದು ಕೂಗಿಸಿದ್ದಾರೆ. ಚಿಂಚೋರೆಯವರ ಈ ವರ್ತನೆಗೆ ತೀರ್ವ ಅಸಮಾಧಾನ ವ್ಯಕ್ತಪಡಿಸಿರುವ ಬಿಜೆಪಿ ಕಾರ್ಯಕರ್ತರು ಧಾರವಾಡದ ಜ್ಯುಬಲಿ ಸರ್ಕಲ್ನಲ್ಲಿ ಚಿಂಚೋರೆ ವಿರುದ್ಧ ರಸ್ತೆ ತಡೆದು ಪ್ರತಿಭಟಿಸಿದ್ದು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

Reach Count: 
2